Search
  • Follow NativePlanet
Share
ಮುಖಪುಟ » ಸ್ಥಳಗಳು » ಪಣಜಿ » ಆಕರ್ಷಣೆಗಳು » ರೈಸ್ ಮಾಗೋಸ್ ಚರ್ಚ್

ರೈಸ್ ಮಾಗೋಸ್ ಚರ್ಚ್, ಪಣಜಿ

1

ಮಾಂಡೋವಿ ನದಿಯ ದಂಡೆಯ ಮೇಲೆ, ರೈಸ್ ಮಾಗೋಸ್ ಕೋಟೆಗೆ ಹತ್ತಿಕೊಂಡೇ ಇರುವ ರೈಸ್ ಮಾಗೋಸ್ ಚರ್ಚ್ ಒಂದು ಅದ್ಭುತವಾಗಿ ಗೋಚರಿಸುವ ಶ್ವೇತ ವರ್ಣದಿಂದ ಕೂಡಿರುವ ಕಟ್ಟಡವಾಗಿದೆ. ಇದು ಬಾರ್ಡೆಜ್ ಜಿಲ್ಲೆಯಲ್ಲಿಯೆ ಮೊಟ್ಟಮೊದಲ ಚರ್ಚ್ ಎಂದು ನಂಬಲಾಗಿದೆ. ಇದರೊಟ್ಟಿಗಿರುವ ಕೋಟೆಯು ಅಗುವಾಡಾ ಕೋಟೆಗಿಂತಲೂ 50 ವರ್ಷ ಹಳೆಯದಾಗಿದೆ.ಸಂತ ಜಿರೋಮ್ ಗೆ ಸಮರ್ಪಿತವಾಗಿರುವ ಈ ಚರ್ಚ್ 1555 ರಲ್ಲಿ ನಿರ್ಮಾಣಗೊಂಡಿದ್ದು, ಪ್ರತಿ ಜನವರಿ 6 ರಂದು ಮೂರು ಜ್ಞಾನಿಗಳ ಅಥವಾ ಮೂರು ರಾಜರ ಉತ್ಸವವನ್ನು ಇಲ್ಲಿ ಆಚರಿಸಲಾಗುತ್ತದೆ.ಕೆಲವು ಇತಿಹಾಸ ತಜ್ಞರ ಅನಿಸಿಕೆ ಪ್ರಕಾರ ಈ ಚರ್ಚ್ ನ್ನು ಪುರಾತನ ಹಿಂದು ದೇವಾಲಯದ ಮೇಲೆ ನಿರ್ಮಿಸಲಾಗಿದ್ದು, ಇದಕ್ಕೆ ಸಾಕ್ಷಿಯಾಗಿ ಸಾಮಾನ್ಯವಾಗಿ ಹಿಂದು ದೇವಾಲಯಗಳಲ್ಲಿ ಕಂಡುಬರುವ ಕೆತ್ತನೆಗಳು, ಶಾಸನಗಳು ಮತ್ತು ಉಬ್ಬು ಕೆತ್ತನೆಯ ಸಿಂಹದ ಮೂರ್ತಿಗಳು ಇಲ್ಲಿರುವುದನ್ನು ಉಲ್ಲೇಖಿಸುತ್ತಾರೆ. ಈ ಚರ್ಚ್ ನ ಹೊರಾಂಗಣದ ತದ್ವಿರುದ್ಧವಾಗಿ, ಒಳಾಂಗಣವು ಬಣ್ಣ ಬಣ್ಣದ ಪೇಂಟಿಂಗ್ಸ್ ಗಳಿಂದ ಅಲಂಕೃತಗೊಂಡಿದೆ. ಇಲ್ಲಿ ಮೂರು ಜ್ಞಾನಿಗಳು ಉಡುಗೊರೆಗಳ ಸಮೇತ ಇನ್ಫಂಟ್ ಜಿಸಸ್ ನ್ನು ಭೇಟಿಯಾಗಲು ಹೋಗುತ್ತಿರುವ ಕಥೆಯನ್ನು ಚಿತ್ರಗಳ ಮುಖಾಂತರ ಗಮನಿಸಬಹುದಾಗಿದೆ. ಪ್ರತಿ ಜನವರಿ 6 ರಂದು ನಡೆಯುವ ಉತ್ಸವದಲ್ಲಿ, ಶುಭ ಸಂದೇಶವನ್ನು ಸಾರುವ ಮೆರವಣಿಗೆಯನ್ನೂ ಕೂಡ ಮಾಡಲಾಗುತ್ತದೆ. ಆಗಿನ ಪೋರ್ಚುಗೀಸ ಆಡಳಿತದಲ್ಲಿನ ಇಬ್ಬರ ಮಾಜಿ ವೈಸ್ ರಾಯ್ ಗಳ ಸಮಾಧಿಗಳನ್ನು ಈಗಲೂ ರೈಸ್ ಮಾಗೋಸ್ ಕೋಟೆಯಲ್ಲಿ ಕಾಣಬಹುದಾದ್ದರಿಂದ, ಸ್ವಾಭಾವಿಕವಾಗಿ ಈ ಕೋಟೆಯು ಪೋರ್ಚುಗೀಸ್ ಪ್ರಜೆಗಳಿಗೂ ಕೂಡ ಮಹತ್ವವಾಗಿದೆ. ರೈಸ್ ಮಾಗೋಸ್ ಕೋಟೆಯು ಈ ಪ್ರದೇಶದಲ್ಲೇ ಅತಿ ಜನಪ್ರಿಯವಾಗಿರುವುದರಿಂದ ಇಲ್ಲಿಗೆ ಸುಲಭವಾಗಿ ತಲುಪಬಹುದು.ಪಣಜಿ, ವಾಸ್ಕೊ ಮತ್ತು ಮಾರ್ಗೊದಿಂದಲೂ ಸಹ ನಿರಂತರವಾದ ಕ್ಯಾಬ್ ಸೇವೆಗಳು ಇಲ್ಲಿಗೆ ತಲುಪಲು ಲಭ್ಯವಿದೆ. ಬಾಗಾ, ಕಲಂಗುಟ್ ಬೀಚ್ ಗಳಿಗೆ ಹೋಗುವ ದಾರಿಯಲ್ಲೆ ಈ ಕೋಟೆಯಿದೆ. 

One Way
Return
From (Departure City)
To (Destination City)
Depart On
25 Apr,Sat
Return On
26 Apr,Sun
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
25 Apr,Sat
Check Out
26 Apr,Sun
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
25 Apr,Sat
Return On
26 Apr,Sun