ಯಲ್ಲಾಪುರಕ್ಕೆ ಭೇಟಿಕೊಡುವ ಯಾತ್ರಿಕರು ಇಲ್ಲಿನ ಜೇನುಕಲ್ಲು ಗುಡ್ಡಕ್ಕೆ ಭೇಟಿಕೊಡುವುದು ಅತ್ಯವಶ್ಯಕ. ಇದು ಯಲ್ಲಾಪುರದಿಂದ 20 ಕಿ.ಮೀ ದೂರದಲ್ಲಿದ್ದು ಸೂರ್ಯಾಸ್ತಮಾನವನ್ನು ವೀಕ್ಷಿಸುವ ಸ್ಥಳಕ್ಕಾಗಿ ಖ್ಯಾತಿ ಹೊಂದಿದೆ. 450 ಮೀಟರ್ ಎತ್ತರದಲ್ಲಿರುವ ಈ ಸ್ಥಳವು ಪಶ್ಚಿಮ ಘಟ್ಟದ ಭವ್ಯ ಪ್ರಾಕೃತಿಕ ವೈಭವವನ್ನು, ಸಾಲಾಗಿ ಒಂದರ ಹಿಂದೆ ಜೋಡಿಸಿಟ್ಟಂತೆ ಕಾಣುವ ಬೆಟ್ಟಗಳನ್ನು, ಅವುಗಳ ಹಸಿರಿನ ಸಿರಿಯನ್ನು ಮತ್ತು ನಯನ ಮನೋಹರವಾದ ಸೂರ್ಯಾಸ್ತಮಾನದ ದೃಶ್ಯವನ್ನು ಪ್ರವಾಸಿಗರಿಗೆ ಒದಗಿಸುತ್ತದೆ. ಪ್ರವಾಸಿಗರು ಇಲ್ಲಿಗೆ ತಲುಪುವಾಗ ಬೇಡ್ತಿ ನದಿಯು ಅರಬ್ಬಿ ಸಮುದ್ರ ಸೇರುವ ಸ್ಥಳವನ್ನು ಈ ತಾಣದ ಹಿನ್ನಲೆಯಲ್ಲಿ ಕಣ್ತುಂಬಿಕೊಳ್ಳಬಹುದು. ಬಳೆಕಲ್ಲು ಗುಡ್ಡ ಮತ್ತು ಕೊಡೆಕಲ್ಲು ಗುಡ್ಡ ಗಳು ಜೇನುಕಲ್ಲು ಗುಡ್ಡದ ಸಮೀಪದಲ್ಲಿಯೇ ಇರುವ ಪ್ರಸಿದ್ಧ ಬೆಟ್ಟಗಳಾಗಿವೆ.