ಕೋಲ್ವಾ ಬೀಚ್ : ಛಾಯಾಗ್ರಾಹಕರ ಸ್ವರ್ಗ

ಜನಪ್ರೀಯವಾದ ಕೋಲ್ವಾ ಬೀಚ್ ದಕ್ಷಿಣ ಗೋವಾ ಜಿಲ್ಲೆಯಲ್ಲಿದೆ. ಉತ್ತರ ಗೋವಾದಲ್ಲಿ ಕಂಡುಬರುವ ಸದ್ದು ಗದ್ದಲಗಳು ಇಲ್ಲಿ ಕಂಡುಬರುವುದಿಲ್ಲ. ಆದರೆ ಇಲ್ಲಿ ಶಾಂತತೆಯು ಹಾಸುಹೊಕ್ಕಾಗಿದ್ದು, ಕಡಲ ತೀರದ ಬಿಳಿ ಮರಳು ಆಕರ್ಷಣೀಯವಾಗಿದ್ದು ಛಾಯಾಗ್ರಾಹಕರ ನೆಚ್ಚಿನ ತಾಣವಾಗಿದೆ. 24 ಕಿ.ಮೀ ಉದ್ದವನ್ನು ಹೊಂದಿರುವ ಕೋಲ್ವಾ ಕಡಲ ತೀರವು ವಿಶ್ವದಲ್ಲಿರುವ ಉದ್ದನೆಯ ಕಡಲ ತೀರಗಳಲ್ಲಿ ಒಂದಾಗಿದೆ.ಉತ್ತರ ಗೋವಾದಲ್ಲಿ ಕಂಡುಬರುವ ರಸವತ್ತತೆ, ಉತ್ಸಾಹ ದಕ್ಷಿಣ ಗೋವಾದಲ್ಲಿ ಕಾಣದೇ ಹೋದರೂ ಒಳ್ಳೆಯ ಗುಣಮಟ್ಟದ ರೆಸ್ಟೌರಂಟ ಮತ್ತು ಹೊಟೆಲಗಳಿಗೇನು ಇಲ್ಲಿ ಕಮ್ಮಿಯಿಲ್ಲ.

ಕೋಲ್ವಾ ಬೀಚಿನ ಹತ್ತಿರವೆ ಹಲವಾರು ಒಳ್ಳೆಯ ಹೊಟೆಲಗಳನ್ನು ಕಾಣಬಹುದು. ಸಾಮಾನ್ಯವಾಗಿ ಅಕ್ಟೋಬರನ ನಂತರ ಹಲವಾರು ಪ್ರವಾಸಿಗರು ಇಲ್ಲಿರುವ ಕೋಲ್ವಾ ಚರ್ಚಗೆ ಭೇಟಿ ನೀಡಲು ಬರುತ್ತಾರೆ.ಈ ಸಮಯದಲ್ಲಿ ಹಲವಾರು ಉತ್ಸವಗಳು ಇಲ್ಲಿ ಜರುಗುವುದರಿಂದ ಭೇಟಿ ನೀಡಲು ಇದೊಂದು ಒಳ್ಳೆಯ ಕಾಲವಾಗಿದೆ. ಕೋಲ್ವಾದಿಂದ ಗೋವಾದ ಪುರಾತನ ಕಟ್ಟಡಗಳಲ್ಲೊಂದಾದ ಕಾಬೊ ಡಿ ರಾಮಾಗೂ ಜನರು ಭೇಟಿ ನೀಡುತ್ತಾರೆ.ಕೋಲ್ವಾ ಬೀಚನ್ನು ಕ್ಯಾಬ, ಕಾರ ಇಲ್ಲವೆ ಬಾಡಿಗೆಗೆ ಪಡೆದುಕೊಂಡ ದ್ವಿಚಕ್ರ ವಾಹನಗಳಿಂದ ಸುಲಭವಾಗಿ ಹೋಗಬಹುದು. ಇದು ಸಿಟಿ ಸೆಂಟರನಿಂದ 40 ಕಿ.ಮೀ ದೂರದಲ್ಲಿದೆ. ಮಾರ್ಗೊ ರೈಲು ನಿಲ್ದಾಣವು ಕೋಲ್ವಾ ಬೀಚಿನ ಹತ್ತಿರದಲ್ಲೇ ಇದೆ.

Please Wait while comments are loading...