Search
  • Follow NativePlanet
Share
ಮುಖಪುಟ » ಸ್ಥಳಗಳು» ಕಲಂಗುಟ್

ಕಲಂಗುಟ್ : ಉತ್ತರ ಗೋವಾದ ರತ್ನ

20

ಕಲಂಗುಟ ಬೀಚನ್ನು ಮನರಂಜನೆಯ ಕೇಂದ್ರ ಬಿಂದುವೆಂದೆ ಹೇಳಬಹುದು. ಗೋವಾದ ಉತ್ತರ ಭಾಗಕ್ಕಿರುವ ಕ್ಯಾಂಡೋಲಿಮ ಮತ್ತು ಬಾಗಾ ಬೀಚಗಳೊಂದಿಗೆ ಹತ್ತಿಕೊಂಡಿರುವ ಕಲಂಗುಟ ಬೀಚವು ಪ್ರವಾಸಿಗರ ಸ್ವರ್ಗವೆಂದೆ ಖ್ಯಾತಿಯಾಗಿದೆ. ವಾಹನ ನಿಲುಗಡೆಗೆ ಇಲ್ಲಿ ವಿಶಾಲವಾದ ಸ್ಥಳವಿದ್ದು ಯಾವುದೆ ತೊಂದರೆಯಿಲ್ಲದೆ, ಕಿರಿ ಕಿರಿಯಿಲ್ಲದೆ ಸಮಯವನ್ನು ಕಳೆಯಬಹುದು.

ಇಲ್ಲೂ ಕೂಡ ಬಗೆ ಬಗೆಯ ಶಾಪಿಂಗ್ ಮಳಿಗೆಗಳಿದ್ದು ಭೇಟಿ ನೀಡಬಹುದು.ವಿಶೇಷವಾಗಿ ಕಲಂಗುಟ ಬೀಚವು ಡ್ರೈ ಫ್ರೂಟಗಳಿಗೆ ಹೆಸರುವಾಸಿಯಾಗಿದ್ದು, ಇಲ್ಲಿ ದೊರೆಯುವ ಸಾದಾ ಇಲ್ಲವೆ ಹುರಿದ ಅಥವಾ ಉಪ್ಪು ಹಚ್ಚಿದ ಗೊಡಂಬಿಗಳನ್ನು ತಿನ್ನಲೆಬೇಕು. ಜಲಕ್ರೀಡೆಗಳಾದ ಬನಾನಾ ರೈಡಿಂಗ್, ಪ್ಯಾರಸೇಲಿಂಗ್ ಮುಂತಾದವು ಕೂಡ ಇಲ್ಲಿ ಆಕರ್ಷಣೀಯವಾಗಿದ್ದು ಬೇಕಾದರೆ ಎಜೆಂಟರ ಮುಖಾಂತರ ಅವುಗಳನ್ನು ಆಸ್ವಾದಿಸಬಹುದು. ಇನ್ನು ಪ್ಯಾರಾಸೇಲಿಂಗ ಮಾಡುವಾಗ ಉತ್ತರಕ್ಕೆ ಅಂಜುನಾ ಮತ್ತು ದಕ್ಷಿಣಕ್ಕೆ ಕ್ಯಾಂಡೋಲಿಮ್ ಕಡಲ ತೀರಗಳಿರುವುದನ್ನು ಕಾಣಬಹುದು.

ಈ ಬೀಚನಲ್ಲಿ ಏಡಿ ಮತ್ತು ಲಾಬಸ್ಟರಗಳಿಂದ ತಯಾರಿಸಲ್ಪಟ್ಟ ರುಚಿಕರವಾದ ಖಾದ್ಯಗಳಿಗೆ ಹೆಸರುವಾಸಿಯಾದ 'ಸೌಜಾ ಲೊಬೊ' ಎಂಬ ಮಳಿಗೆಯನ್ನು ಕಾಣಬಹುದಾಗಿದೆ. ನೀಮಗೆನಾದರು ಊಟದ ಜೊತೆ ಶ್ಯಾಕಗಳ ಅನುಭವ ಬೇಕಾದಲ್ಲಿ ಕಲಂಗುಟನಿಂದ ಕೇವಲ 20 ನಿಮಿಷಗಳ ಅವಧಿಯಲ್ಲಿ ನಡೆಯುತ್ತಾ ತಲುಪಬಹುದಾದ ಬಾಗಾ ಬೀಚನ ಬ್ರಿಟ್ಟೊಸಗೆ ಹೋಗಬಹುದು. ಇಲ್ಲವಾದಲ್ಲಿ ಕಲಂಗುಟನಲ್ಲಿರುವ ತಾಜ ವಿವಾಂತಾರವರ ದಿ ವಿಲೇಜಗೆ ಭೇಟಿ ನೀಡಬಹುದು. ಇದು ಅಗುವಾಡಾ ಕೋಟೆ ಹತ್ತಿರದಲ್ಲಿದೆ.ಇಲ್ಲಿಂದ ಕಲಂಗುಟ, ಬಾಗಾ ಮತ್ತು ಕ್ಯಾಂಡೋಲಿಮಾಗಳ ಅದ್ಭುತ ದೃಶ್ಯವನ್ನು ನೋಡಬಹುದು.

ಕಲಂಗುಟ ಬೀಚವು ಬಸ್ ನಿಲ್ದಾಣಕ್ಕೂ ಕೂಡ ಹತ್ತಿರವಾಗಿದೆ. ಪಣಜಿ ಮತ್ತು ಬೇರೆಡೆಯಿಂದ ಇಲ್ಲಿಗೆ ತಲುಪಲು ಕ್ಯಾಬ ಅಥವಾ ಬಸ್ಸುಗಳ ಸೇವೆಯು ಸುಲಭವಾಗಿ ಸಿಗುತ್ತದೆ. ನೀವೆ ಡ್ರೈವ್ ಮಾಡುವ ಹಾಗಿದ್ದರೆ ಹೇರಳವಾಗಿರುವ ದಿಕ್ಸೂಚಿಗಳು ನಿಮ್ಮನ್ನಿಲ್ಲಿ ಸುಲಭವಾಗಿ ತಲುಪಿಸುತ್ತವೆ.

ಕಲಂಗುಟ್ ಪ್ರಸಿದ್ಧವಾಗಿದೆ

ಕಲಂಗುಟ್ ಹವಾಮಾನ

ಉತ್ತಮ ಸಮಯ ಕಲಂಗುಟ್

  • Jan
  • Feb
  • Mar
  • Apr
  • May
  • Jun
  • July
  • Aug
  • Sep
  • Oct
  • Nov
  • Dec

ತಲುಪುವ ಬಗೆ ಕಲಂಗುಟ್

  • ರಸ್ತೆಯ ಮೂಲಕ
    ಪ್ರಸಿದ್ಧ ಮುಂಬೈ-ಗೋವಾ ರಾಷ್ಟ್ರೀಯ ಹೆದ್ದಾರಿ ಸಂಖ್ಯೆ 17 ರ ಮೂಲಕ ಗೋವಾ ತಲುಪಬಹುದು. ಆದರೆ ಇತ್ತಿಚೆಗೆ, ಈ, ಟು ಲೇನ್ ಹೆದ್ದಾರಿಯು ಹೆಚ್ಚಿನ ಸಮಯ ತೆಗೆದುಕೊಳ್ಳುವುದರಿಂದ ಕುಖ್ಯಾತಿಗೊಳಗಾಗಿದ್ದು, ಮುಂಬೈನಿಂದ ಪುಣೆ, ಸತಾರಾ ಹಾಗು ಸಾವಂತವಾಡಿಯ ಮೂಲಕ ಪ್ರಯಾಣಿಸಬಹುದಾಗಿದೆ. ಮುಂಬೈ, ಪುಣೆಗಳಿಂದ ಹಲವಾರು ಬಸ್ ಸೇವೆಗಳು ಕೂಡ ಗೋವಾಗೆ ಲಭ್ಯವಿದೆ.
    ಮಾರ್ಗಗಳ ಹುಡುಕಾಟ
  • ರೈಲಿನ ಮೂಲಕ
    ಗೋವಾ, ಭಾರತದ ಉತ್ತರ, ದಕ್ಷಿಣ ಮತ್ತು ಕೇಂದ್ರ ಭಾಗಗಳಿಗೆ ಉತ್ತಮವಾದ ರೈಲು ಸಂಪರ್ಕವನ್ನು ಹೊಂದಿದೆ. ಮುಂಬೈ ನಿಂದ ಗೋವಾಗೆ ಅನುಕೂಲಕರವಾದ ಆಗಮನ ಮತ್ತು ನಿರ್ಗಮನ ವೇಳೆಗಳನ್ನು ಹೊಂದಿದ ಹಲವಾರು ರೈಲುಗಳು ಲಭ್ಯವಿದೆ.
    ಮಾರ್ಗಗಳ ಹುಡುಕಾಟ
  • ಆಕಾಶದ ಮೂಲಕ
    ದಕ್ಷಿಣ ಗೋವಾದ ದಾಬೋಲಿಮ್ ವಿಮಾನ ನಿಲ್ದಾಣವು ಮುಂಬೈ, ದೆಹಲಿ ಮತ್ತು ಬೆಂಗಳೂರಿನಂತಹ ನಗರಗಳೊಂದಿಗೆ ಉತ್ತಮ ಸಂಪರ್ಕವನ್ನು ಹೊಂದಿದೆ. ಇಲ್ಲಿಂದ ಸಾಕಷ್ಟು ಕ್ಯಾಬ್ ಗಳು ದೊರೆಯುತ್ತವೆ. ಮತ್ತೊಂದು ಸಂಗತಿಯೆಂದರೆ ಈ ವಿಮಾನ ನಿಲ್ದಾಣವು ಅಂತಾರಾಷ್ಟ್ರೀಯ ನಿಲ್ದಾಣವಿಲ್ಲದ್ದರಿಂದ, ಹೊರದೇಶದ ಪ್ರವಾಸಿಗರು ಮುಂಬೈ ಅಥವಾ ದೆಹಲಿಗೆ ಬಂದು ಇಲ್ಲಿ ಬರಬೇಕಾಗುತ್ತದೆ.
    ಮಾರ್ಗಗಳ ಹುಡುಕಾಟ
One Way
Return
From (Departure City)
To (Destination City)
Depart On
23 Jul,Thu
Return On
24 Jul,Fri
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
23 Jul,Thu
Check Out
24 Jul,Fri
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
23 Jul,Thu
Return On
24 Jul,Fri