ಭಟ್ಕಳ - ಇತಿಹಾಸದ ಆಳ ಹೊಂದಿರುವ ಭೂಮಿ

ಕರ್ನಾಟಕ ರಾಜ್ಯದ ಪ್ರಾಚೀನ ಮತ್ತು ಅತೀ ಶ್ರೀಮಂತ ಪಟ್ಟಣವೆಂದು ಭಟ್ಕಳ ಹೆಸರಾಗಿದೆ. ಅಲ್ಲದೇ ದೇಶದ ಹಳೆಯ ಬಂದರು ಎಂದು ಕೂಡ ಗುರುತಿಸಿಕೊಂಡಿದೆ. (ಉತ್ತರ ಕನ್ನಡ) ಕಾರವಾರ ಜಿಲ್ಲೆಯ ವ್ಯಾಪ್ತಿಯಲ್ಲಿರುವ ಸುಂದರ ಸಮುದ್ರ ತೀರ ಹೊಂದಿರುವ ಭಟ್ಕಳ ಪಟ್ಟಣವು ಕಾರವಾರದಿಂದ 130 ಕಿ.ಮೀ. ದೂರದಲ್ಲಿದೆ. ಭಟ್ಕಳ ಪಟ್ಟಣವು ರಾಷ್ಟ್ರೀಯ ಹೆದ್ದಾರಿ ನಂ.17 ರ ಮಾರ್ಗದಲ್ಲಿದ್ದು ಇಲ್ಲಿಗೆ ಕೊಂಕಣ ರೈಲು ಮಾರ್ಗದ ಮೂಲಕವೂ ತಲುಪಬಹುದಾಗಿದೆ.

 

ಭೂತಕಾಲದ ಒಂದು ನೋಟ

ಭಟ್ಕಳ ನಗರವು ಪೌರಾಣಿಕ ಹಿನ್ನೆಲೆ ಹೊಂದಿದೆ. ಹೊಯ್ಸಳರ ಆಳ್ವಿಕೆಗೆ ಒಳಪಟ್ಟಿದ್ದ ಈ ಪಟ್ಟಣವು ಹಲವಾರು ಬಾರಿ ದಾಳಿಗೊಳಪಟ್ಟಿರುವ ಕುರುಹು ಇನ್ನೂ ಇಲ್ಲಿ ಕಾಣಸಿಗುತ್ತವೆ. ವಿಜಯ ನಗರ ಸಾಮ್ರಾಜ್ಯದ ಮತ್ತು ಚೋಳರ ರಾಜಾಳ್ವಿಕೆಯ ಕುರುಹುಗಳು ಇಲ್ಲಿ ಇನ್ನೂ ಇವೆ. ಪೋರ್ಚುಗೀಸ್ ರ ಕಾಲದಲ್ಲಿನ ಮತ್ತು ಟಿಪ್ಪು ಸುಲ್ತಾನ್ ಕೂಡ ಬ್ರಿಟಿಷ್ ರಿಂದ ಸೋಲುವವರೆಗೆ ಭಟ್ಕಳ ಅವನ ಆಳ್ವಿಕೆಯಲ್ಲೇ ಇತ್ತೆನ್ನುವುದು ಇತಿಹಾಸದಲ್ಲಿ ದಾಖಲಾಗಿದೆ.

ಹೀಗೆ ಹಲವಾರು ರಾಜರ ಆಳ್ವಿಕೆಯಿಂದ ಭಟ್ಕಳ ಪಟ್ಟಣವು ವಿಶೇಷತೆ ಪಡೆದುಕೊಂಡಿದೆ ಎನ್ನಬಹುದು. ಇಲ್ಲಿ ಹಲವಾರು ದೇವಸ್ಥಾನಗಳು, ಮಸೀದಿಗಳು, ಜೈನ ಬಸದಿಗಳು, ಚರ್ಚ್ ಗಳು ಇತಿಹಾಸದಲ್ಲಿ ಆಳಿಹೋದ ರಾಜ ಮನೆತನದ ಆಡಳಿತಕ್ಕೆ ಸಾಕ್ಷಿಯಾಗಿವೆ.

ಇಲ್ಲಿಯ ಜಾಮೀಯಾ ಮಸೀದಿ, ಖಲೀಫಾ ಮಸೀದಿ ಮತ್ತು ನೂರ್ ಮಸೀದಿ ಬಹಳಷ್ಟು ಮಹತ್ವದ ಮಸೀದಿಗಳಾಗಿವೆ. ಇಲ್ಲಿಯ ಕೇತಪ್ಪಯ್ಯ ನಾರಾಯಣ ದೇವಸ್ಥಾನವು ಇಲ್ಲಿರುವುದು ಈ ಪಟ್ಟಣದ ವಿಶೇಷ ಎನ್ನಬಹುದು.

ಸೂರ್ಯೋದಯ ಮತ್ತು ಸೂರ್ಯಾಸ್ತ ನೋಡಲು ಭಟ್ಟಳ ಪಟ್ಟಣದಲ್ಲಿ ಹಲವಾರು ಸುಂದರ ಸಮುದ್ರತೀರಗಳಿವೆ. ಇಂಥ ಹಲವಾರು ವಿಶೇಷತಗಳನ್ನೊಳಗೊಂಡ ಭಟ್ಕಳ ಪಟ್ಟಣದ ಬೀಚ್ ಗಳ ಸೌಂದರ್ಯ ಸವಿಯಲು ಹಲವಾರು ಪ್ರವಾಸಿಗರು ಬರುತ್ತಾರೆ.

ಭಟ್ಕಳ ಪಟ್ಟಣಕ್ಕೆ ರೈಲು, ರಸ್ತೆ ಮತ್ತು ವಾಯುಮಾರ್ಗದ ಮೂಲಕ ಕೂ ತಲುಪಬಹುದು. ಮಂಗಳೂರಿನ ವಿಮಾನ ನಿಲ್ದಾಣ ಭಟ್ಕಳಕ್ಕೆ ಸಮೀಪದಲ್ಲಿದೆ. ಆಗಸ್ಟ್ ನಿಂದ ಅಕ್ಟೋಬರ್ ತಿಂಗಳಿನಲ್ಲಿ ಒಳ್ಳೆಯ ಹವಾಮಾನ ಇಲ್ಲಿರುವುದರಿಂದ ಪ್ರವಾಸಿಗರು ಸಾಕಷ್ಟು ಸಂಖ್ಯೆಯಲ್ಲಿ ಭೇಟಿ ನೀಡುತ್ತಾರೆ.

Please Wait while comments are loading...