ರಾಕ್ ಫೋರ್ಟ್ ಒಂದು ದೊಡ್ಡ ಕಲ್ಲಿನ ಬೆಟ್ಟದಮೇಲೆ ಕಟ್ಟಿರುವ ಕೋಟೆ. ಈ ಬೆಟ್ಟದ ತುದಿಯನ್ನು ಹತ್ತಲು ಸುಮಾರು ಅರ್ಧ ಗಂಟೆ ಸಮಯಬೇಕಾಗುತ್ತದೆ ಮತ್ತು ಹತ್ತುವಾಗ 'ಎತ್ತರದ ಭಯ' ಇರುವವವರಿಗೆ ಸ್ವಲ್ಪ ಕಷ್ಟವಾಗಬಹುದು. ಇದು ಅತ್ಯಂತ ಜನಪ್ರಿಯ ಕೋಟೆಗಳಲ್ಲಿ ಒಂದಾಗಿದೆ ಮತ್ತು ದೇಶದಲ್ಲಿರುವ ಕೋಟೆಗಳಲ್ಲಿ ಇದು ಅತ್ಯಂತ ಸುರಕ್ಷಿತ ಕೋಟೆ ಎಂದು ನಂಬಲಾಗಿದೆ.
ಈ ಕೋಟೆಯು 75 ಮೀಟರ್ಸ್ ಎತ್ತರವಿದ್ದು 9 ನೇ ಶತಮಾನದಲ್ಲಿ ಕಟ್ಟಲಾಗಿದೆ. ಈ ಕೋಟೆಯಲ್ಲಿರುವ ವೈಶೀಷ್ಟ್ಯತೆಯೆಂದರೆ, ಇದರೊಳಗಿರುವ ಒಂದು ಹಿಂದೂ ದೇವಸ್ಥಾನ ಮತ್ತು ಒಂದು ಮುಸ್ಲಿಂ ಮಸೀದಿ. ದೇವಸ್ಥಾನದಲ್ಲಿ ಮತ್ತು ಮಸೀದಿಯಲ್ಲಿ ಪೂಜೆ ಸಲ್ಲಿಸಲು ಎರಡು ಸಮುದಾಯದ ಭಕ್ತರು ಸಾಗರೋಪಾದಿಯಲ್ಲಿ ಕೋಟೆಯೊಳಗೆ ಬರುತ್ತಿರುತ್ತಾರೆ. ಬೆಟ್ಟದ ಸುತ್ತಲೂ ಮಾಡುವ ಮೆರವಣಿಗೆಯನ್ನು ಹೆಸರಾಂತ ’ಗಿರಿವಲಂ’ ಎಂದು ಕರೆಯುತ್ತಾರೆ ಮತ್ತು ಸಾವಿರಾರು ಭಕ್ತರು ಈ ಸ್ಥಳಕ್ಕೆ ಆಶಿರ್ವಾದವನ್ನು ಪಡೆಯಲು ಭೇಟಿ ನೀಡುತ್ತಾರೆ.