Search
  • Follow NativePlanet
Share
ಮುಖಪುಟ » ಸ್ಥಳಗಳು» ಪನ್ಹಾಲಾ

ಪನ್ಹಾಲಾ - ಸುಂದರ, ಮನಮೋಹಕ ಗಿರಿಧಾಮ

19

ಭಾರತ ದೇಶವು ತನ್ನ ಸುತ್ತ ಹಲವಾರು ಐತಿಹಾಸಿಕ ಹಾಗೂ ಪುರಾಣ ಕಥೆಗಳಿಂದ ಗುರುತಿಸಲ್ಪಟ್ಟಿದೆ. ಭಾರತದಲ್ಲಿ ಆಳಿದ ಅನೇಕಾನೇಕ ರಾಜವಂಶಗಳಿಂದ ಹಿಡಿದು ಕೊನೆಯಲ್ಲಿ ಬಂದ ಬ್ರಿಟೀಷರ ವರೆಗಿನ ಇತಿಹಾಸವನ್ನು ಇಲ್ಲಿನ ಕೋಟೆ-ಕೊತ್ತಲಗಳೇ ವಿವರಿಸುತ್ತವೆ. ಇಲ್ಲಿನ ಬೆಟ್ಟ ಗುಡ್ಡಗಳು ಕಣಿವೆಗಳ ಸಾಲು ಒಂದೊಂದು ಕಥೆಯನ್ನು ಆಧರಿಸಿ ನಿಂತಿವೆ!

ಭಾರತದ ಮಹಾರಾಷ್ಟ್ರ ರಾಜ್ಯವು ಅನೇಕ ಇಂತಹ ಘಟನೆಗಳಿಗೆ, ಕಥೆಗಳಿಗೆ ಸಾಕ್ಷಿ ಒದಗಿಸುತ್ತದೆ. ಶಿವಾಜಿ ಮಹಾರಾಜನಿಗೆ ಸಂಬಂಧಿಸಿದ ಕೋಟೆಗಳು ಹಲವಾರು ವೈಚಿತ್ರ್ಯಗಳಿಗೆ ನಾಂದಿಯಾಗಿವೆ. ಚಾರಣವನ್ನು ಮಾಡುತ್ತ ಪ್ರಕೃತಿ ಸೌಂದರ್ಯವನ್ನು ಉಣಿಸುವಲ್ಲಿ ಮಹಾರಾಷ್ಟ್ರದ ಪನ್ಹಾಲಾ ಪ್ರದೇಶ ಹೆಸರು ಮಾಡಿದೆ. ಈ ಪ್ರದೇಶವು ಅತ್ಯಂತ ಚಿಕ್ಕ ಪಟ್ಟಣವಾಗಿದ್ದರೂ ಕೂಡಾ ಇಲ್ಲಿನ ಆಕರ್ಷಣೆಗಳು ಮಾತ್ರ ಅಗಣ್ಯ!

ಪನ್ಹಾಲಾ, ಇದೊಂದು ಪ್ರಮುಖವಾದ ಗಿರಿಧಾಮವಾಗಿದ್ದು ಮಹಾರಾಷ್ಟ್ರ ರಾಜ್ಯದ ಕೊಲ್ಹಾಪುರ ಜಿಲ್ಲೆಯಲ್ಲಿದೆ. ಇದು ಸಮುದ್ರ ಮಟ್ಟಕ್ಕಿಂತ ಸುಮಾರು 3200 ಅಡಿಗಳಷ್ಟು ಎತ್ತರದಲ್ಲಿದೆ. ಹಾಗೂ ಇದು ಕೊಲ್ಹಾಪುರ ಜಿಲ್ಲೆಯ ಅತ್ಯಂತ ಸಣ್ಣ ನಗರ ಎಂದು ಹೇಳಲ್ಪಟ್ಟಿದೆ.

ಸಾಂಸ್ಕೃತಿಕ ಸ್ಮರಣೆ

ಪನ್ಹಾಲಾ ಪಟ್ಟಣದ ಇತಿಹಾಸವು ಮಹಾನ್ ಶಿವಾಜಿ ಮಹಾರಾಜನ ನೇತೃತ್ವದ ಮರಾಠಾ ಸಾಮ್ರಾಜ್ಯದ ಸಾಂಪ್ರದಾಯಿಕ ಆಡಳಿತದ ಕಾಲಕ್ಕೆ ನಮ್ಮನ್ನು ಕೊಂಡೊಯ್ಯುತ್ತದೆ. ಈ ಪ್ರದೇಶದಲ್ಲಿ ಶಿವಾಜಿಯು 500 ದಿನಗಳ ಕಾಲ ತಂಗಿದ್ದ ಎಂದು ಪ್ರಸಿದ್ಧಿಯನ್ನು ಪಡೆದಿದೆ. ನಂತರ 1827 ರಲ್ಲಿ ಈ ಪ್ರದೇಶವು ಬ್ರಿಟೀಷರ ಆಳ್ವಿಕೆಗೆ ಒಳಪಟ್ಟಿತ್ತು.

ಪನ್ಹಾಲಾ – ಐತಿಹಾಸಿಕ ಆಕರ್ಷಣೆ

ಪನ್ಹಾಲಾ ಕೋಟೆ ಒಂದು ಪ್ರಮುಖ ಪ್ರವಾಸಿ ಆಕರ್ಷಣೀಯ ಸ್ಥಳವಾಗಿದೆ. ಸಜ್ಜಾ ಕೋಥಿ ಅಥವಾ ಕೋಟೆ ಇದು ಪನಿಶ್ಮೇಂಟ್ ಸೆಲ್/ ಶಿಕ್ಷಾ ಕೊಠಡಿ ಎಂಬ ಪದದಿಂದ ತರ್ಜುಮೆಗೊಂಡಿದೆ. ಈ ಸ್ಥಳವು ಶಿವಾಜಿಯು ಹೇಗೆ ಕೋಟೆಯಿಂದ ತಪ್ಪಿಸಿಕೊಂಡ ಎಂಬುದನ್ನು ರೋಚಕವಾಗಿ ವಿವರಿಸುತ್ತದೆ.ತೀನ್ ದರ್ವಾಜಾ, ಮೂರು ದ್ವಾರ (ಗೇಟ್)ದ ಮೂಲಕ ಪ್ರವೇಶಿಸಲು ಸಾಧ್ಯವಿರುವ ಇಲ್ಲಿನ ಏಕೈಕ ಕೋಟೆ. ಈ ಪ್ರವೇಶ ಗೋಡೆಗಳು ಅತ್ಯಂತ ದೊಡ್ಡದಾಗಿದ್ದು, ಎತ್ತರವಾಗಿದೆ. ಬ್ರಿಟೀಷರು ಪನ್ಹಾಲಾವನ್ನು ವಶಪಡಿಸಿಕೊಳ್ಳುವ ಮೊದಲು ಕೋಟೆಯ ಇದೇ ಬಾಗಿಲಿನ ಮೂಲಕ ಪ್ರವೇಶಿಸಿದ್ದರು ಎಂದು ಹೇಳಲಾಗುತ್ತದೆ. ಅಂಬಾರ್ ಖಾನಾ ಕೋಟೆಯು ಪುರಾತನ ಕಾಲದ ಇನ್ನೊಂದು ಹಳೆಯ ಕಣಜವಾಗಿತ್ತು. ಇಲ್ಲಿಯೆ ಹತ್ತಿರದಲ್ಲಿರುವ ಸೋಮೇಶ್ವರ ದೇವಾಲಯವು ಹಿಂದಿನ ಧಾರ್ಮಿಕ ವೈಭವವನ್ನು ಎತ್ತಿ ತೋರಿಸುತ್ತದೆ.  ಪನ್ಹಾಲಾ ಪಟ್ಟಣವು ಚಾರಣಕ್ಕೆ ಸೂಕ್ತವಾದ ತಾಣವಾಗಿದೆ. ಶಾಂತಿಯುತ, ಮಾಲಿನ್ಯ ರಹಿತ ಹಾಗೂ ದೃಶ್ಯ ವಾತಾವರಣದೊಂದಿಗೆ ಆಕರ್ಷಕ ತಾಣವಾದ ಪನ್ಹಾಲಾ, ಕಾಂಕ್ರೀಟ್ ಕಾಡುಗಳಿಂದ ಹೊಸ ಬದಲಾವಣೆಯನ್ನು ನೀಡುವಂತಹ ಉತ್ತಮವಾದ ಸ್ಥಳ.

ಇಲ್ಲಿರುವ ಕೋಟೆಗಳು ಹಾಗೂ ಬೆಟ್ಟಗಳ ಶ್ರೇಣಿಗಳು ಚಾರಣ ಮಾಡುವುದಕ್ಕೆ ಒಂದು ಅದ್ಭುತ ಜಾಗವನ್ನು ಒದಗಿಸುತ್ತವೆ. ಹಾಗೆಯೆ, ಚಾರಣ ಚಟುವಟಿಕೆಗಳಿಗೂ ಇದು ಉತ್ತಮ ಸ್ಥಳ. ಪ್ರಕೃತಿ ಆರಾಧಕರಿಗೆ ಇಲ್ಲಿನ ಕಣಿವೆಗಳ ಸೌಂದರ್ಯ ಮನಸೆಳೆಯುತ್ತದೆ. ಜೊತೆಗೆ ಈ ಸ್ಥಳವು ಶಾಂತವಾಗಿದ್ದು ಉಸಿರುಗಟ್ಟಿಸುವಂತಹ ಸೆಳೆತವನ್ನು ಹೊಂದಿದೆ.

ಪನ್ಹಾಲಾ – ಯಾವಾಗ, ಯಾಕೆ ಹಾಗೂ ತಲುವುವುದು ಹೇಗೆ ?

ಒಂದು ಸಣ್ಣ ಸುಂದರವಾದ ಪನ್ಹಾಲಾ ಪಟ್ಟಣ ಬೆಟ್ಟಗಳ ತಪ್ಪಲಿನಲ್ಲಿದ್ದು, ವರ್ಷದ ಎಲ್ಲಾ ತಿಂಗಳುಗಳಲ್ಲಿ ಸಂತೋಷಕರವಾದ, ಆಹ್ಲಾದಕರವಾದ ವಾತಾವರಣವನ್ನು ಹೊಂದಿರುತ್ತದೆ. ಇಲ್ಲಿ, ಬೇಸಿಗೆಯು ಅಷ್ಟೊಂದು ಶಾಖಯುಕ್ತವಾಗಿರುವುದಿಲ್ಲ ಹಾಗೂ ಚಳಿಗಾಲವು ತಂಪಾಗಿರುತ್ತದೆ. ಮಳೆಗಾಲವು ಇಲ್ಲಿನ ಸ್ಥಳೀಯ ಸೌಂದರ್ಯವನ್ನು ಇನ್ನಷ್ಟು ಹೆಚ್ಚಿಸುತ್ತದೆ. ತಾಜಾ ಗಾಳಿ ತಂಪಾದ ಪರಿಸರದ ನಡುವೆ ಮನಮೋಹಕ ಜಲಪಾತಗಳು ಹಾಗೂ ಈಗೀಗ ತುಕ್ಕು ಹಿಡಿಯುತ್ತಿರುವ ಕೋಟೆಗಳನ್ನು ನೀವು ಕಾಣಬಹುದು. ವರ್ಷದ ಯಾವುದೆ, ಸಮಯದಲ್ಲಾದರೂ ನಿಮ್ಮ ಒತ್ತಡದ ಬದುಕಿನಿಂದ ಸ್ವಲ್ಪ ಸಮಯ ಹೊರಗೆ ಬಂದು ವಿಶ್ರಾಂತಿಯನ್ನು ಪಡೆಯಲು ಪನ್ಹಾಲಾ ಅತ್ಯುತ್ತಮವಾದ ಸ್ಥಳ. ಆದಾಗ್ಯೂ ನೀವು ಮಳೆಯ ಬಗ್ಗೆ ಉತ್ಸಾಹಿಗಳಾಗದಿದ್ದಲ್ಲಿ ಜೂನ್ ಹಾಗೂ ಆಗಸ್ಟ್ ತಿಂಗಳಿನಲ್ಲಿ ಇಲ್ಲಿಗೆ ಬರದಿರುವುದೆ ಉತ್ತಮ.

ಪನ್ಹಾಲಾ ಸ್ಥಳವನ್ನು ವಿಮಾನ, ರೈಲ್ವೆ, ಹಾಗೂ ರಸ್ತೆ ಹೀಗೆ ಎಲ್ಲಾ ಸಾರಿಗೆ ವಿಧಾನದ ಮೂಲಕ ಸುಲಭವಾಗಿ ತಲುಪಬಹುದು. ಮಹಾರಾಷ್ಟ್ರದ ಒಂದು ಪ್ರಮುಖವಾದ ನಗರ ಕೊಲ್ಹಾಪುರ ಹತ್ತಿರದಲ್ಲಿರುವ ಕಾರಣ ಇಲ್ಲಿಗೆ ತಲುಪುವುದು ಸುಲಭವಾಗಿದೆ. ವಿಮಾನ ಮಾರ್ಗದ ಮೂಲಕ ಹೋಗುವುದಾದರೆ ಕೊಲ್ಹಾಪುರ ವಿಮಾನ ನಿಲ್ದಾಣ ಹತ್ತಿರದಲ್ಲಿದ್ದು ಬೆಟ್ಟಗಳ ಪ್ರದೇಶಕ್ಕೆ ತಲುಪಲು ಕ್ಯಾಬ್ ಗಳು ಇಲ್ಲಿಂದ ಲಭ್ಯ. ಪನ್ಹಾಲಾ ಪ್ರದೇಶವು ನಮ್ಮ ಭಾರತೀಯ ನಾಯಕನ ವಿಲಕ್ಷಣ ಮತ್ತು ಧೀರ ಇತಿಹಾಸಕ್ಕೆ ಮರುಜೀವ ನೀಡುವಂತಹ ಒಂದು ಪ್ರಸಿದ್ಧ ತಾಣವಾಗಿದೆ. ಸುತ್ತಲೂ ಆಹ್ಲಾದಕರ ಪ್ರಕೃತಿ ಜೊತೆಗೂಡಿ ಹರಡಿದ ಕೋಟೆಗಳು ಈ ನಗರದ ನೋಟವನ್ನು ಪ್ರವಾಸಿಗರ ದೃಷ್ಟಿಕೋನದಿಂದ ಇನ್ನಷ್ಟು ಉತ್ತಮಗೊಳಿಸಿವೆ. ಈ ಸ್ಥಳವು ನೀವು ಮತ್ತೊಮ್ಮೆ ನಿಮ್ಮ ರಜಾ ದಿನಗಳನ್ನು ಕಳೆಯಲು ಬರುವಂತಹ ಸ್ಥಳ ಎಂಬ ಭಾವನೆ ಮೂಡಿಸದೆ ಇರಲಾರದು. ಈ ಸ್ಥಳದ ಶ್ರೀಮಂತ ಐತಿಹಾಸಿಕ ಆಕರ್ಷಣೆಯೆ ನಿಧಾನವಾಗಿ ನಿಮಗೆ ಎಲ್ಲವನ್ನು ತಿಳಿಸಿಕೊಡುವುದರಿಂದ ನಿಮ್ಮ ಎಲ್ಲಾ ಅನುಮಾನಗಳನ್ನು ಇಲ್ಲಿಗೆ ಭೇಟಿ ನೀಡಿದಾಗ ಬಗೆಹರಿಸಿಕೊಳ್ಳಬಹುದು.

ಪನ್ಹಾಲಾ ಪ್ರಸಿದ್ಧವಾಗಿದೆ

ಪನ್ಹಾಲಾ ಹವಾಮಾನ

ಉತ್ತಮ ಸಮಯ ಪನ್ಹಾಲಾ

  • Jan
  • Feb
  • Mar
  • Apr
  • May
  • Jun
  • July
  • Aug
  • Sep
  • Oct
  • Nov
  • Dec

ತಲುಪುವ ಬಗೆ ಪನ್ಹಾಲಾ

  • ರಸ್ತೆಯ ಮೂಲಕ
    ನೀವು ಮುಂಬೈನಿಂದ ಪ್ರಯಾಣ ಮಾಡುವವರಾಗಿದ್ದರೆ, ಕೊಲ್ಹಾಪುರ ಮಾರ್ಗದ ಮೂಲಕ ಪನ್ಹಾಲಾ ಪ್ರದೇಶವು 428 ಕೀ.ಮಿ ದೂರದಲ್ಲಿದ್ದು ಸುಮಾರು ಎಂಟು ಗಂಟೆಗಳ ಕಾಲ ಪ್ರಯಾಣ ಮಾಡಬೇಕಾಗುತ್ತದೆ. ಪುಣೆಯು 200 ಕೀ.ಮಿ ದೂರದಲ್ಲಿದ್ದು ನಾಶಿಕವು 450 ಕೀ.ಮಿ ಅಂತರದಲ್ಲಿದೆ. ಇಲ್ಲಿಂದ ಹಲವಾರು ಬಸ್ಸುಗಳು ಎಲ್ಲಾ ಪ್ರಮುಖ ನಗರವನ್ನು ಭರಿಸಬಹುದಾದ ವೆಚ್ಚದಲ್ಲಿ ತಲುಪಲು ಸಾಧ್ಯವಾಗುತ್ತದೆ. ಈ ಬಸ್ಸುಗಳು ಖಾಸಗಿ ಅಥವಾ ರಾಜ್ಯ ಸಾರಿಗೆಗಳಾಗಿರಬಹುದು. ಆದರೆ ಪ್ರಯಾಣ ದರವು ನೀವು ಆಯ್ದುಕೊಂಡ ಬಸ್ ಅನ್ನು ಅವಲಂಬಿಸಿರುತ್ತದೆ.
    ಮಾರ್ಗಗಳ ಹುಡುಕಾಟ
  • ರೈಲಿನ ಮೂಲಕ
    ಕೊಲ್ಹಾಪುರ ರೈಲ್ವೆ ನಿಲ್ದಾಣವು ಪನ್ಹಾಲಾ ದಿಂದ್ 30 ಕೀ.ಮಿ ದೂರದಲ್ಲಿದ್ದು ಅತ್ಯಂತ ಹತ್ತಿರದ ರೈಲ್ವೆ ನಿಲ್ದಾಣವಾಗಿದೆ. ಮುಂಬೈನ ವಿ.ಟಿ ರೈಲ್ವೆ ನಿಲ್ದಾಣವು ಕೊಲ್ಹಾಪುರ ನಿಲ್ದಾಣವನ್ನು ಎಲ್ಲಾ ಪ್ರಮುಖ ಪಟ್ಟಣದ ಮೂಲಕ ಸಂಪರ್ಕಿಸುತ್ತದೆ. ಸಹ್ಯಾದ್ರಿ ಎಕ್ಸ್ ಪ್ರೆಸ್, ಮತ್ತು ಮಹಾಲಕ್ಷ್ಮಿ ಎಕ್ಸ್ ಪ್ರೆಸ್ ಮೂಲಕ ಮುಂಬೈನಿಂದ ಕೊಲ್ಹಾಪುರಕ್ಕೆ ಆರಾಮದಾಯಕವಾಗಿ ಪ್ರಯಾಣ ಮಾಡಬಹುದು.
    ಮಾರ್ಗಗಳ ಹುಡುಕಾಟ
  • ಆಕಾಶದ ಮೂಲಕ
    ಪನ್ಹಾಲಾದಿಂದ 20 ಕೀ.ಮಿ ದೂರದಲ್ಲಿರುವ ಕೊಲ್ಹಾಪುರ ವಿಮಾನ ನಿಲ್ದಾಣವು ಹತ್ತಿರದ ನಿಲ್ದಾಣವಾಗಿದೆ. ಕೊಲ್ಹಾಪುರ ವಿಮಾನ ನಿಲ್ದಾಣದಿಂದ ಹೊರಡುವ ಎಲ್ಲಾ ವಿಮಾನಗಳು ಭಾರತದ ಎಲ್ಲಾ ಪ್ರಮುಖ ನಗರಗಳೊಂದಿಗೆ ಸಂಪರ್ಕ ಕಲ್ಪಿಸುತ್ತವೆ. ಇಲ್ಲಿಂದ ಪನ್ಹಾಲಾವನ್ನು ತಲುಪಲು ಕ್ಯಾಬ್ ಸೌಲಭ್ಯವಿದ್ದು ಶುಲ್ಕವು ಸುಮಾರು 600 ರೂ. ಗಳಷ್ಟಾಗಬಹುದು. ಅಲ್ಲದೆ ಮುಂಬೈನ ಛತ್ರಪತಿ ಶಿವಾಜಿ ವಿಮಾನ ನಿಲ್ದಾಣವು ಹತ್ತಿರದ ಅಂತರ ರಾಷ್ಟ್ರೀಯ ವಿಮಾನ ನಿಲ್ದಾಣವಾಗಿದೆ.
    ಮಾರ್ಗಗಳ ಹುಡುಕಾಟ
One Way
Return
From (Departure City)
To (Destination City)
Depart On
24 Apr,Wed
Return On
25 Apr,Thu
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
24 Apr,Wed
Check Out
25 Apr,Thu
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
24 Apr,Wed
Return On
25 Apr,Thu