Search
  • Follow NativePlanet
Share
ಮುಖಪುಟ » ಸ್ಥಳಗಳು » ಪಣಜಿ » ಆಕರ್ಷಣೆಗಳು » ಅವರ್ ಲೇಡಿ ಆಫ್ ಇಮ್ಮ್ಯಾಕ್ಯುಲೇಟ್ ಕನ್ಸೆಪ್ಷನ್

ಅವರ್ ಲೇಡಿ ಆಫ್ ಇಮ್ಮ್ಯಾಕ್ಯುಲೇಟ್ ಕನ್ಸೆಪ್ಷನ್, ಪಣಜಿ

2

ಪಣಜಿ ನಗರದ ಅತ್ಯದ್ಭುತ ದೃಶ್ಯಗಳು, ವೈಭವಯುತ ಶ್ವೇತ ವರ್ಣದ ಪ್ರತೀಕ, ಆಧುನಿಕ ವಾಸ್ತುಶಿಲ್ಪ ಇವೆಲ್ಲವುಗಳನ್ನು ಒಳಗೊಂಡ ಪಣಜಿಯ ಸುಪ್ರಸಿದ್ಧ ಚರ್ಚ್ 'ಅವರ್ ಲೇಡಿ ಆಫ್  ಇಮ್ಮ್ಯಾಕ್ಯುಲೇಟ್ ಕನ್ಸೆಪ್ಷನ್ '.ಸ್ವಚ್ಛತೆ ಹಾಗು ನಿರ್ಮಲತೆಯಿಂದ ಕೂಡಿದ ಈ ಚರ್ಚ್ ಆವರಣ, ನಡೆಯಲು ಶಿಸ್ತುಬದ್ಧವಾದ ಉಪದಾರಿಗಳನ್ನು ಹೊಂದಿದ್ದು ಪ್ರವೇಶ ದ್ವಾರದಲ್ಲಿ 'ವಿರ್ಜಿನ್ ಮೇರಿ'ಯ ಪ್ರತಿಮೆಯನ್ನು ಒಳಗೊಂಡಿದೆ. ಇದರ ಮೂಲ ನಿರ್ಮಾಣ 1541 ರಲ್ಲಾಗಿದ್ದು ನಂತರ 1619 ರಲ್ಲಿ ಮತ್ತೊಮ್ಮೆ ಸಂಪೂರ್ಣವಾಗಿ ನವಿಕರಣಗೊಳಿಸಲಾಯಿತು.

ಚರ್ಚ್ ನ ಒಳಾಂಗಣವು ತುಂಬಾ ಸರಳವಾಗಿರುವುದು ಕಂಡುಬರುತ್ತದೆ. ಚರ್ಚ್ ನ ಮುಖ್ಯ 'ಅಲ್ಟರ್' ವು ಅವರ್ ಲೇಡಿ ಆಫ್  ಇಮ್ಮ್ಯಾಕ್ಯುಲೇಟ್ ಕನ್ಸೆಪ್ಷನ್, ಮೇರಿಗೆ ಸಮರ್ಪಿತವಾಗಿದ್ದು, ಉಳಿದೆರಡು ಉಪ 'ಅಲ್ಟರ್' ಗಳು  ಕ್ರಮವಾಗಿ ಜೀಸಸ್ ಕ್ರೈಸ್ಟ್ ಮತ್ತು ಅವರ್ ಲೇಡಿ ಆಫ್ ರೊಸರಿಗೆ ಸಮರ್ಪಿತವಾಗಿವೆ.

ಇಲ್ಲಿನ 'ಚಾಪೆಲ್'ವು ಸಂತ ಫ್ರಾನ್ಸಿಸ್ ಕ್ಸೇವಿಯರ್ ಗೆ ಸಮರ್ಪಿತವಾಗಿದೆ. ರಾತ್ರಿ ಸಮಯದಲ್ಲಿ ಈ ಚರ್ಚ್ ಲೈಟುಗಳಿಂದ ಅಲಂಕೃತಗೊಂಡು ನೋಡಲು ಅತ್ಯಾಕರ್ಷಕವಾಗಿ ಕಾಣಿಸುತ್ತದೆ. ಸುತ್ತಮುತ್ತಲು ವ್ಯಾಪಾರ ಮಾರುಕಟ್ಟೆಯಿದ್ದು ಒಟ್ಟಾರೆಯಾಗಿ ಈ ಪ್ರದೇಶವು ಲವಲವಿಕೆಯಿಂದ ಕೂಡಿರುತ್ತದೆ.ಇನ್ನು ಇಲ್ಲಿಗೆ ತಲುಪುವುದು ಬಹಳ ಸುಲಭವಾಗಿದ್ದು ವಾಸ್ಕೊ, ಮಾರ್ಗೊ ಮತ್ತು ಪಣಜಿ ನಗರದ ವಿವಿಧೆಡೆಗಳಿಂದ ನಿರಂತರ ಬಸ್ ಸೇವೆಗಳು ಲಭ್ಯ. ಬಾಗಾ, ಕಲಂಗುಟ್ ಮತ್ತು ಕ್ಯಾಂಡೋಲಿಮ್ ನಲ್ಲಿಯ ಪ್ರವಾಸಿಗರು ಕ್ಯಾಬ್, ರಿಕ್ಷಾ ಇಲ್ಲವೆ ಬೈಕ್ ಗಳ ಮುಖಾಂತರ ಇಲ್ಲಿಗೆ ತಲುಪಬಹುದು.

One Way
Return
From (Departure City)
To (Destination City)
Depart On
24 Jul,Fri
Return On
25 Jul,Sat
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
24 Jul,Fri
Check Out
25 Jul,Sat
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
24 Jul,Fri
Return On
25 Jul,Sat