Search
  • Follow NativePlanet
Share
ಮುಖಪುಟ » ಸ್ಥಳಗಳು» ಬೋಗ್ಮಾಲೊ

ಬೋಗ್ಮಾಲೊ ಬೀಚ್ : ಉತ್ಸಾಹ ತುಂಬುವ ತಾಣ

7

ಗೋವಾದ ಕರಾವಳಿ ತೀರದ ಮಧ್ಯದಲ್ಲಿರುವ ಬೊಗ್ಮಾಲೊ ಕಡಲ ತೀರವು ವಾಸ್ಕೊ ಡಾ ಗಾಮಾ ನಗರಕ್ಕೆ ಹತ್ತಿರವಾಗಿದೆ. ಆಧುನಿಕತೆಯ ಜನಜೀವನವನ್ನು ಇಲ್ಲಿ ನೋಡಬಹುದಾಗಿದ್ದು, ಹಲವಾರು ಮನರಂಜನಾ ಚಟುವಟಿಕೆಗಳು ಮತ್ತು ಜಲಕ್ರೀಡೆಗಳು ಸರ್ವೆ ಸಾಮಾನ್ಯವಾಗಿದೆ.ಈ ಕಡಲ ತೀರದ ವಿಶೇಷತೆಯೆಂದರೆ, ಇದು ವಾಸ್ಕೊ ನಗರ ಮತ್ತು ವಿಮಾನ ನಿಲ್ದಾಣಕ್ಕೆ ಹತ್ತಿರವಿರುವುದು.

ದಿನ ಕಳೆಯಲು ಸಾಕಷ್ಟು ಆಯ್ಕೆಗಳನ್ನು ಇಲ್ಲಿ ಕಾಣಬಹುದು. ಮುಂಜಾನೆಯ ಸಮಯವನ್ನು ಬೀಚನಲ್ಲಿ ಕಳೆಯಬಹುದಾಗಿದ್ದು ನಂತರ ಹತ್ತಿರದಲ್ಲೆ ಇರುವ 'ನವಲ್ ಅವಿಯೇಷನ್ ಮ್ಯೂಸಿಯಮ್' ಗೆ ಭೇಟಿ ನೀಡಬಹುದು. ತದನಂತರ ಸುತ್ತಮುತ್ತಲಿರುವ ಕೆಲವು ಬೀಚಗಳನ್ನು ಸುತ್ತಾಡಬಹುದಾಗಿದ್ದು ಬೇಕಾದರೆ ಫೆರ್ರಿಯ ಮೂಲಕ ದೊನಾ ಪೌಲಾ ಇಲ್ಲವೆ ಬೊಗ್ಮಾಲೊ ಬೀಚ್ ರಿಸಾರ್ಟಗೂ ಕೂಡ ಭೇಟಿ ನೀಡಬಹುದು. ಇಲ್ಲೂ ಕೂಡ ಖರಿದಿಸಲು ಸಾಕಷ್ಟು ಶಾಪಿಂಗ್ ಮಳಿಗೆಗಳಿದ್ದು ಪ್ರವಾಸಿಗರು ಇದರ ಸದುಪಯೋಗ ಪಡೆದುಕೊಳ್ಳಬಹುದು!ಇಲ್ಲಿ ಮೊದಲ ಬಾರಿಗೆ 'ಸ್ಕೂಬಾ ಡೈವಿಂಗ ಸೆಂಟರ'ನ್ನು ತೆರೆಯಲಾಗಿದ್ದು, ಈಗೀಗ ಅನೇಕ ಪ್ರವಾಸಿಗರು ಈ ಜಲಕ್ರೀಡೆಗೆ ಪರಿಚಯಿಸಕೊಳ್ಳತೊಡಗಿದ್ದಾರೆ.

ಇನ್ನು ವೃತ್ತಿ ನಿರತ ಡೈವರಗೆ ಭಾರತದ ಪಶ್ಚಿಮ ಕರಾವಳಿ ತೀರದ ಪ್ರಪ್ರಥಮ ಈ ಸ್ಕೂಬಾ ಡೈವಿಂಗ್ ಸೆಂಟರ್ ಒಂದು ಸುವರ್ಣಾವಕಾಶವಾಗಿದೆ.ಹತ್ತಿರದಲ್ಲೆ ಇರುವ 'ನವಲ್ ಅವಿಯೇಷನ್ ಮ್ಯೂಸಿಯಮ್' ಒಂದು ಆಸಕ್ತಿದಾಯಕ ಸಂಗ್ರಹಾಲಯವಾಗಿದ್ದು ಭಾರತದ ನೌಕಾ ಪಡೆಯ ಇತಿಹಾಸ ಮತ್ತು ಅದು ನಡೆದು ಬಂದ ಹಾದಿಯ ವಿಸ್ತೃತ ಚಿತ್ರಣವನ್ನು ನೋಡುಗರಿಗೆ ಒದಗಿಸುತ್ತದೆ. ಈ ಕಡಲ ತೀರವು ಸ್ವಚ್ಛವಾಗಿದ್ದು ಈಜಾಡಲು ಅನುಕೂಲಕರವಾಗಿದೆ.ಬೊಗ್ಮಾಲೊ ಭೇಟಿಯು ನಿಜವಾಗಿಯೂ ಒಂದು ರೋಮಾಂಚನಕಾರಿಯಾದ ಅನುಭವ.

ವಿಮಾನ ನಿಲ್ದಾಣದಿಂದ ಕೇವಲ 5 ಕಿ.ಮೀ ಅಂತರದಲ್ಲಿರುವ ಈ ಕಡಲ ತೀರಕ್ಕೆ ಹೋಗಲು ನಿರಾಯಾಸವಾಗಿ ಕ್ಯಾಬಗಳನ್ನು ಪಡೆಯಬಹುದು ಇಲ್ಲವೆ ಬಾಡಿಗೆ ದ್ವಿಚಕ್ರ ವಾಹನದ ಮೂಲಕ ತಲುಪಬಹುದು. ಇನ್ನು ನಡೆಯುವುದನ್ನು ಇಷ್ಟಪಡುವವರು ವಾಸ್ಕೊ ನಗರದಿಂದ ಸುತ್ತಾಡುತ್ತ ಇಲ್ಲಿಗೆ ತಲುಪಬಹುದು. ಇನ್ನೊಂದು ಉಪಯುಕ್ತ ಮಾಹಿತಿಯೆಂದರೆ ದಾಬೋಲಿಮ್ ಮತ್ತು ವಾಸ್ಕೊದಿಂದ ಇಲ್ಲಿಗೆ ರೈಲು ಸೇವೆ ಲಭ್ಯವಿದೆ.

ಬೋಗ್ಮಾಲೊ ಪ್ರಸಿದ್ಧವಾಗಿದೆ

ಬೋಗ್ಮಾಲೊ ಹವಾಮಾನ

ಉತ್ತಮ ಸಮಯ ಬೋಗ್ಮಾಲೊ

  • Jan
  • Feb
  • Mar
  • Apr
  • May
  • Jun
  • July
  • Aug
  • Sep
  • Oct
  • Nov
  • Dec

ತಲುಪುವ ಬಗೆ ಬೋಗ್ಮಾಲೊ

  • ರಸ್ತೆಯ ಮೂಲಕ
    ಪ್ರಸಿದ್ಧ ಮುಂಬೈ-ಗೋವಾ ರಾಷ್ಟ್ರೀಯ ಹೆದ್ದಾರಿ ಸಂಖ್ಯೆ 17 ರ ಮೂಲಕ ಗೋವಾ ತಲುಪಬಹುದು. ಆದರೆ ಇತ್ತಿಚೆಗೆ, ಈ, ಟು ಲೇನ್ ಹೆದ್ದಾರಿಯು ಹೆಚ್ಚಿನ ಸಮಯ ತೆಗೆದುಕೊಳ್ಳುವುದರಿಂದ ಕುಖ್ಯಾತಿಗೊಳಗಾಗಿದ್ದು, ಮುಂಬೈನಿಂದ ಪುಣೆ, ಸತಾರಾ ಹಾಗು ಸಾವಂತವಾಡಿಯ ಮೂಲಕ ಪ್ರಯಾಣಿಸಬಹುದಾಗಿದೆ. ಮುಂಬೈ, ಪುಣೆಗಳಿಂದ ಹಲವಾರು ಬಸ್ ಸೇವೆಗಳು ಕೂಡ ಗೋವಾಗೆ ಲಭ್ಯವಿದೆ.
    ಮಾರ್ಗಗಳ ಹುಡುಕಾಟ
  • ರೈಲಿನ ಮೂಲಕ
    ಗೋವಾ, ಭಾರತದ ಉತ್ತರ, ದಕ್ಷಿಣ ಮತ್ತು ಕೇಂದ್ರ ಭಾಗಗಳಿಗೆ ಉತ್ತಮವಾದ ರೈಲು ಸಂಪರ್ಕವನ್ನು ಹೊಂದಿದೆ. ಮುಂಬೈ ನಿಂದ ಗೋವಾಗೆ ಅನುಕೂಲಕರವಾದ ಆಗಮನ ಮತ್ತು ನಿರ್ಗಮನ ವೇಳೆಗಳನ್ನು ಹೊಂದಿದ ಹಲವಾರು ರೈಲುಗಳು ಲಭ್ಯವಿದೆ.
    ಮಾರ್ಗಗಳ ಹುಡುಕಾಟ
  • ಆಕಾಶದ ಮೂಲಕ
    ದಕ್ಷಿಣ ಗೋವಾದ ದಾಬೋಲಿಮ್ ವಿಮಾನ ನಿಲ್ದಾಣವು ಮುಂಬೈ, ದೆಹಲಿ ಮತ್ತು ಬೆಂಗಳೂರಿನಂತಹ ನಗರಗಳೊಂದಿಗೆ ಉತ್ತಮ ಸಂಪರ್ಕವನ್ನು ಹೊಂದಿದೆ. ಇಲ್ಲಿಂದ ಸಾಕಷ್ಟು ಕ್ಯಾಬ್ ಗಳು ದೊರೆಯುತ್ತವೆ. ಮತ್ತೊಂದು ಸಂಗತಿಯೆಂದರೆ ಈ ವಿಮಾನ ನಿಲ್ದಾಣವು ಅಂತಾರಾಷ್ಟ್ರೀಯ ನಿಲ್ದಾಣವಿಲ್ಲದ್ದರಿಂದ, ಹೊರದೇಶದ ಪ್ರವಾಸಿಗರು ಮುಂಬೈ ಅಥವಾ ದೆಹಲಿಗೆ ಬಂದು ಇಲ್ಲಿ ಬರಬೇಕಾಗುತ್ತದೆ.
    ಮಾರ್ಗಗಳ ಹುಡುಕಾಟ
One Way
Return
From (Departure City)
To (Destination City)
Depart On
23 Apr,Tue
Return On
24 Apr,Wed
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
23 Apr,Tue
Check Out
24 Apr,Wed
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
23 Apr,Tue
Return On
24 Apr,Wed