Search
  • Follow NativePlanet
Share
ಮುಖಪುಟ » ಸ್ಥಳಗಳು» ಕೋಲವೇಲ್

ಕೋಲವೇಲ್ : ಸುಂದರ ಕಡಲ ತೀರಗಳ ತಾಣ

7

ಕೋಲವೇಲ್ ಗೋವಾದಲ್ಲಿರುವ ಒಂದು ಪಟ್ಟಣದ ಹೆಸರು. ಕ್ಯಾಂಡೋಲಿಮ್, ಬಾಗಾ ಮತ್ತು ಕಲಂಗುಟ ಕಡಲ ತೀರಗಳ ಈಶಾನ್ಯ ಭಾಗದಲ್ಲಿ ಈ ಪಟ್ಟಣವಿದೆ. ಹೊಲಗದ್ದೆಗಳ ಮಧ್ಯದಲ್ಲಿರುವ ಈ ಪಟ್ಟಣವೂ ಕೂಡ 'ಪಾರ್ಟಿ'ಗಳನ್ನು ಹಮ್ಮಿಕೊಳ್ಳಲು ಬಿಸಿ ಬಿಸಿಯಾದ ತಾಣವಾಗಿದೆ. ಹತ್ತಿರದಲ್ಲೆ ಹರಿದಿರುವ ಚಪೋರಾ ನದಿಯು ನಗರಕ್ಕೆ ಇನ್ನಷ್ಟು ಸೊಬಗನ್ನು ನೀಡುತ್ತದೆ.ಐತಿಹಾಸಿಕವಾಗಿ ಈ ಕೋಲವೇಲ್ ಪಟ್ಟಣವು ವ್ಯಾಪಾರ ಕ್ಷೇತ್ರದಲ್ಲಿ ಪೋರ್ಚುಗೀಸರು, ಡಚ್ಚರು ಮತ್ತು ಮರಾಠರಿಗೆ ಮಹತ್ವವಾಗಿತ್ತು ಮತ್ತು ಈಗಲೂ ಕೂಡ ಇದು ಗೊಡಂಬಿ ಮದ್ಯ (ಕ್ಯಾಶೀವ್ ಲೀಕರ್) ಮತ್ತು ಮುರ್ದೋಷಿ (ಲೇಡಿ ಫಿಶ್)ಗೆ ಪ್ರಸಿದ್ಧಿಯಾಗಿದೆ.ಇಲ್ಲಿರುವ ಕೋಲವೇಲ್ ಚರ್ಚವು 1591 ರಲ್ಲಿ ನಿರ್ಮಾಣಗೊಂಡಿದ್ದು ವಿಕ್ಷೀಸಬಲ್ಲ ಒಂದು ಸ್ಥಳವಾಗಿದೆ.

ಇದರ ಸರಳವಾದ ವಾಸ್ತು ಕಲೆಯು ಅದ್ಭುತವಾಗಿದ್ದು ಉತ್ತಮವಾಗಿ ಸಂರಕ್ಷಿಸಲ್ಪಟ್ಟಿದೆ. ದಿನ ಕಳೆಯಲು ಹೇಳಿಮಾಡಿಸಿರುವಂತಹ ಸ್ಥಳ ಇದಾಗಿದೆ. ಮುಂಬೈ ನಿಂದ ಗೋವಾಗೆ ಬರುವ ಹಾದಿಯಲ್ಲಿ ಮೊದಲು ಎದುರಾಗುವುದೇ ಎಡ ಬದಿಗಿರುವ ಕೋಲವೇಲ್. ಅಲ್ಲಿಂದ ನೇರವಾಗಿ ಚಲಿಸುತ್ತಾ ಮಾಪುಸಾವರೆಗೂ ಬನ್ನಿರಿ. ಇಲ್ಲಿಂದ ಎಡ ತಿರುವು ಪಡೆಯಿರಿ. ವಿಮಾನ ನಿಲ್ದಾಣ ಮತ್ತು ರೈಲು ನಿಲ್ದಾಣ ಕೋಲವೇಲ್ ಗೆ ದೂರದಲ್ಲಿದ್ದರೂ ಕ್ಯಾಬಗಳ ಮುಖಾಂತರ ತಲುಪುವುದು ಅಷ್ಟೊಂದು ಸಮಸ್ಯೆಯಾಗುವುದಿಲ್ಲ. ಮಜೊರ್ಡಾ ರೈಲು ನಿಲ್ದಾಣದಿಂದಲೂ ಕೂಡ ಇಲ್ಲಿಗೆ ತಲುಪಬಹುದು.

ಕೋಲವೇಲ್ ಪ್ರಸಿದ್ಧವಾಗಿದೆ

ಕೋಲವೇಲ್ ಹವಾಮಾನ

ಉತ್ತಮ ಸಮಯ ಕೋಲವೇಲ್

  • Jan
  • Feb
  • Mar
  • Apr
  • May
  • Jun
  • July
  • Aug
  • Sep
  • Oct
  • Nov
  • Dec

ತಲುಪುವ ಬಗೆ ಕೋಲವೇಲ್

  • ರಸ್ತೆಯ ಮೂಲಕ
    ಪ್ರಸಿದ್ಧ ಮುಂಬೈ-ಗೋವಾ ರಾಷ್ಟ್ರೀಯ ಹೆದ್ದಾರಿ ಸಂಖ್ಯೆ 17 ರ ಮೂಲಕ ಗೋವಾ ತಲುಪಬಹುದು. ಆದರೆ ಇತ್ತಿಚೆಗೆ, ಈ, ಟು ಲೇನ್ ಹೆದ್ದಾರಿಯು ಹೆಚ್ಚಿನ ಸಮಯ ತೆಗೆದುಕೊಳ್ಳುವುದರಿಂದ ಕುಖ್ಯಾತಿಗೊಳಗಾಗಿದ್ದು, ಮುಂಬೈನಿಂದ ಪುಣೆ, ಸತಾರಾ ಹಾಗು ಸಾವಂತವಾಡಿಯ ಮೂಲಕ ಪ್ರಯಾಣಿಸಬಹುದಾಗಿದೆ. ಮುಂಬೈ, ಪುಣೆಗಳಿಂದ ಹಲವಾರು ಬಸ್ ಸೇವೆಗಳು ಕೂಡ ಗೋವಾಗೆ ಲಭ್ಯವಿದೆ.
    ಮಾರ್ಗಗಳ ಹುಡುಕಾಟ
  • ರೈಲಿನ ಮೂಲಕ
    ಗೋವಾ, ಭಾರತದ ಉತ್ತರ, ದಕ್ಷಿಣ ಮತ್ತು ಕೇಂದ್ರ ಭಾಗಗಳಿಗೆ ಉತ್ತಮವಾದ ರೈಲು ಸಂಪರ್ಕವನ್ನು ಹೊಂದಿದೆ. ಮುಂಬೈ ನಿಂದ ಗೋವಾಗೆ ಅನುಕೂಲಕರವಾದ ಆಗಮನ ಮತ್ತು ನಿರ್ಗಮನ ವೇಳೆಗಳನ್ನು ಹೊಂದಿದ ಹಲವಾರು ರೈಲುಗಳು ಲಭ್ಯವಿದೆ.
    ಮಾರ್ಗಗಳ ಹುಡುಕಾಟ
  • ಆಕಾಶದ ಮೂಲಕ
    ದಕ್ಷಿಣ ಗೋವಾದ ದಾಬೋಲಿಮ್ ವಿಮಾನ ನಿಲ್ದಾಣವು ಮುಂಬೈ, ದೆಹಲಿ ಮತ್ತು ಬೆಂಗಳೂರಿನಂತಹ ನಗರಗಳೊಂದಿಗೆ ಉತ್ತಮ ಸಂಪರ್ಕವನ್ನು ಹೊಂದಿದೆ. ಇಲ್ಲಿಂದ ಸಾಕಷ್ಟು ಕ್ಯಾಬ್ ಗಳು ದೊರೆಯುತ್ತವೆ. ಮತ್ತೊಂದು ಸಂಗತಿಯೆಂದರೆ ಈ ವಿಮಾನ ನಿಲ್ದಾಣವು ಅಂತಾರಾಷ್ಟ್ರೀಯ ನಿಲ್ದಾಣವಿಲ್ಲದ್ದರಿಂದ, ಹೊರದೇಶದ ಪ್ರವಾಸಿಗರು ಮುಂಬೈ ಅಥವಾ ದೆಹಲಿಗೆ ಬಂದು ಇಲ್ಲಿ ಬರಬೇಕಾಗುತ್ತದೆ.
    ಮಾರ್ಗಗಳ ಹುಡುಕಾಟ
One Way
Return
From (Departure City)
To (Destination City)
Depart On
08 Jun,Mon
Return On
09 Jun,Tue
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
08 Jun,Mon
Check Out
09 Jun,Tue
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
08 Jun,Mon
Return On
09 Jun,Tue