Search
 • Follow NativePlanet
Share
ಮುಖಪುಟ » ಸ್ಥಳಗಳು» ಮರವಂತೆ

ಮರವಂತೆ - ಕಡಲ ಕಿನಾರೆಯಲ್ಲಿ ವಿಹರಿಸಿ

32

ಕರ್ನಾಟಕ ರಾಜ್ಯದ ದಕ್ಷಿಣ ಕೆನರಾ ಜಿಲ್ಲೆಯಲ್ಲಿರುವ ಮರವಂತೆ ಪಟ್ಟಣವು ತನ್ನ ಸುಂದರವಾದ ಬೀಚುಗಳಿಗಾಗಿ ಪ್ರಸಿದ್ಧವಾಗಿದೆ. ಈ ಊರು ತನ್ನ ಬಲಬದಿಗೆ ಅರಬ್ಬೀ ಸಮುದ್ರವನ್ನು ಹೊಂದಿದ್ದರೆ, ಎಡಗಡೆ ಸೌಪರ್ಣಿಕಾ ನದಿಯನ್ನು ಹೊಂದಿದೆ. ಈ ಬೀಚು ಕುಂದಾಪುರದ ಬಳಿಯಿದ್ದು ಉಡುಪಿಯಿಂದ 50 ಕಿ.ಮೀ ಮತ್ತು ಬೆಂಗಳೂರಿನಿಂದ 450 ಕಿ.ಮೀ ದೂರದಲ್ಲಿದೆ.

 

ಸ್ವರ್ಗ ಸದೃಶ್ಯ ಶಾಂತಿಯ ನೆಲೆವೀಡು

ಇಲ್ಲಿನ ಬೀಚು ಬಿಳಿಯ ಮರಳಿನಿಂದ ಕೂಡಿದ್ದು ಮೈಲುಗಟ್ಟಲೆ ಇರುವುದರಿಂದಾಗಿ ಇದನ್ನು ಕನ್ಯೆ ಬೀಚು ( ವರ್ಜಿನ್ ಬೀಚ್ ) ಎಂದೆ ಕರೆಯಲ್ಪಡುತ್ತದೆ. ಪ್ರವಾಸಿಗರ ಅಚ್ಚು ಮೆಚ್ಚಿನ ತಾಣವಾಗಿರುವ ಈ ಬೀಚು ಕೊಲ್ಲೂರು ಮತ್ತು ಕೊಡಚಾದ್ರಿ ಬೆಟ್ಟಗಳಿಗೆ ಸಮೀಪದಲ್ಲಿದೆ. ರಾಷ್ಟ್ರೀಯ ಹೆದ್ದಾರಿ 17 ಈ ಕಡಲ ತೀರದಿಂದ ಕೇವಲ 100 ಮೀಟರ್ ದೂರದಲ್ಲಿದ್ದು, ನಿಮ್ಮ ಪ್ರಯಾಣ ಸುಖಕರವಾಗಿಸಲು ನಿಮ್ಮ ನೆರವಿಗೆ ಬರುತ್ತದೆ.

 ನೀವೇನಾದರು ಈ ಬೀಚಿಗೆ ಬಂದರೆ ಒಂದೆಡೆ ಇರುವ ಕೊನೆಯಿರದ ಬೀಚಿನ ಮರಳಿನ ರಾಶಿ, ಮತ್ತೊಂದೆಡೆ ಸಮುದ್ರ, ಈ ಪ್ರದೇಶದ ಪ್ರಶಾಂತತೆಯನ್ನು ಹೆಚ್ಚಿಸಿರುವ ತಾಳೆಮರಗಳೆಲ್ಲವು ನಿಮ್ಮ ಭೇಟಿಯನ್ನು ಮರೆಯಲಾಗದ ಅನುಭವವನ್ನಾಗಿಸುತ್ತವೆ. ಈ ಬೀಚಿನ ದಕ್ಷಿಣ ಭಾಗದೆಡೆಗೆ ತ್ರಾಸಿ ಎನ್ನುವ ಸ್ಥಳವಿದೆ. ಇನ್ನೊಂದೆಡೆ ಸೌಪರ್ಣಿಕಾ ನದಿ ಹಾಗು ಪಡುಕೋಣೆ ಗ್ರಾಮವಿದೆ.

ಮರವಂತೆಯು ಕರಾವಳಿಯ ವಾಯುಗುಣವನ್ನು ಹೊಂದಿದ್ದು, ಬೆಚ್ಚನೆಯಿಂದ ಕೂಡಿರುವ ಹಾಗು ಕಠಿಣವಾದ ಬಿಸಿಲು ಎರಡರ ಅನುಭವವನ್ನು ಒದಗಿಸುತ್ತದೆ, ಈ ಊರು ಆರ್ದ್ರತೆಯಿಂದ ಕೂಡಿರುವ ಬೆಚ್ಚನೆಯ ಬೇಸಿಗೆಯನ್ನು ಮತ್ತು ಹಿತವಾದ ಚಳಿಗಾಲದ ಅನುಭವವನ್ನು ಒದಗಿಸುತ್ತದೆ. ಮರವಂತೆಗೆ ಹೋಗಲು ಸೆಪ್ಟಂಬರ್ ನಿಂದ ಮಾರ್ಚ್ ವರೆಗಿನ ಅವಧಿ ಅತ್ಯಂತ ಸೂಕ್ತವಾಗಿದೆ. ಆಗ ಇಲ್ಲಿನ ಬೀಚಿನಲ್ಲಿ ಈಜಾಡಬಹುದು. ಇಲ್ಲಿ ಕನ್ನಡ ಮತ್ತು ತುಳು ಎರಡು ಭಾಷೆಗಳನ್ನು ಸಾಮಾನ್ಯವಾಗಿ ಮಾತನಾಡುತ್ತಾರೆ.

ಈ ಊರಿಗೆ ವಿಮಾನದಲ್ಲಿ, ರೈಲಿನಲ್ಲಿ ಮತ್ತು ರಸ್ತೆಯ ಮೂಲಕ ಸುಲಭವಾಗಿ ತಲುಪಬಹುದು. ಮಂಗಳೂರಿನ ಬಜ್ಪೆ ವಿಮಾನ ನಿಲ್ದಾಣ ಮತ್ತು ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವು ಇಲ್ಲಿಗೆ ಸಮೀಪದ ವಿಮಾನ ನಿಲ್ದಾಣಗಳಾಗಿವೆ. ಮಂಗಳೂರು ವಿಮಾನ ನಿಲ್ದಾಣದಿಂದ ನೀವು ಬಸ್ಸು ಅಥವಾ ಟ್ಯಾಕ್ಸಿಗಳ ಮೂಲಕ ಮರವಂತೆಗ ತಲುಪಬಹುದು.

 ಮಂಗಳೂರು ರೈಲು ನಿಲ್ದಾಣವು ಇಲ್ಲಿಗೆ ಸಮೀಪದ ರೈಲು ಜಂಕ್ಷನ್ ಆಗಿದೆ. ಮರವಂತೆಗೆ ಕರ್ನಾಟಕದ ಇತರ ಭಾಗಗಳಿಂದ ರಸ್ತೆ ಮತ್ತು ರಸ್ತೆ ಸಾರಿಗೆಯ ವ್ಯವಸ್ಥೆ ಉತ್ತಮವಾಗಿದೆ. ಈಗಾಗಿ ನೀವು ಬಸ್ಸು ಅಥವಾ ಖಾಸಗಿ ವಾಹನಗಳ ಮೂಲಕ ಸುಲಭವಾಗಿ ತಲುಪಬಹುದು.

ಇಲ್ಲಿ ಏನು ನೋಡಬಹುದು ಅಥವಾ ಮಾಡಬಹುದು

ಕರಾವಳಿಯ ಊರಾದ ಮರವಂತೆಯು ಕಡಲ ತೀರದ ಚಟುವಟಿಕೆಗಳಾದಂತಹ ಈಜು, ಸ್ನೊರ್ಕೆಲಿಂಗ್ ಮತ್ತು ಆಳ ಸಮುದ್ರ ಈಜು ( ಸ್ಕೂಬ ಡೈವಿಂಗ್) ಹಾಗು ಇತರೆ ಚಟುವಟಿಕೆಗಳಿಗೆ ಅವಕಾಶ ಒದಗಿಸಿ ನಿಮ್ಮ ಮೈ ಮನಸ್ಸನ್ನು ತಣಿಸುತ್ತದೆ. ಕೊಡಚಾದ್ರಿ ಪರ್ವತಗಳು ತನ್ನ ದುರ್ಗಮವಾದ ಬೆಟ್ಟಗಳಿಂದಾಗಿ ಅನುಭವಿ ಮತ್ತು ವೃತ್ತಿಪರ ಚಾರಣಿಗರನ್ನು ಕೈಬೀಸಿ ಕರೆಯುತ್ತಿವೆ. ಪ್ರವಾಸಿಗರು ಇಲ್ಲಿನ ಸೌಪರ್ಣಿಕಾ ನದಿಯಲ್ಲಿ ದೋಣಿಯಾನವನ್ನು ಕೈಗೊಳ್ಳಬಹುದು ಮತ್ತು ಈ ನದಿಯಲ್ಲಿ ಸ್ನಾನ ಮಾಡುವುದರಿಂದ ಆರೋಗ್ಯವರ್ಧಿಸುತ್ತದೆಯೆಂದು ದಂತಕಥೆಗಳು ಪುಷ್ಟಿಕರಿಸುತ್ತವೆ.

ಮರವಂತೆಯ ಸುತ್ತಮುತ್ತಲ ನೋಡಲೇಬೇಕಾದ ಸ್ಥಳಗಳ ಪಟ್ಟಿಯಲ್ಲಿ ಮೂಕಾಂಬಿಕಾ ದೇವಾಲಯದಿಂದ ಪ್ರಸಿದ್ಧವಾಗಿರುವ ಕೊಲ್ಲೂರು, ಕುಂದಾಪುರ, ಕಂಚುಗೋಡು, ಬೆಳಕ ತೀರ್ಥ ಜಲಪಾತ ಮತ್ತು ಬೈಂದೂರು ( ಸೂರ್ಯಾಸ್ತ ಮಾನದ ದೃಶ್ಯಕ್ಕೆ ಪ್ರಸಿದ್ಧವಗಿದೆ) ಗಳು ಸೇರುತ್ತವೆ. ಕಪ್ಪುಅಗ್ನಿ ಪರ್ವತ ಶಿಲೆಗಳಿಂದ ಕೂಡಿರುವ ಸೆಂಟ್ ಮೇರಿಸ್ ದ್ವೀಪವು ಇಲ್ಲಿಗೆ ಸಮೀಪದ ಸ್ಥಳವಾಗಿದೆ.

 ಮರವಂತೆಯು ಉತ್ತಮ ವಸತಿ ಸೌಲಭ್ಯಗಳಿಂದ ಕೂಡಿದ್ದು ಪ್ರವಾಸಿಗರು ವಿಶ್ರಾಂತಿ ಪಡೆಯಲು ಮತ್ತು ವಿಹರಿಸಲು ಉತ್ತಮ ಸ್ಥಳವಾಗಿದೆ.

ಮರವಂತೆ ಪ್ರಸಿದ್ಧವಾಗಿದೆ

ಮರವಂತೆ ಹವಾಮಾನ

ಮರವಂತೆ
25oC / 78oF
 • Sunny
 • Wind: NW 8 km/h

ಉತ್ತಮ ಸಮಯ ಮರವಂತೆ

 • Jan
 • Feb
 • Mar
 • Apr
 • May
 • Jun
 • July
 • Aug
 • Sep
 • Oct
 • Nov
 • Dec

ತಲುಪುವ ಬಗೆ ಮರವಂತೆ

 • ರಸ್ತೆಯ ಮೂಲಕ
  ಕೆ ಎಸ್ ಆರ್ ಟಿ ಸಿ( ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ ) ಯ ಹಲವು ಬಸ್ಸುಗಳು ಸಮೀಪದ ನಗರ ಮತ್ತು ಪಟ್ಟಣಗಳಿಂದ ಮರವಂತೆಗೆ ಹೊರಡುತ್ತವೆ. ಗೊಕರ್ಣ ( 130 ಕಿ.ಮೀ), ಗೋವಾ ( 275 ಕಿ.ಮೀ) ,ಮತ್ತು ಬೆಂಗಳೂರಿನಿಂದ ( 450 ಕಿ.ಮೀ) ಹಲವು ಸುವಿಹಾರಿ ಬಸ್ಸುಗಳು ನಿಯಮಿತವಾಗಿ ಮರವಂತೆಗೆ ಹೋಗುತ್ತಿರುತ್ತವೆ.
  ಮಾರ್ಗಗಳ ಹುಡುಕಾಟ
 • ರೈಲಿನ ಮೂಲಕ
  ಕುಂದಾಪುರ ರೈಲುನಿಲ್ದಾಣವು ಮರವಂತೆಗೆ ಸಮೀಪದ ರೈಲುನಿಲ್ದಾಣವಾಗಿದ್ದು ಅದು ಇಲ್ಲಿಂದ 18 ಕಿ.ಮೀ ದೂರದಲ್ಲಿದೆ. ಆದರೆ ಈ ನಿಲ್ದಾಣವು ಪ್ರಮುಖ ರೈಲು ನಿಲ್ದಾಣಗಳ ಜೊತೆಗೆ ಸಂಪರ್ಕ ಹೊಂದಿಲ್ಲ. ಮಂಗಳೂರು ರೈಲು ಜಂಕ್ಷನ್ ನಿಲ್ದಾಣವು ಇಲ್ಲಿಗೆ ಸಮೀಪದ ಮತ್ತೊಂದು ರೈಲು ನಿಲ್ದಾಣವಾಗಿದ್ದು,ಇಲ್ಲಿಂದ 110 ಕಿ.ಮೀ ದೂರದಲ್ಲಿದೆ. ಪ್ರವಾಸಿಗರು ಇಲ್ಲಿಂದ ಬಾಡಿಗೆ ವಾಹನ ಅಥವಾ ಬಾಡಿಗೆ ಟ್ಯಾಕ್ಸಿ ಗಳ ಮೂಲಕ ಮರವಂತೆಗೆ ತಲುಪಬಹುದು.
  ಮಾರ್ಗಗಳ ಹುಡುಕಾಟ
 • ಆಕಾಶದ ಮೂಲಕ
  ಮಂಗಳೂರಿನ ಬಜ್ಪೆ ವಿಮಾನ ನಿಲ್ದಾಣವು ಮರವಂತೆಗೆ ಅತ್ಯಂತ ಹತ್ತಿರದ ವಿಮಾನ ನಿಲ್ದಾಣವಾಗಿದ್ದು ದೇಶಿಯ ಮತ್ತು ವಿದೇಶಿ ಪ್ರವಾಸಿಗರು ಮರವಂತೆ ತಲುಪಲು ನೆರವಾಗುತ್ತದೆ. ಇದು ಮರವಂತೆಯನ್ನು ದೇಶಿಯ ಮತ್ತು ಅಂತಾರಾಷ್ಟ್ರೀಯ ನಗರಗಳೊಂದಿಗೆ ಸಂಪರ್ಕಿಸುತ್ತದೆ. ಇದು ಮರವಂತೆಯಿಂದ 110 ಕಿ,ಮೀ ದೂರದಲ್ಲಿದೆ.
  ಮಾರ್ಗಗಳ ಹುಡುಕಾಟ
One Way
Return
From (Departure City)
To (Destination City)
Depart On
18 Feb,Mon
Return On
19 Feb,Tue
Travellers
1 Traveller(s)

Add Passenger

 • Adults(12+ YEARS)
  1
 • Childrens(2-12 YEARS)
  0
 • Infants(0-2 YEARS)
  0
Cabin Class
Economy

Choose a class

 • Economy
 • Business Class
 • Premium Economy
Check In
18 Feb,Mon
Check Out
19 Feb,Tue
Guests and Rooms
1 Person, 1 Room
Room 1
 • Guests
  2
Pickup Location
Drop Location
Depart On
18 Feb,Mon
Return On
19 Feb,Tue
 • Today
  Maravanthe
  25 OC
  78 OF
  UV Index: 12
  Sunny
 • Tomorrow
  Maravanthe
  25 OC
  77 OF
  UV Index: 12
  Partly cloudy
 • Day After
  Maravanthe
  24 OC
  76 OF
  UV Index: 12
  Partly cloudy