Search
  • Follow NativePlanet
Share
ಮುಖಪುಟ » ಸ್ಥಳಗಳು » ಪಣಜಿ » ಆಕರ್ಷಣೆಗಳು » ಸಿ ಕ್ಯಾಥೆಡ್ರಲ್ ಆಫ್ ಸ್ಯಾಂಟಾ ಕ್ಯಾತರೀನಾ

ಸಿ ಕ್ಯಾಥೆಡ್ರಲ್ ಆಫ್ ಸ್ಯಾಂಟಾ ಕ್ಯಾತರೀನಾ, ಪಣಜಿ

1

'ಕ್ಯಾಥರೀನ್ ಆಫ್ ಅಲೇಕ್ಸಾಂಡ್ರಿಯಾ'ಗೆ ಸಮರ್ಪಿತವಾದ, ಸಿ ಕ್ಯಾಥೆಡ್ರಲ್ ಆಫ್ ಸ್ಯಾಂಟಾ ಕ್ಯಾತರೀನಾ ಚರ್ಚವನ್ನು, ಕಟು ವಿರೋಧದ ನಡುವೆಯು ಬಹುಶಹ ಭಾರತದಲ್ಲೇ ಅತಿ ದೊಡ್ಡದಾದ  ಚರ್ಚವೆಂದು ಹೇಳಬಹುದು. ಪ್ರತಿ 'ಕ್ರಿಸ್ಮಸ್' ಸಮಯದಲ್ಲಿ ಸಾವಿರಾರು ಪ್ರವಾಸಿಗರು ಇದಕ್ಕೆ ಭೇಟಿ ನೀಡುತ್ತಾರೆ. 250 ಅಡಿ ಉದ್ದ ಮತ್ತು 181 ಅಡಿ ಅಗಲವಿರುವ ಈ ಚರ್ಚ್ 115 ಅಡಿ ಎತ್ತರವನ್ನು ಹೊಂದಿದೆ ಎಂದರೆ ಅಚ್ಚರಿಯಾಗದೆ ಇರಲಾರದು!  ಇದರ ಹತ್ತಿರವೆ ಇರುವ ಇನ್ನೊಂದು ಪ್ರಸಿದ್ಧ ಚರ್ಚ್ ಎಂದರೆ ಸಂತ ಫ್ರಾನ್ಸಿಸ್ ಆಫ್ ಅಸ್ಸಿಸಿ. ಕ್ಯಾಥರೀನಗೆಂದೆ ಸಮರ್ಪಿತವಾದ ಚಚುಗಳಲ್ಲಿ ಇದು ಕೂಡ ಒಂದಾಗಿದೆ. ಇನ್ನುಳಿದ ಈ ತರಹದ ಚರ್ಚುಗಳಲ್ಲಿ ಬಹುತೇಕವನ್ನು ಬ್ರೆಜಿಲನಲ್ಲಿ ಕಾಣಬಹುದಾಗಿದೆ.

ಇತಿಹಾಸ

ಗೋವಾದ ಸಿ ಕ್ಯಾಥೆಡ್ರಲ್ ಆಫ್ ಸ್ಯಾಂಟಾ ಕ್ಯಾತರೀನಾ ಚರ್ಚನ್ನು ಬೇರೆಡೆಗಳಿಗಿಂತಲೂ ನಿರ್ಮಲವಾಗಿ ಇಡಲಾಗಿದೆ ಎಂದು ಹೇಳಬಹುದು. ಮೊಘಲರ ಮೇಲಿನ ವಿಜಯದ ಸಂಕೇತವಾಗಿ ಪೋರ್ಚುಗೀಸರು ಇದನ್ನು 1510 ರಲ್ಲಿ ಕಟ್ಟಿದರು. ಮೂಲವಾಗಿ ಇದು ಎರಡು ಗೋಪುರಗಳನ್ನು ಹೊಂದಿದ್ದು ಕಾಲಕ್ರಮೇಣ ಒಂದು ಗೋಪುರವು ನಶಿಸಿ ಹೋಯಿತು. ಆದುದರಿಂದ ಈಗಲೂ ಕೂಡ ಈ ಕಟ್ಟಡದಲ್ಲಿ ಅಸಮಾನತೆಯನ್ನು ಗಮನಿಸಬಹುದು. ಇನ್ನೊಂದು ವಿಷಯವೆಂದರೆ ಕ್ಯಾಥರೀನಳ ಹಬ್ಬದ ಸಮಯದಂದೇ ಪೋರ್ಚುಗೀಸರು ಮೊಘಲರ ವಿರುದ್ಧ ಗೆಲುವು ಪಡೆದಿದ್ದರಿಂದ ಈ ಚರ್ಚನ್ನು ಕ್ಯಾಥರೀನಳಿಗೆ ಸಮರ್ಪಿಸಲಾಯಿತು. ಸ್ವಾರಸ್ಯಕರ ವಿಷಯವೆಂದರೆ ಈ ಚರ್ಚನ್ನು ಮೊದಲೆ ಕಟ್ಟಲಾಗಿದ್ದರೂ ಕೂಡ ಪೂರ್ಣಪ್ರಮಾಣದಲ್ಲಿ ಕಾರ್ಯಾರಂಭಗೊಂಡಿದ್ದು ಈ ಸಮಯದಲ್ಲೆ. 1619 ರಲ್ಲಿ ಇದರ ನಿರ್ಮಾಣವಾಗಿದ್ದು 1640 ರಿಂದ ಚಟುವಟಿಕೆಯಲ್ಲಿ ತೊಡಗಿತು.ಚರ್ಚನ ಒಳಾಂಗಣದಲ್ಲಿ ಪ್ರಾರ್ಥನಾ ಸ್ಥಳವು ಅತ್ಯ್ದ್ಭುತವಾಗಿ ಮೂಡಿ ಬಂದಿದ್ದು 'ಕ್ಯಾಥರೀನ್ ಆಫ್ ಅಲೇಕ್ಸಾಂಡ್ರಿಯಾ'ಗೆ ಸಮರ್ಪಿತವಾಗಿದೆ. ಸುಮಧುರವಾದ ಸಂಗೀತ ಹೊರಸೂಸುವ ಘಂಟೆಯನ್ನು ಇದರ ಮೇಲ್ಭಾಗದಲ್ಲಿ ನೋಡಬಹುದಾಗಿದ್ದು ಇದನ್ನು 'ಗೊಲ್ಡನ್ ಬೆಲ್' ಅಥವಾ ಬಂಗಾರದ ಘಂಟೆ ಎಂದೆ ಕರೆಯಲಾಗುತ್ತದೆ. ಇನ್ನು ಇದರ ಬಲಭಾಗದಲ್ಲಿ 'ಕ್ರಾಸ್ ಆಫ್ ಮಿರಾಕಲ್ಸ್' ಎಂದು ಕರೆಯಲ್ಪಡುವ ಶಿಲುಭೆಯಿದ್ದು, 1919 ರಲ್ಲಿ ಜಿಸಸ್ ಕ್ರಿಸ್ತನು ಇದರಲ್ಲಿ ದರ್ಶನ ನಿಡಿದ್ದನೆಂದು ಹೇಳಲಾಗುತ್ತದೆ.

ತಲುಪುವುದು ಹೇಗೆ?

ಪಣಜಿಯಿಂದ ಪೂರ್ವಕ್ಕೆ 9 ಕಿ.ಮೀ ದೂರದಲ್ಲಿ ಸಂತ ಕ್ಯಾಥರೀನ್ ಚರ್ಚ ಇದೆ. ಪಣಜಿ, ವಾಸ್ಕೊ ಡಾ ಗಾಮಾ ಮತ್ತು ಮಾರ್ಗೊದಿಂದ ಕ್ಯಾಬಗಳು ದೊರೆಯುತ್ತವೆ. ಉತ್ತರ ಹಾಗು ದಕ್ಷಿಣ ಭಾಗದ ಗೋವಾದಿಂದ ಸ್ವಲ್ಪ ದೂರವಿರುವುದರಿಂದ ಬೈಕಗಳ ಮುಖಾಂತರವೂ ಕೂಡ ಹೋಗಬಹುದು. ಇಲ್ಲಿಂದ ಸಂತ ಫ್ರಾನ್ಸಿಸ್ ಆಫ್ ಅಸ್ಸಿಸಿ ಮತ್ತು ಕಾನ್ವೆಂಟ್ ಚರ್ಚ್ ಬಹಳ ಹತ್ತಿರದಲ್ಲಿದೆ.

One Way
Return
From (Departure City)
To (Destination City)
Depart On
28 Mar,Thu
Return On
29 Mar,Fri
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
28 Mar,Thu
Check Out
29 Mar,Fri
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
28 Mar,Thu
Return On
29 Mar,Fri