Search
 • Follow NativePlanet
Share

ಪಣಜಿ : ಗೋವಾದ ರಾಜಧಾನಿ

33

ಪಣಜಿ ಎಂದರೆ ಸಾಕು, ಎಲ್ಲರಿಗು ನೆನಪಾಗುವುದೇ ಗೋವಾ! ಹಾಗಂತ ಇದೇನು ದೊಡ್ಡ ನಗರವಲ್ಲ. ಆದರೂ ಮನರಂಜನೆ, ಉತ್ಸಾಹ, ಮೋಜು ಎಂಬ ಪದಗಳಿಗೆ ಪಣಜಿಯ ಜೊತೆ ಅವಿನಾಭಾವ ಸಂಬಂಧವಿದೆ.ಅಕ್ಷರಶಹ ಭಾಷಾಂತರಿಸಿದಾಗ 'ಎಂದೂ ಪ್ರವಾಹ ಬಾರದ ಭೂಮಿ' ಎಂದು ಅರ್ಥೈಸಲ್ಪಡುವ ಪಣಜಿಯು ಸಮುದ್ರ ಮಟ್ಟದಿಂದ 7 ಮೀ ಎತ್ತರದಲ್ಲಿದೆ. ಉಳಿದೆಲ್ಲೆಡೆಗಳಿಗಿಂತ ಇಲ್ಲಿ ಜನಜೀವನವು ವೇಗ ಗತಿಯಲ್ಲಿರುವುದನ್ನು ಕಾಣಬಹುದು. ಆದರೆ ಉಳಿದ ಮೆಟ್ರೊಪಾಲಿಟನ ನಗರಗಳಿಗೆ ಹೋಲಿಸಿದರೆ ಈ ವೇಗ ನಿಧಾನವೆ. ಈ ಕಾರಣದಿಂದ ರಜೆಯನ್ನು ಕಳೆಯಲು ಇದು ಅದ್ಭುತವಾದ ತಾಣವಾಗಿದೆ. ಇಲ್ಲಿ ವಾಸಿಸುವವರ ಸಂಖ್ಯೆ 150000 ಕ್ಕೂ ಸ್ವಲ್ಪ ಅಧಿಕ.

ಸಾಕಷ್ಟು ಪ್ರಮಾಣದ ಸ್ಟಾರ್ ಹೊಟೆಲಗಳು ಇಲ್ಲಿದ್ದು ಉತ್ತರ ಗೋವಾ ಹಾಗು ದಕ್ಷಿಣ ಗೋವಾದ ಎಲ್ಲ ಭಾಗಗಳಿಗೂ ಇಲ್ಲಿಂದ ಸುಲಭವಾಗಿ ಸಂಚರಿಸಬಹುದು.ಗೋವಾದ ಪಣಜಿಯಲ್ಲಿ ವಂಶಪರಂಪರಾಗತ ಸಂಗ್ರಹಾಲಯವಿದ್ದು ಇಲ್ಲಿಯ ಸಂಪ್ರದಾಯ, ಸಂಸ್ಕೃತಿ, ರಬ್ಬರ್ ಪ್ಲ್ಯಾಂಟೇಷನ್ ನಿಂದ ಹಿಡಿದು ಸಾಲ್ಟ ಪ್ಯಾನ್ಸ್ ಹೀಗೆ ಗೋವಾ ನಡೆದು ಬಂದ ಹಾದಿಯ ತುಣುಕುಗಳನ್ನು ಇಲ್ಲಿ ಕಾಣಬಹುದಾಗಿದೆ. ಇಷ್ಟೆ ಅಲ್ಲ, ಆಸಕ್ತಿದಾಯಕವಾದ ದಂತಕಥೆ 'ಬಿಗ್ ಫುಟ್' ನ ಪ್ರದರ್ಶನವನ್ನು ಇಲ್ಲಿ ಕಾಣಬಹುದಾಗಿದ್ದು ಇಂದು ಅದನ್ನು ಹಲವಾರು ಕಾರ್ಯಕ್ರಮಗಳನ್ನು ಆಯೋಜಿಸಲು ಉಪಯೋಗಿಸಲಾಗುತ್ತದೆ. ನೀವೇನಾದರು ಪಣಜಿಯ ಇ.ಡಿ.ಸಿ ಕಾಂಪ್ಲೇಕ್ಸ್ ಹತ್ತಿರದಲ್ಲಿದ್ದರೆ ಹತ್ತಿರದಲ್ಲೆ ಇರುವ ರಾಜ್ಯದ ಸಂಗ್ರಹಾಲಯಕ್ಕೆ ಖಂಡಿತವಾಗಿಯು ಭೇಟಿ ನೀಡಿ. ಇಲ್ಲಿ ಕ್ಲೇ, ಮಣ್ಣು ಮತ್ತು ಕಟ್ಟಿಗೆಗಳಿಂದ ತಯಾರಿಸಲಾದ ಕಲಾಕೃತಿಗಳು, ಭಾರತೀಯ ಶೈಲಿಯ ಪೈಂಟಿಂಗ್, ಜೈನ ಗ್ರಂಥಗಳು ಹೀಗೆ ಸುಮಾರು 8000 ವಸ್ತುಗಳನ್ನು ಪ್ರದರ್ಶನಕ್ಕಿಡಲಾಗಿದೆ. ವಿದ್ಯಾರ್ಥಿಗಳು, ಕಲಾವಿದರಲ್ಲದೆ ಹಲವಾರು ಪ್ರವಾಸಿಗರು ಇಲ್ಲಿಗೆ ಭೇಟಿ ನೀಡುತ್ತಾರೆ.

ಇಲ್ಲಿರುವ ಮಾಂಡೋವಿ ನದಿಗೆ ಕಟ್ಟಲಾದ ಬಾನ್ಸಟಾರಿಮ್ ಸೇತುವೆ ಅಥವಾ ಸ್ಥಳೀಯವಾಗಿ ಕರೆಯಲ್ಪಡುವ ಮೆಟಾ ಸೇತುವೆಗೆ ನಸುಕಿನಲ್ಲೊ ಅಥವಾ ರಾತ್ರಿಯಲ್ಲೊ ಭೇಟಿ ನೀಡಿ. ಆಹಾ! ಎಂತಹ ಅದ್ಭುತ ದೃಶ್ಯಗಳು..ಖಂಡಿತವಾಗಿಯೂ ನಿಮ್ಮ ಮೈಮನಗಳನ್ನು ಪುಳಕಿತಗೊಳಿಸುತ್ತವೆ. ಇದನ್ನು ಮಾಂಡೋವಿ ಸೇತುವೆ ಎಂದೂ ಕೂಡ ಕರೆಯಲಾಗುತ್ತದೆ. 80 ರ ದಶಕದಲ್ಲಿ ಹಲವಾರು ಸಲ ಈ ಸೇತುವೆ ಬಿದ್ದಿದ್ದು ಈಗಲೂ ಸಹ ಆತಂಕದಿಂದ ಕೂಡಿರುವ ಏಷ್ಟೊ ಜನರು  ಸಂಚರಿಸಲು ಫೆರ್ರಿಯ ಸಹಾಯ ಪಡೆಯುತ್ತಾರೆ. ಆದರೂ ಕಳೆದ ಮೂರು ದಶಕಗಳಿಂದ ಕೆಲವು ಜನರು ಇದನ್ನು ನಿರ್ಭಯದಿಂದ ಉಪಯೋಗಿಸುತ್ತಲಿದ್ದಾರೆ. ಮಾಂಡೋವಿ ನದಿಯ ದಂಡೆಯ ಮೇಲಿರುವ 'ರೈಸ್ ಮಾಗೋಸ್' ಎಂಬ ಹಳ್ಳಿಯು 'ರೈಸ್ ಮಾಗೋಸ್ ಕೋಟೆ'ಗೆ ಜನಪ್ರೀಯವಾಗಿದ್ದು ಪಣಜಿಯಿಂದ ಸುಲಭವಾಗಿ ತಲುಪಬಹುದಾಗಿದೆ. ಸಮಗ್ರ ಪಣಜಿಯ ಅದ್ಭುತ ದೃಶ್ಯವನ್ನು ಈ ಕೋಟೆ ಮೇಲಿಂದ ಕಾಣಬಹುದಾಗಿದೆ. ಇತ್ತಿಚಿಗಷ್ಟೆ ಈ ಕೋಟೆಗೆ ಮೆರುಗು ನೀಡಲಾಗಿದೆ. ಅಗುವಾಡಾ ಕೋಟೆಗಿಂತ 50 ವರ್ಷ ಮುಂಚೆಯೇ ನಿರ್ಮಿಸಲಾದ ಈ ಕೋಟೆಗೆ ಭೇಟಿ ನೀಡಲೇ ಬೇಕು.

ಧಾರ್ಮಿಕವಾಗಿ ಪಣಜಿಯಲ್ಲಿ ಚಾಪೆಲ್ ಆಫ್ ಸಂತ ಕ್ಯಾಥರೀನ್ ಮತ್ತು ಪಣಜಿ ಚರ್ಚಗಳಿದ್ದು, ಹಿಂದುಗಳಿಗೆ ಮಹಾಲಕ್ಷ್ಮಿ ಮತ್ತು ಮಾರುತಿ ದೇವಸ್ಥಾನಗಳಿವೆ.ಒಂದು ಕೌತುಕದ ವಿಷಯವೆಂದರೆ 2012 ರ ಪ್ರಾರಂಭದಲ್ಲಿ ಕೆಲವು ಸ್ಥಳೀಯರು ಇಲ್ಲಿ ಗೂಳಿ ಕಾಳಗದ ಆಟವನ್ನು ಪ್ರಾರಂಭಿಸಿದ್ದರು. ಅತಿ ಶೀಘ್ರವಾಗಿ ಸ್ಥಳೀಯ ಆಡಳಿತದಿಂದ ಇದನ್ನು ನಿಲ್ಲಿಸಲಾಯಿತು. ಗೋವಾದ ಎಲ್ಲ ಭಾಗಗಳಿಂದ ಬಸ್ಸುಗಳ ಮುಖಾಂತರ ಪಣಜಿಗೆ ಸುಲಭವಾಗಿ ತಲುಪಬಹುದು. ಮುಂಬೈ ಅಥವಾ ಪುಣೆಯಿಂದ ಗೋವಾಗೆ ಬರುವಾಗ ನಿಮಗೆ ಮೊದಲು ಎದುರಾಗುವ ದೊಡ್ಡ ಪಟ್ಟಣವೇ ಪಣಜಿ. ವಿಮಾನ ನಿಲ್ದಾಣದಿಂದ ಪಣಜಿಯು 30 ನಿಮಿಷಗಳ ಪ್ರಯಾಣ ಕಾಲ ದೂರವಿದ್ದು, ಇಲ್ಲಿಗೆ ತಲುಪಲು ನಿಲ್ದಾಣದಿಂದ ಹೇರಳವಾಗಿ ಕ್ಯಾಬಗಳು ದೊರೆಯುತ್ತವೆ.

ಪಣಜಿ ಪ್ರಸಿದ್ಧವಾಗಿದೆ

ಪಣಜಿ ಹವಾಮಾನ

ಉತ್ತಮ ಸಮಯ ಪಣಜಿ

 • Jan
 • Feb
 • Mar
 • Apr
 • May
 • Jun
 • July
 • Aug
 • Sep
 • Oct
 • Nov
 • Dec

ತಲುಪುವ ಬಗೆ ಪಣಜಿ

 • ರಸ್ತೆಯ ಮೂಲಕ
  ಪ್ರಸಿದ್ಧ ಮುಂಬೈ-ಗೋವಾ ರಾಷ್ಟ್ರೀಯ ಹೆದ್ದಾರಿ ಸಂಖ್ಯೆ 17 ರ ಮೂಲಕ ಗೋವಾ ತಲುಪಬಹುದು. ಆದರೆ ಇತ್ತಿಚೆಗೆ, ಈ, ಟು ಲೇನ್ ಹೆದ್ದಾರಿಯು ಹೆಚ್ಚಿನ ಸಮಯ ತೆಗೆದುಕೊಳ್ಳುವುದರಿಂದ ಕುಖ್ಯಾತಿಗೊಳಗಾಗಿದ್ದು, ಮುಂಬೈನಿಂದ ಪುಣೆ, ಸತಾರಾ ಹಾಗು ಸಾವಂತವಾಡಿಯ ಮೂಲಕ ಪ್ರಯಾಣಿಸಬಹುದಾಗಿದೆ. ಮುಂಬೈ, ಪುಣೆಗಳಿಂದ ಹಲವಾರು ಬಸ್ ಸೇವೆಗಳು ಕೂಡ ಗೋವಾಗೆ ಲಭ್ಯವಿದೆ.
  ಮಾರ್ಗಗಳ ಹುಡುಕಾಟ
 • ರೈಲಿನ ಮೂಲಕ
  ಗೋವಾ, ಭಾರತದ ಉತ್ತರ, ದಕ್ಷಿಣ ಮತ್ತು ಕೇಂದ್ರ ಭಾಗಗಳಿಗೆ ಉತ್ತಮವಾದ ರೈಲು ಸಂಪರ್ಕವನ್ನು ಹೊಂದಿದೆ. ಮುಂಬೈ ನಿಂದ ಗೋವಾಗೆ ಅನುಕೂಲಕರವಾದ ಆಗಮನ ಮತ್ತು ನಿರ್ಗಮನ ವೇಳೆಗಳನ್ನು ಹೊಂದಿದ ಹಲವಾರು ರೈಲುಗಳು ಲಭ್ಯವಿದೆ.
  ಮಾರ್ಗಗಳ ಹುಡುಕಾಟ
 • ಆಕಾಶದ ಮೂಲಕ
  ದಕ್ಷಿಣ ಗೋವಾದ ದಾಬೋಲಿಮ್ ವಿಮಾನ ನಿಲ್ದಾಣವು ಮುಂಬೈ, ದೆಹಲಿ ಮತ್ತು ಬೆಂಗಳೂರಿನಂತಹ ನಗರಗಳೊಂದಿಗೆ ಉತ್ತಮ ಸಂಪರ್ಕವನ್ನು ಹೊಂದಿದೆ. ಇಲ್ಲಿಂದ ಸಾಕಷ್ಟು ಕ್ಯಾಬ್ ಗಳು ದೊರೆಯುತ್ತವೆ. ಮತ್ತೊಂದು ಸಂಗತಿಯೆಂದರೆ ಈ ವಿಮಾನ ನಿಲ್ದಾಣವು ಅಂತಾರಾಷ್ಟ್ರೀಯ ನಿಲ್ದಾಣವಿಲ್ಲದ್ದರಿಂದ, ಹೊರದೇಶದ ಪ್ರವಾಸಿಗರು ಮುಂಬೈ ಅಥವಾ ದೆಹಲಿಗೆ ಬಂದು ಇಲ್ಲಿ ಬರಬೇಕಾಗುತ್ತದೆ.
  ಮಾರ್ಗಗಳ ಹುಡುಕಾಟ
One Way
Return
From (Departure City)
To (Destination City)
Depart On
22 Jan,Sat
Return On
23 Jan,Sun
Travellers
1 Traveller(s)

Add Passenger

 • Adults(12+ YEARS)
  1
 • Childrens(2-12 YEARS)
  0
 • Infants(0-2 YEARS)
  0
Cabin Class
Economy

Choose a class

 • Economy
 • Business Class
 • Premium Economy
Check In
22 Jan,Sat
Check Out
23 Jan,Sun
Guests and Rooms
1 Person, 1 Room
Room 1
 • Guests
  2
Pickup Location
Drop Location
Depart On
22 Jan,Sat
Return On
23 Jan,Sun