Search
 • Follow NativePlanet
Share
ಮುಖಪುಟ » ಸ್ಥಳಗಳು» ಮೀರಾಮಾರ್

ಮೀರಾಮಾರ್ ಬೀಚ್ : ಒಂದು ಸುವರ್ಣ ಅನುಭವ

11

ಪೋರ್ಚುಗೀಸ ಭಾಷೆಯಲ್ಲಿ ಮೀರಾಮಾರ ಎಂದರೆ 'ಸಮುದ್ರ ನೋಟ' ಇಲ್ಲವೆ 'ಕಡಲ ತೀರದ ನೋಟ' ಎಂದಾಗುತ್ತದೆ. ಹೌದು...ಹೆಸರೆ ಹೇಳುವ ಹಾಗೆ ಮೀರಾಮರ ಕಡಲ ತೀರವು ಅದ್ಭುತವಾದ ಮೈಸಿರಿಯನ್ನು ಹೊಂದಿದ್ದು ನೋಡುಗರನ್ನು ಪುಳಕಿತಗೊಳಿಸುತ್ತದೆ. ಇದು ಗೋವಾದಲ್ಲಿ ಉತ್ತಮ ಸ್ಥಳದಲ್ಲಿ ರೂಪಗೊಂಡಂತಹ ಕಡಲ ತೀರಗಳಲ್ಲಿ ಒಂದಾಗಿದ್ದು, ರಾಜಧಾನಿಯಾದ ಪಣಜಿಯಿಂದ ಕೇವಲ 3 ಕಿ.ಮೀ ದೂರದಲ್ಲಿದೆ. ಇಲ್ಲಿ ಮಂಡೋವಿ ನದಿಯು ಅರೇಬಿಯನ್ ಸಮುದ್ರವನ್ನು ಸೇರುತ್ತದೆ. ಇಲ್ಲಿ ತಂಗಲು ಬಹುಸಂಖ್ಯೆಯಲ್ಲಿ ಹೊಟೆಲಗಳಿದ್ದು ಸುಸಜ್ಜಿತವಾಗಿವೆ. ಈ ಒಂದು ಕಡಲ ತೀರದಲ್ಲಿ ಹೊಳೆಯುವ ಮರಳಿನ ಜೊತೆ ಸಾಲು ಸಾಲಾಗಿರುವ ಪಾಮ ಗಿಡಗಳನ್ನು ಕಾಣಬಹುದು. 2 ಕಿ.ಮೀ ಉದ್ದವನ್ನು ಹೊಂದಿರುವ ಈ ಕಡಲ ಕಿನಾರೆಯನ್ನು ನಡೆಯುತ್ತ ಆನಂದಿಸಬಹುದು. ಪ್ರತಿ ಹುಣ್ಣಿಮೆಯ ರಾತ್ರಿಯಂದು ಈ ಕಡಲ ತೀರದ ಮರುಳು ಹೊಳೆಯುವುದು ಇದರ ವಿಶೇಷವಾಗಿದೆ.

ನವಂಬರ ಮತ್ತು ಮಾರ್ಚ ಮಧ್ಯದ ಸಮಯವು ಈ ಬೀಚಿಗೆ ಭೇಟಿ ನೀಡಲು ಸೂಕ್ತವಾಗಿದ್ದು, ವಿವಿಧ ಜನಾಂಗಗಳ ಜನರ ಜೊತೆ ವಲಸೆ ಬಂದ ಹಕ್ಕಿಗಳು ಕಾಣಸಿಗುವುದರಿಂದ ಮತ್ತಷ್ಟು ಸೊಗಸಾಗಿರುತ್ತದೆ. ಇತರೆ ಪ್ರೇಕ್ಷಣೀಯ ಸ್ಥಳಗಳಾದ ಡೊನಾ ಪೌಲಾ ಮತ್ತು ಅಗುವಾಡಾ ಕೋಟೆ ಹತ್ತಿರದಲ್ಲೆ ಇದ್ದು ಶಾಪಿಂಗ ಗಾಗಿ ಹಲವು ಮಳಿಗೆಗಳಿರುವುದನ್ನೂ ಕೂಡ ಈ ಕಡಲ ತೀರದಲ್ಲಿ ಕಾಣಬಹುದು.ಜನಪ್ರೀಯ ಕಡಲ ತೀರವಾಗಿರುವ ಮೀರಾಮಾರನ್ನು ಪಣಜಿಯಿಂದ ಬಸ್ಸು ಇಲ್ಲವೆ ವಿಮಾನ ನಿಲ್ದಾಣದಿಂದ ಕ್ಯಾಬ್ ಮುಖಾಂತರ ಸುಲಭವಾಗಿ ತಲುಪಬಹುದು.

ಮೀರಾಮಾರ್ ಪ್ರಸಿದ್ಧವಾಗಿದೆ

ಮೀರಾಮಾರ್ ಹವಾಮಾನ

ಉತ್ತಮ ಸಮಯ ಮೀರಾಮಾರ್

 • Jan
 • Feb
 • Mar
 • Apr
 • May
 • Jun
 • July
 • Aug
 • Sep
 • Oct
 • Nov
 • Dec

ತಲುಪುವ ಬಗೆ ಮೀರಾಮಾರ್

 • ರಸ್ತೆಯ ಮೂಲಕ
  ಪ್ರಸಿದ್ಧ ಮುಂಬೈ-ಗೋವಾ ರಾಷ್ಟ್ರೀಯ ಹೆದ್ದಾರಿ ಸಂಖ್ಯೆ 17 ರ ಮೂಲಕ ಗೋವಾ ತಲುಪಬಹುದು. ಆದರೆ ಇತ್ತಿಚೆಗೆ, ಈ, ಟು ಲೇನ್ ಹೆದ್ದಾರಿಯು ಹೆಚ್ಚಿನ ಸಮಯ ತೆಗೆದುಕೊಳ್ಳುವುದರಿಂದ ಕುಖ್ಯಾತಿಗೊಳಗಾಗಿದ್ದು, ಮುಂಬೈನಿಂದ ಪುಣೆ, ಸತಾರಾ ಹಾಗು ಸಾವಂತವಾಡಿಯ ಮೂಲಕ ಪ್ರಯಾಣಿಸಬಹುದಾಗಿದೆ. ಮುಂಬೈ, ಪುಣೆಗಳಿಂದ ಹಲವಾರು ಬಸ್ ಸೇವೆಗಳು ಕೂಡ ಗೋವಾಗೆ ಲಭ್ಯವಿದೆ.
  ಮಾರ್ಗಗಳ ಹುಡುಕಾಟ
 • ರೈಲಿನ ಮೂಲಕ
  ಗೋವಾ, ಭಾರತದ ಉತ್ತರ, ದಕ್ಷಿಣ ಮತ್ತು ಕೇಂದ್ರ ಭಾಗಗಳಿಗೆ ಉತ್ತಮವಾದ ರೈಲು ಸಂಪರ್ಕವನ್ನು ಹೊಂದಿದೆ. ಮುಂಬೈ ನಿಂದ ಗೋವಾಗೆ ಅನುಕೂಲಕರವಾದ ಆಗಮನ ಮತ್ತು ನಿರ್ಗಮನ ವೇಳೆಗಳನ್ನು ಹೊಂದಿದ ಹಲವಾರು ರೈಲುಗಳು ಲಭ್ಯವಿದೆ.
  ಮಾರ್ಗಗಳ ಹುಡುಕಾಟ
 • ಆಕಾಶದ ಮೂಲಕ
  ದಕ್ಷಿಣ ಗೋವಾದ ದಾಬೋಲಿಮ್ ವಿಮಾನ ನಿಲ್ದಾಣವು ಮುಂಬೈ, ದೆಹಲಿ ಮತ್ತು ಬೆಂಗಳೂರಿನಂತಹ ನಗರಗಳೊಂದಿಗೆ ಉತ್ತಮ ಸಂಪರ್ಕವನ್ನು ಹೊಂದಿದೆ. ಇಲ್ಲಿಂದ ಸಾಕಷ್ಟು ಕ್ಯಾಬ್ ಗಳು ದೊರೆಯುತ್ತವೆ. ಮತ್ತೊಂದು ಸಂಗತಿಯೆಂದರೆ ಈ ವಿಮಾನ ನಿಲ್ದಾಣವು ಅಂತಾರಾಷ್ಟ್ರೀಯ ನಿಲ್ದಾಣವಿಲ್ಲದ್ದರಿಂದ, ಹೊರದೇಶದ ಪ್ರವಾಸಿಗರು ಮುಂಬೈ ಅಥವಾ ದೆಹಲಿಗೆ ಬಂದು ಇಲ್ಲಿ ಬರಬೇಕಾಗುತ್ತದೆ.
  ಮಾರ್ಗಗಳ ಹುಡುಕಾಟ
One Way
Return
From (Departure City)
To (Destination City)
Depart On
28 May,Sat
Return On
29 May,Sun
Travellers
1 Traveller(s)

Add Passenger

 • Adults(12+ YEARS)
  1
 • Childrens(2-12 YEARS)
  0
 • Infants(0-2 YEARS)
  0
Cabin Class
Economy

Choose a class

 • Economy
 • Business Class
 • Premium Economy
Check In
28 May,Sat
Check Out
29 May,Sun
Guests and Rooms
1 Person, 1 Room
Room 1
 • Guests
  2
Pickup Location
Drop Location
Depart On
28 May,Sat
Return On
29 May,Sun