ಸಿದ್ದಾಪುರ- ತೋಟಗಳ ಪಟ್ಟಣ.

ಕೊಡಗು ಜಿಲ್ಲೆಯ ಈ ಸಿದ್ದಾಪುರ ತನ್ನ ಪ್ರಾಕೃತಿಕ ಸೌಂದರ್ಯಕ್ಕೆ ಹೆಸರುವಾಸಿ. ಈ ಪಟ್ಟಣವು ಸಮುದ್ರ ಮಟ್ಟಕ್ಕಿಂತ 1,850 ಅಡಿ ಎತ್ತರದಲ್ಲಿ ಇರುವುದರಿಂದ ತಂಪಾದ ಹವಾಮಾನವು ಇಲ್ಲಿನ ಸೌಂದರ್ಯಕ್ಕೆ ಇಮ್ಮಡಿ ಆಕರ್ಷಣೆ ಒದಗಿಸಿದೆ. ಈ ಪಟ್ಟಣವು ತನ್ನ ಅದ್ಭುತ ಸೌಂದರ್ಯದಿಂದ ಕೂಡಿರುವ ಪ್ರಾಕೃತಿಕ ದೃಶ್ಯ ವೈಭವಕ್ಕೆ ಹೆಸರುವಾಸಿಯಾಗಿದ್ದು ಚಾರಣ ಮತ್ತು ನಿಸರ್ಗ ವೀಕ್ಷಕರಿಗೆ ಮರೆಯಲಾಗದ ಅನುಭವ ನೀಡುತ್ತದೆ. ಅದರಲ್ಲಿಯೂ ಕಾಫಿ, ಏಲಕ್ಕಿ, ಮೆಣಸು ಮತ್ತು ಅನಾನಸ್ ತೋಟಗಳ ನಡುವೆ ನಡಿಗೆ ಅಥವಾ ಚಾರಣ ಮಾಡುವವರು ಎಂದೆಂದಿಗು ಈ ಊರನ್ನು ಮರೆಯಲಾರರು.

 

ಸಿದ್ದಾಪುರದ ಕುರಿತು.

ಈ ಪ್ರದೇಶವು ತನ್ನ ದೇವಾಲಯಗಳಿಗು ಸಹಾ ಹೆಸರುವಾಸಿ. ಇಲ್ಲಿನ ಲಕ್ಷ್ಮಿ ನಾರಾಯಣ ದೇವಾಲಯ, ಕೊಂಡಿ ಮಾರಿಕಾಂಬ ಮತ್ತು ಬಂಕೇಶ್ವರ ದೇವಾಲಯಗಳು ಪ್ರಮುಖ ಯಾತ್ರ ಸ್ಥಳಗಳಾಗಿ ಪ್ರಸಿದ್ಧಿಗೊಂಡಿವೆ.

ಸಿದ್ಧಪುರಕ್ಕೆ ಹತ್ತಿರವಿರುವ ಇನ್ನಿತರ ಹಳ್ಳಿಗಳು ಸಹಾ ಪ್ರವಾಸಿಗರನ್ನು ಮೂಕವಿಸ್ಮಿತಗೊಳಿಸುತ್ತವೆ. ಅಮ್ಮತಿ ಪಟ್ಟಣ ಸಿದ್ದಾಪುರಕ್ಕೆ ಸಮೀಪದಲ್ಲಿದ್ದು ತನ್ನ ತೋಟಗಳಿಗೆ ಹೆಸರುವಾಸಿಯಾಗಿದೆ. ಅಲ್ಲದೆ ಇಲ್ಲಿ ನಡೆಯುವ ಕೊಡವ ಕುಟುಂಬಗಳ  ವಾರ್ಷಿಕ ಹಾಕಿ ಉತ್ಸವ ಪ್ರತಿವರ್ಷ ಭಾರಿ ಜನಸಂದಣಿಯ ನಡುವೆ ಜರುಗುತ್ತದೆ. ಪೊಲ್ಲಿ ಬೆಟ್ಟ ಸಹಾ ಇಲ್ಲಿಗೆ ಸಮೀಪವಿದ್ದು ಬೌದ್ಧರ ದೇವಾಲಯ ಮತ್ತು ಕೋಟೆ ಹೊಂದಿದೆ.

ಸಿದ್ಧಾಪುರವು ತಂಪಾದ ಹವಾಮಾನವನ್ನು ಹೊಂದಿದ್ದು ಇಲ್ಲಿಗೆ ಭೇಟಿvಕೊಡಲು ಬೇಸಿಗೆ ಮತ್ತು ಮಳೆಗಾಲಕ್ಕೆ ಮುಂಚಿನ ದಿನಗಳು ಸೂಕ್ತವಾಗಿವೆ. ಅಕ್ಟೋಬರ್ ನಿಂದ ಜನವರಿವರೆಗಿನ ದಿನಗಳು ಸಹಾ ಇಲ್ಲಿಗೆ ಭೇಟಿಕೊಡಲು ಉತ್ತಮ ದಿನಗಳಾಗಿವೆ. ಬೆಂಗಳೂರು ಇಲ್ಲಿಗೆ ಹತ್ತಿರವಾದ ವಿಮಾನ ನಿಲ್ದಾಣವಾಗಿದ್ದು, ರೈಲಿನಲ್ಲಿ ತಲುಪಲು ಇಚ್ಛಿಸುವವರು ಮೈಸೂರಿಗೆ ಹೋಗಿ ಅಲ್ಲಿಂದ ಸ್ಥಳೀಯ ಬಸ್ ಹಿಡಿದು ಸಿದ್ಧಾಪುರ ತಲುಪಬಹುದು.

Please Wait while comments are loading...