Search
  • Follow NativePlanet
Share
ಮುಖಪುಟ » ಸ್ಥಳಗಳು » ಮರವಂತೆ » ಆಕರ್ಷಣೆಗಳು » ಹಟ್ಟಿಯಂಗಡಿ ಸಿದ್ಧಿವಿನಾಯಕ ದೇವಾಲಯ

ಹಟ್ಟಿಯಂಗಡಿ ಸಿದ್ಧಿವಿನಾಯಕ ದೇವಾಲಯ, ಮರವಂತೆ

1

ಪ್ರವಾಸಿಗರು ಮರವಂತೆಗೆ ಹೋಗುವ ಹಾದಿಯಲ್ಲಿ ವಾರಾಹಿ ನದಿಯ ದಂಡೆಯಲ್ಲಿರುವ ಹಟ್ಟಿಯಂಗಡಿ ಸಿದ್ಧಿವಿನಾಯಕ ದೇವಾಲಯಕ್ಕೆ ಒಮ್ಮೆ ಭೇಟಿಕೊಡಬಹುದು. ಹಟ್ಟಿಯಂಗಡಿ ಮರವಂತೆ ಪಟ್ಟಣದಿಂದ 14.3 ಕಿ.ಮೀ ದೂರದಲ್ಲಿರುವ ಒಂದು ಸಣ್ಣ ಗ್ರಾಮವಾಗಿದೆ. ಈ ದೇವಾಲಯಕ್ಕೆ ಬರುವ ಯಾತ್ರಾರ್ಥಿಗಳಿಗೆ ಪ್ರತಿದಿನ ಅನ್ನದಾಸೋಹವನ್ನು ಏರ್ಪಡಿಸಲಾಗಿರುತ್ತದೆ. ಈ ಪ್ರಾಂತ್ಯದ ಎಲ್ಲ ಹಿಂದು ಧರ್ಮಿಯರಿಗು ಈ ದೇವಾಲಯವು ಒಂದು ಪ್ರಮುಖ ದೇವಾಲಯವಾಗಿದೆ.ಈ ದೇವಾಲಯವನ್ನು ಗಣಪತಿಗಾಗಿ ಅಳುಪ ರಾಜರು ಸುಮಾರು 8 ನೇ ಶತಮಾನದಲ್ಲಿ ನಿರ್ಮಿಸಿದರು. ಮುಂದೆ ಇದು ಸಿದ್ಧಿವಿನಾಯಕ ಎಂದು ಖ್ಯಾತಿ ಪಡೆಯಿತು. ಈ ದೇವಾಲಯದಲ್ಲಿನ ಮೂರ್ತಿಯು 2.5 ಅಡಿ ಎತ್ತರವಿದ್ದು, ಸಾಲಿಗ್ರಾಮ ಶಿಲೆಯಲ್ಲಿ ಕೆತ್ತಲ್ಪಟ್ಟಿದೆ ಹಾಗು ಹಲವು ಆಭರಣಗಳನ್ನು ಹೊಂದಿದೆ. ಈ ಗಣಪತಿಯ ವಿಗ್ರಹದ ಮತ್ತೊಂದು ವಿಶೇಷವೆಂದರೆ ಇದರ ಜಡೆ ಕೂದಲು ಮತ್ತು ಸೊಂಡಿಲು ಎಡಮುರಿಯಾಗಿದ್ದು ಎಲ್ಲವು ಎಡಕ್ಕೆ ಬಾಗಿದೆ. ಈ ವಿಶೇಷತೆ ಇರುವ ಏಕೈಕ ಗಣಪತಿಯೆಂಬ ಖ್ಯಾತಿಯನ್ನು ಇದು ಪಡೆದಿದೆ.ಇಲ್ಲಿನ ಹೇಳಿಕೆಗಳಂತೆ ಎರಡು ಕೈಗಳಿರುವ ಬಾಲ ಗಣೇಶನ ಮೂರ್ತಿಯು ಇಲ್ಲಿನ ನೆಲಮಾಳಿಗೆಯಲ್ಲಿ ನಿಂತಿದ್ದು ತನ್ನ ಬಲಗೈಯಲ್ಲಿ ಮೋದಕಗಳನ್ನು ತುಂಬಿರುವ ಪಾತ್ರೆಯನ್ನು ಹಿಡಿದಿದ್ದಾನೆ. ಕೆಲವರ ನಂಬಿಕೆಯಂತೆ ಈ ಮೂರ್ತಿಯ ಗಾತ್ರ ವರ್ಷದಿಂದ ವರ್ಷಕ್ಕೆ ಬೆಳೆಯುತ್ತಲೆ ಇದೆಯಂತೆ. ಈ ನಂಬಿಕೆಗೆ ಇಂಬುಕೊಡುವಂತೆ ಈ ಮೂರ್ತಿಯು ಈಗಾಗಲೇ ತನ್ನ ಬೆಳ್ಳಿಯ ಕವಚಕ್ಕಿಂತ ದೊಡ್ಡದಾಗಿದೆ.

One Way
Return
From (Departure City)
To (Destination City)
Depart On
20 Apr,Sat
Return On
21 Apr,Sun
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
20 Apr,Sat
Check Out
21 Apr,Sun
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
20 Apr,Sat
Return On
21 Apr,Sun