Search
 • Follow NativePlanet
Share

ಬಾಗಾ ಬೀಚ್ : ಮೀತಿಯಿಲ್ಲದ ಆನಂದ...

19

ಇದೊಂದು ಉಲ್ಲಾಸಭರಿತ ಬೀಚ್. ಉತ್ತಮವಾದ ಬೀಚ್ ಶ್ಯಾಕನಿಂದ ಹಿಡಿದು ಉತ್ತಮವಾದ ಉಪಹಾರಗೃಹಗಳು, ಉತ್ತಮವಾದ ಹೊಟೆಲಗಳು, ಉತ್ತಮವಾದ ವಸತಿ ಸೌಕರ್ಯ ಮತ್ತು ನಿಜವಾದ ಜರ್ಮನ ಶೈಲಿಯ ಬೇಕರಿ.... ಏನೆ ಇರಲಿ, ಎಲ್ಲವನ್ನು ಇಲ್ಲಿ ಕಾಣಬಹುದು. ಕೇವಲ ಆಕಾರದಿಂದ ಮಾತ್ರವಷ್ಟೆ ಅಲ್ಲದೆ ಅತ್ಯದ್ಭುತ ಅನುಭವಗಳ ಭಂಡಾರದಲ್ಲೂ ದೊಡ್ಡದಾಗಿರುವ ಇಲ್ಲಿ ಅನೇಕ ಬಗೆಯ ಜಲಕ್ರೀಡೆಗಳ ಆಟಗಳನ್ನು ಆನಂದಿಸಬಹುದು. ಅನೇಕ ಸಾಹಸ ಕ್ರೀಡೆ ಆಯೋಜಕರು ತಮ್ಮಲ್ಲಿ ಟಿಕೇಟ ಕೊಂಡುಕೊಳ್ಳಲು ನಿಮ್ಮ ಹತ್ತಿರ ಹಾತೊರೆಯುತ್ತಿರುವುದನ್ನು ನೀವು ಗಮನಿಸಬಹುದು.

ಬಾಗಾ ಬೀಚವು ಪ್ಯಾರಸೇಲಿಂಗ್, ವಾಟರ್ ಬೈಕ್ ರೈಡ್ ಮತ್ತು ಬನಾನಾ ರೈಡಗಳಿಗೆ ಹೆಸರುವಾಸಿಯಾಗಿದೆ.ಜನಪ್ರೀಯವಾದ 'ಕ್ಯಾಫೆ ಬ್ರಿಟ್ಟೊಸ್'ನ್ನು ಈ ಬೀಚಿನ ಹತ್ತಿರ ಕಾಣಬಹುದಾಗಿದ್ದು, ಇಲ್ಲಿ ದೊರೆಯುವ ಅಲ್ಕೊಹೋಲ್ ಮತ್ತು ಸೀ ಫುಡಗಳು ಬಾಯಲ್ಲಿ ನೀರೂರಿಸುತ್ತವೆ. ಗೋವಾದ ವಿಶೀಷ್ಟ ಖಾದ್ಯವಾದ 'ಗೋವನ್ ಫಿಷ್ ಕಟ್ಟಿ ರೈಸ್'ನ್ನು ಇಲ್ಲಿ ಸವಿಯಬಹುದಾಗಿದ್ದು ಪ್ರವಾಸಿಗರಲ್ಲಿ ಇದು ಬಹು ಹೆಸರುವಾಸಿಯಾಗಿದೆ.'ಬ್ರಿಟ್ಟೊಸ್'ನಿಂದ ಕಡಲ ತೀರವು ಅತ್ಯಂತ ವಿಶೀಷ್ಟವಾಗಿ ಗೋಚರಿಸುತ್ತದೆ.

ಇನ್ನು ರಾತ್ರಿ ಸಮಯದಲ್ಲಂತೂ ಸಮುದ್ರದ ಏರಿಳಿತದ ಅಲೆಗಳು ಇದರ ಮುಂದೆಯೆ ಬಂದು ಹೋಗುತ್ತಿರುತ್ತಿದ್ದು ನಿಮ್ಮ ರಾತ್ರಿ ಭೋಜನವನ್ನು ಇನ್ನಷ್ಟು ಸುಮಧುರವನ್ನಾಗಿಸುತ್ತದೆ. ಬ್ರಿಟ್ಟೊಸ್ ನ ಪಕ್ಕದಲ್ಲೆ ಇರುವ ಬೇಕರಿ ಹಾಗು ಅದರ ಸುತ್ತಮುತ್ತಲಿನ ಬೀದಿಗಳು ಯುರೋಪಿಯನ ಶೈಲಿಯ ಬೀದಿಗಳನ್ನು ನೆನಪಿಸುತ್ತವೆ. ಇಲ್ಲಿ ಸಿಗುವ ಚಾಕೊಲೇಟ್ ವೆಫರ್ ಬಿಸ್ಕಟನ ಸ್ವಾದ ಸವಿದಾಗಲೇ ಅದರ ಮಹತ್ವ ತಿಳಿಯುವುದು.

ಬಾಗಾದಲ್ಲಿ  ಯಾವಾಗಲೂ ಸಂಗೀತಮಯ ಸಂಜೆಗಳನ್ನು ಕಾಣಬಹುದು ಮತ್ತು ಥರ ಥರದ ಹುಕ್ಕಾಗಳ ಆನಂದವನ್ನೂ ಪಡೆಯಬಹುದು. ಗೋವಾದ ಇತರ ಭಾಗಗಳಿಂದ ಇಲ್ಲಿಗೆ ತಲುಪಲು ಸಾಕಷ್ಟು ಬಸ್ಸುಗಳು ಲಭ್ಯವಿದ್ದು, ಬೇಕಾದರೆ ಕ್ಯಾಬಗಳ ಸೇವೆಯನ್ನೂ ಪಡೆಯಬಹುದು.ಗೋವಾದ ಪ್ರಸಿದ್ಧ ನೈಟ ಕ್ಲಬ್ಬುಗಳಲ್ಲಿ 'ಕ್ಲಬ್ ಮಾಂಬೋಸ್' ಕೂಡ ಒಂದಾಗಿದ್ದು ಬಾಗಾ ತೀರದಿಂದ ಕಾಲ್ನಡಿಗೆಯ ದೂರದಷ್ಟು ಅಂತರದಲ್ಲಿದೆ.

ಇನ್ನು ಬಾಗಾ ತೀರವನ್ನು ಕಾಲ್ನಡಿಗೆಯಲ್ಲೆ ಅನ್ವೇಶಿಸುವುದು ತುಂಬಾ ಉತ್ತಮ, ಏಕೆಂದರೆ ಇದೊಂದು ವಿಸ್ಮಯತೆಗಳ ತಾಣವಾಗಿದ್ದು ಪ್ರತಿ ಹಂತದಲ್ಲಿ ಪ್ರತಿಯೊಂದು ಕ್ಷಣಗಳನ್ನು ಸೂಕ್ಷ್ಮತೆಯಿಂದ ಆಸ್ವಾದಿಸಬಹುದು. ನೀವೇನಾದರು ಪಂಜೀಮನಲ್ಲಿದ್ದರೆ ಅಲ್ಲಿ ಲಭ್ಯವಿರುವ ಬಸ್ಸುಗಳ ಮೂಲಕ ನೇರವಾಗಿ ಬಾಗಾ ತೀರಕ್ಕೆ ತಲುಪಬಹುದಾಗಿದೆ.

ಬಾಗಾ ಪ್ರಸಿದ್ಧವಾಗಿದೆ

ಬಾಗಾ ಹವಾಮಾನ

ಬಾಗಾ
29oC / 85oF
 • Patchy rain possible
 • Wind: S 16 km/h

ಉತ್ತಮ ಸಮಯ ಬಾಗಾ

 • Jan
 • Feb
 • Mar
 • Apr
 • May
 • Jun
 • July
 • Aug
 • Sep
 • Oct
 • Nov
 • Dec

ತಲುಪುವ ಬಗೆ ಬಾಗಾ

 • ರಸ್ತೆಯ ಮೂಲಕ
  ಪ್ರಸಿದ್ಧ ಮುಂಬೈ-ಗೋವಾ ರಾಷ್ಟ್ರೀಯ ಹೆದ್ದಾರಿ ಸಂಖ್ಯೆ 17 ರ ಮೂಲಕ ಗೋವಾ ತಲುಪಬಹುದು. ಆದರೆ ಇತ್ತಿಚೆಗೆ, ಈ, ಟು ಲೇನ್ ಹೆದ್ದಾರಿಯು ಹೆಚ್ಚಿನ ಸಮಯ ತೆಗೆದುಕೊಳ್ಳುವುದರಿಂದ ಕುಖ್ಯಾತಿಗೊಳಗಾಗಿದ್ದು, ಮುಂಬೈನಿಂದ ಪುಣೆ, ಸತಾರಾ ಹಾಗು ಸಾವಂತವಾಡಿಯ ಮೂಲಕ ಪ್ರಯಾಣಿಸಬಹುದಾಗಿದೆ. ಮುಂಬೈ, ಪುಣೆಗಳಿಂದ ಹಲವಾರು ಬಸ್ ಸೇವೆಗಳು ಕೂಡ ಗೋವಾಗೆ ಲಭ್ಯವಿದೆ.
  ಮಾರ್ಗಗಳ ಹುಡುಕಾಟ
 • ರೈಲಿನ ಮೂಲಕ
  ಗೋವಾ, ಭಾರತದ ಉತ್ತರ, ದಕ್ಷಿಣ ಮತ್ತು ಕೇಂದ್ರ ಭಾಗಗಳಿಗೆ ಉತ್ತಮವಾದ ರೈಲು ಸಂಪರ್ಕವನ್ನು ಹೊಂದಿದೆ. ಮುಂಬೈ ನಿಂದ ಗೋವಾಗೆ ಅನುಕೂಲಕರವಾದ ಆಗಮನ ಮತ್ತು ನಿರ್ಗಮನ ವೇಳೆಗಳನ್ನು ಹೊಂದಿದ ಹಲವಾರು ರೈಲುಗಳು ಲಭ್ಯವಿದೆ.
  ಮಾರ್ಗಗಳ ಹುಡುಕಾಟ
 • ಆಕಾಶದ ಮೂಲಕ
  ದಕ್ಷಿಣ ಗೋವಾದ ದಾಬೋಲಿಮ್ ವಿಮಾನ ನಿಲ್ದಾಣವು ಮುಂಬೈ, ದೆಹಲಿ ಮತ್ತು ಬೆಂಗಳೂರಿನಂತಹ ನಗರಗಳೊಂದಿಗೆ ಉತ್ತಮ ಸಂಪರ್ಕವನ್ನು ಹೊಂದಿದೆ. ಇಲ್ಲಿಂದ ಸಾಕಷ್ಟು ಕ್ಯಾಬ್ ಗಳು ದೊರೆಯುತ್ತವೆ. ಮತ್ತೊಂದು ಸಂಗತಿಯೆಂದರೆ ಈ ವಿಮಾನ ನಿಲ್ದಾಣವು ಅಂತಾರಾಷ್ಟ್ರೀಯ ನಿಲ್ದಾಣವಿಲ್ಲದ್ದರಿಂದ, ಹೊರದೇಶದ ಪ್ರವಾಸಿಗರು ಮುಂಬೈ ಅಥವಾ ದೆಹಲಿಗೆ ಬಂದು ಇಲ್ಲಿ ಬರಬೇಕಾಗುತ್ತದೆ.
  ಮಾರ್ಗಗಳ ಹುಡುಕಾಟ
One Way
Return
From (Departure City)
To (Destination City)
Depart On
23 May,Thu
Return On
24 May,Fri
Travellers
1 Traveller(s)

Add Passenger

 • Adults(12+ YEARS)
  1
 • Childrens(2-12 YEARS)
  0
 • Infants(0-2 YEARS)
  0
Cabin Class
Economy

Choose a class

 • Economy
 • Business Class
 • Premium Economy
Check In
23 May,Thu
Check Out
24 May,Fri
Guests and Rooms
1 Person, 1 Room
Room 1
 • Guests
  2
Pickup Location
Drop Location
Depart On
23 May,Thu
Return On
24 May,Fri
 • Today
  Baga
  29 OC
  85 OF
  UV Index: 7
  Patchy rain possible
 • Tomorrow
  Baga
  29 OC
  83 OF
  UV Index: 7
  Patchy rain possible
 • Day After
  Baga
  29 OC
  83 OF
  UV Index: 8
  Partly cloudy