Search
  • Follow NativePlanet
Share
ಮುಖಪುಟ » ಸ್ಥಳಗಳು » ಕಲಂಗುಟ್ » ಆಕರ್ಷಣೆಗಳು » ಮೇಯ್ ಡೆ ಡ್ಯೂಸ್ ಚರ್ಚ್

ಮೇಯ್ ಡೆ ಡ್ಯೂಸ್ ಚರ್ಚ್, ಕಲಂಗುಟ್

2

ಮೇಯ್ ಡೆ ಡ್ಯೂಸ್ ನ್ನು ಭಾಷಾಂತರಿಸಿದಾಗ 'ಮದರ್ ಆಫ್ ಗಾಡ್' ಎಂದು ಅರ್ಥ ಕೊಡುತ್ತದೆ. ಇದು ಗೋಥಿಕ್ ಶೈಲಿಯ ಪ್ರಸಿದ್ಧ ಚರ್ಚ್ ಆಗಿದ್ದು ಉತ್ತರ ಗೋವಾದಲ್ಲಿದೆ. ಉತ್ತರ ಗೋವಾದ ಜನಪ್ರಿಯ ಸ್ಥಳಗಳಾದ ಬಾಗಾ, ಕಲಂಗುಟ್ ಮತ್ತು ಕ್ಯಾಂಡೋಲಿಮ್ ಭೌಗೋಳಿಕವಾಗಿ ಈ ಚರ್ಚ್ ನ ಹತ್ತಿರದಲ್ಲಿವೆ.ಇದೊಂದು ಚಿಕ್ಕ ಚರ್ಚ್ ಆಗಿದ್ದು, ಸುತ್ತಲು ಹಸಿರಿನ ಸಸ್ಯರಾಶಿಯನ್ನು ಹೊಂದಿದೆ. ಆದುದರಿಂದ ನಿಮಗೇನಾದರು ಶಾಪಿಂಗ್ ಮಾಡಿ ಅಥವಾ ಸುತ್ತಾಡಿ ಆಯಾಸವಾಗಿದ್ದರೆ ಇಲ್ಲಿ ವಿಶ್ರಾಂತಿ ತೆಗೆದುಕೊಳ್ಳಲು ಅನುಕೂಲಕರವಾದ ವಾತಾವರಣವಿದೆ. ಇದನ್ನು 1873 ರಲ್ಲಿ ಕಟ್ಟಲಾಗಿದೆ.ದೊಡ್ಡದಾಗಿದ್ದು ಶುಭ್ರವಾಗಿ ಗೋಚರಿಸುವ ಗೋಥಿಕ್ ಶೈಲಿಯಿಂದ ಪ್ರಭಾವಿತವಾದ ಗೋಪುರಗಳು ನಿಮ್ಮನ್ನು ಅಚ್ಚರಿಗೊಳಿಸದೆ ಇರಲಾರವು. ಇಲ್ಲಿಯ ಮತ್ತೊಂದು ವಿಶೇಷವೆಂದರೆ ಬೆಳ್ಳಿಯ ಘಂಟೆ. ಇವೆಲ್ಲವು ಒಟ್ಟಾರೆಯಾಗಿ ಒಬ್ಬ ಛಾಯಾಚಿತ್ರಗಾರನ ಕನಸಿನ ಕ್ಯಾನ್ವಾಸ್ ಗೆ ಇಂಬು ತುಂಬುವುದರಲ್ಲಿ ಅನುಮಾನವಿಲ್ಲ. ಈ ಚರ್ಚ್ ನಲ್ಲಿ ಹಳೆ ಗೋವಾದಲ್ಲಿಯ ಹಳೆ ಮೇಯ್ ಡೆ ಡ್ಯೂಸ್ ಚರ್ಚ್ ನ ಅವಶೇಷಗಳಿಂದ ತರಲಾದ ಪ್ರಸಿದ್ಧ ಪವಿತ್ರ ದೇಗುಲವಾದ ನೊಸ್ಸಾ ಸಿನ್ಹೋರಾ ಇರುವುದು ಗಮನಿಸಬೇಕಾದ ಸಂಗತಿ.

ಮೇಯ್ ಡೆ ಡ್ಯೂಸ್ ಚರ್ಚ್ ಗೆ ತಲುಪುವುದು ಸುಲಭವಾಗಿದೆ. ಪಣಜಿಯಿಂದ ಉತ್ತರ ಗೋವಾದ ಮಾಪುಸಾ ಪಟ್ಟಣಕ್ಕೆ ಹೋಗುವ ದಾರಿಯಲ್ಲಿ 13 ಕಿ.ಮೀ ದೂರದಲ್ಲಿದೆ. ಪಣಜಿ, ವಾಸ್ಕೊ ಮತ್ತು ಮಾರ್ಗೊದಿಂದ ಕ್ಯಾಬ್ ಮುಖಾಂತರ ಹೋಗುವುದು ಉತ್ತಮ. ಬೈಕ್ ಗಳ ಮುಖಾಂತರವು ಸುಲಭವಾಗಿ ತಲುಪಬಹುದು. ಇನ್ನೊಂದು ವಿಚಾರವೆಂದರೆ ಇದನ್ನು ಸಲಿಗೋನ್ ಗೋಥಿಕ್ ಚರ್ಚ್ ಎಂದು ಸಹ ಕರೆಯಲಾಗುತ್ತದೆ.

One Way
Return
From (Departure City)
To (Destination City)
Depart On
08 Sep,Tue
Return On
09 Sep,Wed
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
08 Sep,Tue
Check Out
09 Sep,Wed
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
08 Sep,Tue
Return On
09 Sep,Wed