ಯಲ್ಲಾಪುರದಿಂದ 3 ಕಿ.ಮೀ ದೂರದಲ್ಲಿರುವ ಪ್ರಸಿದ್ಧ ಕಾಳಿಮಠ ದೇವಾಲಯ ಕಲ್ಲಿನಿಂದ ನಿರ್ಮಿಸಲಾಗಿದ್ದು, ಈ ಊರಿನ ಪ್ರಮುಖ ಆಕರ್ಷಣೆಗಳಲ್ಲಿ ಒಂದಾಗಿ ಸ್ಥಾನ ಪಡೆದಿದೆ. ಪ್ರವಾಸಿಗರು ಇಲ್ಲಿಗೆ ಭೇಟಿಕೊಟ್ಟಾಗ ಇಲ್ಲಿನ ಅಸಂಖ್ಯಾತ ಕಂಬಗಳಲ್ಲಿನ ಅದ್ವಿತೀಯವಾದ ಕೆತ್ತನೆಗಳನ್ನು ಮತ್ತು ಕನ್ನಡ ಭಾಷೆಯಲ್ಲಿನ ಕೆಲವು ಶಾಸನಗಳನ್ನು ವೀಕ್ಷಿಸಬಹುದು. ಈ ದೇವಾಲಯವು 12ನೇ ಶತಮಾನದಲ್ಲಿ ನಿರ್ಮಾಣಗೊಂಡಿದ್ದು, ಒಂದು ಶಿವಲಿಂಗ (ನುಣುಪಾದ ಕಲ್ಲಿನಿಂದ ಮಾಡಲಾದದ್ದು) ಮತ್ತು ನಂದಿ ವಿಗ್ರಹಗಳನ್ನು ಹೊಂದಿದೆ.