ಏಕಾಂತ ಬಯಸುವ ಪ್ರೇಮಿಗಳು ಅಥವಾ ನವ ದಂಪತಿಗಳಿಗೆ ಇದು ಹೇಳಿ ಮಾಡಿಸಿದ ತಾಣವಾಗಿದೆ. ಇಲ್ಲಿ ಕೆಲವೆ ಕೆಲವು ಶ್ಯಾಕ್ ಗಳಿದ್ದು ಸಮಯವನ್ನು ಪುಸ್ತಕಗಳನ್ನು ಓದುತ್ತಲೊ ಇಲ್ಲವೆ ಬರೆಯುತ್ತಲೊ ಸುಖವಾಗಿ ಮತ್ತು ಶಾಂತವಾಗಿ ಕಳೆಯಬಹುದು.ಈ ಕಡಲ ತೀರದಲ್ಲಿ 'ಕ್ಯಾಸುವಾರಿನಾ' ಎಂಬ ಹೆಸರಿನ ಸುಂದರವಾದ ಗಿಡಗಳನ್ನು ಕಾಣಬಹುದು ಹಾಗು ವ್ಹೈಟ್ ಬೆಲ್ಲೀಯ್ಡ್ ಫಿಶ್ ಈಗಲ್ (ಒಂದು ಬಗೆಯ ಮೀನು ಹಿಡಿಯುವ ಹದ್ದು) ಗಳನ್ನೂ ಕೂಡ ವಿಕ್ಷೀಸಬಹುದು. ಇಲ್ಲಿರುವ ಜನಪ್ರಿಯ ಉಪಹಾರಗೃಹ 'ಎಂಡ್ ಆಫ್ ದಿ ವರ್ಡ್' ಚಿಕ್ಕದಾಗಿದ್ದರೂ ಸಹ ಸಿಫುಡ್ ಗಳಿಗಾಗಿ ಪ್ರಖ್ಯಾತಿಯಾಗಿದೆ. ಇಲ್ಲಿರುವ ಮತ್ತೊಂದು ಆಕರ್ಷಣೀಯ ತಾಣವೆಂದರೆ ಉತ್ತಮವಾಗಿ ಸಂರಕ್ಷಿಸಲ್ಪಟ್ಟ ಪೋರ್ಚುಗೀಸರ ಕೋಟೆ.ಇಲ್ಲಿಗೆ ತಲುಪುವ ಒಳ್ಳೆಯ ವಿಧಾನವೆಂದರೆ ಕಾರ್ ಅಥವಾ ಬೈಕ್ ಮೂಲಕ ಹೋಗುವುದಾಗಿದೆ. ಇಲ್ಲವಾದಲ್ಲಿ ಕ್ಯಾಬ್ ಗಳೂ ಕೂಡ ಲಭ್ಯವಿದೆ, ಆದರೆ ಹೆಚ್ಚಿನ ಹಣ ವ್ಯಯಿಸಬೇಕಾಗಬಹುದು. ಈ ಕಡಲ ತೀರದಲ್ಲಿ ರಾತ್ರಿಯು ತುಂಬಾನೆ ಮೋಹಕವಾಗಿರುತ್ತದೆ.