Search
 • Follow NativePlanet
Share
ಮುಖಪುಟ » ಸ್ಥಳಗಳು» ಪೊರ್ವೊರಿಮ್

ಪೊರ್ವೊರಿಮ್

7

ಮುಂಬೈ-ಗೋವಾ ಹೆದ್ದಾರಿಯಲ್ಲಿ ಸಿಗುವ ಮಾಪುಸಾ ದಾಟಿ ಮುಂದೆ ಸಾಗಿದರೆ, ಪಣಜಿಯ ಹತ್ತಿರ ಹತ್ತಿರದಲ್ಲೆ ಕಾಣಸಿಗುವ ಪಟ್ಟಣವೆ ಪೊರ್ವೊರಿಮ್.ಈ ಪಟ್ಟಣದ ವಿಶೇಷವೆಂದರೆ ಇದು ಗೋವಾದ ಉಳಿದೆಲ್ಲ ಭಾಗಗಳಿಗೆ ಹತ್ತಿರವಾಗಿರುವುದು. ಪಟ್ಟಣದ ಹೊರಭಾಗದಲ್ಲಿ ಸಲೀಮ್ ಅಲಿ ಪಕ್ಷಿ ಧಾಮವಿದ್ದು, ಇದು ಛಾಯಾಚಿತ್ರಗಾರರ ನೆಚ್ಚಿನ ತಾಣವಾಗಿದೆ. ಇಲ್ಲಿಂದ ಮಾಂಡೋವಿ ನದಿಯ ಜೊತೆಜೊತೆಗೆ ಪಣಜಿಗೆ ಹೋಗುವ ರಸ್ತೆಯಲ್ಲಿ ಸ್ವಲ್ಪ ಮುಂದೆ ಸಾಗಿದಾಗ ಕಾಣಸಿಗುವುದೆ ರೈಸ್ ಮಾಗೋಸ್ ಕೋಟೆ. ಪಣಜಿ ನಗರದ ಮುಂದುವರೆದ ಉಪನಗರವೆಂದೆ ಹೇಳಲಾಗುವ ಪೊರ್ವೊರಿಮ್ ಪಟ್ಟಣವು ಒಂದು ವ್ಯಾವಹಾರಿಕ ಮತ್ತು ವಸತಿ ನಿಬಿಢ ಪ್ರದೇಶವಾಗಿದೆ.

ಪಣಜಿ ನಗರವು ಇಲ್ಲಿಂದ ಕೇವಲ ಮಾರಳತೆ ದೂರದಲ್ಲಿದ್ದು 'ಪಣಜಿ ಸೇತುವೆ'ಯ ಆಚೆಯಲ್ಲಿದೆ.ಪೊರ್ವೊರಿಮ್ ನಲ್ಲಿರುವ ಎರಡು ಪ್ರಸಿದ್ಧ ತಿನ್ನುವ ತಾಣಗಳೆಂದರೆ 'ಕಾಜುವೇರಿಯೊ' ಮತ್ತು ರುಚಿಕರವಾದ ಪೆಸ್ಟ್ರಿಗಳು ದೊರೆಯುವ 'ಮೆಜೆಸ್ಟಿಕ್'. ನೆರೆ ಹೊರೆಯ ಬಾಗಾ, ಕ್ಯಾಂಡೋಲಿಮ್ ಹತ್ತಿರದಲ್ಲಿದ್ದರೂ ಸಹ ಇಲ್ಲಿ ತಂಗಲು ಮಿತವ್ಯಯ ಮತ್ತು ಉತ್ತಮ ಗುಣಮಟ್ಟದ ವಸತಿ ಸೌಲಭ್ಯಗಳಿರುವುದು ಗಮನಿಸಬೇಕಾದ ಸಂಗತಿ.

ಪೊರ್ವೊರಿಮ್ ಪ್ರಸಿದ್ಧವಾಗಿದೆ

ಪೊರ್ವೊರಿಮ್ ಹವಾಮಾನ

ಉತ್ತಮ ಸಮಯ ಪೊರ್ವೊರಿಮ್

 • Jan
 • Feb
 • Mar
 • Apr
 • May
 • Jun
 • July
 • Aug
 • Sep
 • Oct
 • Nov
 • Dec

ತಲುಪುವ ಬಗೆ ಪೊರ್ವೊರಿಮ್

 • ರಸ್ತೆಯ ಮೂಲಕ
  ಪ್ರಸಿದ್ಧ ಮುಂಬೈ-ಗೋವಾ ರಾಷ್ಟ್ರೀಯ ಹೆದ್ದಾರಿ ಸಂಖ್ಯೆ 17 ರ ಮೂಲಕ ಗೋವಾ ತಲುಪಬಹುದು. ಆದರೆ ಇತ್ತಿಚೆಗೆ, ಈ, ಟು ಲೇನ್ ಹೆದ್ದಾರಿಯು ಹೆಚ್ಚಿನ ಸಮಯ ತೆಗೆದುಕೊಳ್ಳುವುದರಿಂದ ಕುಖ್ಯಾತಿಗೊಳಗಾಗಿದ್ದು, ಮುಂಬೈನಿಂದ ಪುಣೆ, ಸತಾರಾ ಹಾಗು ಸಾವಂತವಾಡಿಯ ಮೂಲಕ ಪ್ರಯಾಣಿಸಬಹುದಾಗಿದೆ. ಮುಂಬೈ, ಪುಣೆಗಳಿಂದ ಹಲವಾರು ಬಸ್ ಸೇವೆಗಳು ಕೂಡ ಗೋವಾಗೆ ಲಭ್ಯವಿದೆ.
  ಮಾರ್ಗಗಳ ಹುಡುಕಾಟ
 • ರೈಲಿನ ಮೂಲಕ
  ಗೋವಾ, ಭಾರತದ ಉತ್ತರ, ದಕ್ಷಿಣ ಮತ್ತು ಕೇಂದ್ರ ಭಾಗಗಳಿಗೆ ಉತ್ತಮವಾದ ರೈಲು ಸಂಪರ್ಕವನ್ನು ಹೊಂದಿದೆ. ಮುಂಬೈ ನಿಂದ ಗೋವಾಗೆ ಅನುಕೂಲಕರವಾದ ಆಗಮನ ಮತ್ತು ನಿರ್ಗಮನ ವೇಳೆಗಳನ್ನು ಹೊಂದಿದ ಹಲವಾರು ರೈಲುಗಳು ಲಭ್ಯವಿದೆ.
  ಮಾರ್ಗಗಳ ಹುಡುಕಾಟ
 • ಆಕಾಶದ ಮೂಲಕ
  ದಕ್ಷಿಣ ಗೋವಾದ ದಾಬೋಲಿಮ್ ವಿಮಾನ ನಿಲ್ದಾಣವು ಮುಂಬೈ, ದೆಹಲಿ ಮತ್ತು ಬೆಂಗಳೂರಿನಂತಹ ನಗರಗಳೊಂದಿಗೆ ಉತ್ತಮ ಸಂಪರ್ಕವನ್ನು ಹೊಂದಿದೆ. ಇಲ್ಲಿಂದ ಸಾಕಷ್ಟು ಕ್ಯಾಬ್ ಗಳು ದೊರೆಯುತ್ತವೆ. ಮತ್ತೊಂದು ಸಂಗತಿಯೆಂದರೆ ಈ ವಿಮಾನ ನಿಲ್ದಾಣವು ಅಂತಾರಾಷ್ಟ್ರೀಯ ನಿಲ್ದಾಣವಿಲ್ಲದ್ದರಿಂದ, ಹೊರದೇಶದ ಪ್ರವಾಸಿಗರು ಮುಂಬೈ ಅಥವಾ ದೆಹಲಿಗೆ ಬಂದು ಇಲ್ಲಿ ಬರಬೇಕಾಗುತ್ತದೆ.
  ಮಾರ್ಗಗಳ ಹುಡುಕಾಟ
One Way
Return
From (Departure City)
To (Destination City)
Depart On
26 Jul,Mon
Return On
27 Jul,Tue
Travellers
1 Traveller(s)

Add Passenger

 • Adults(12+ YEARS)
  1
 • Childrens(2-12 YEARS)
  0
 • Infants(0-2 YEARS)
  0
Cabin Class
Economy

Choose a class

 • Economy
 • Business Class
 • Premium Economy
Check In
26 Jul,Mon
Check Out
27 Jul,Tue
Guests and Rooms
1 Person, 1 Room
Room 1
 • Guests
  2
Pickup Location
Drop Location
Depart On
26 Jul,Mon
Return On
27 Jul,Tue