ಜಾಮೀಯಾ ಮಸೀದಿ, ಭಟ್ಕಳ

ಭಟ್ಕಳದ ಮುಖ್ಯ ಆಕರ್ಷಣೆಯೆಂದರೆ ಇಲ್ಲಿನ ಜಾಮೀಯಾ ಮಸೀದಿ. ಈ ಮಸೀದಿಗೆ ಪ್ರತಿವರ್ಷ ಲಕ್ಷಾಂತರ ಜನ ಭೇಟಿ ನೀಡುತ್ತಾರೆ. ಇತ್ತೀಚೆಗೆ ಈ ಮಸೀದಿಯ ಗೋಪುರವನ್ನು ಬಂಗಾರದಿಂದ ಅಲಂಕರಿಸಲಾಗಿದೆ. ಬಂಗಾರದ ಮಸೀದಿ ಎಂದೇ ಪ್ರಸಿದ್ಧಿಯಾಗಿರುವ ಇದು ಮೂರು ಅಂತಸ್ತು ಒಳಗೊಂಡಿದೆ. ಏಕಕಾಲದಲ್ಲಿ 10 ಸಾವಿರ ಜನ ಸೇರಬಹುದಾದಷ್ಟು ವಿಶಾಲವಾಗಿದೆ. ಮಸೀದಿಯ ಹತ್ತಿರವೇ ಮಸೀದಿಗೆ ಸಂಬಂಧಪಟ್ಟ ವಿಚಾರಣೆಗೆ ಕಚೇರಿ ಇದೆ ಪ್ರವಾಸಿಗರು ಸದುಪಯೋಗ ಪಡೆದುಕೊಳ್ಳಬಹುದು.

Please Wait while comments are loading...