Search
  • Follow NativePlanet
Share
ಮುಖಪುಟ » ಸ್ಥಳಗಳು » ಬಾಗಾ » ಆಕರ್ಷಣೆಗಳು » ಕ್ಯಾಫೆ ಟಿಟೊಸ್

ಕ್ಯಾಫೆ ಟಿಟೊಸ್, ಬಾಗಾ

2

ನಿಮಗೆನಾದರೂ ಬಾಗಾದಲ್ಲಿ ಸೌಜನ್ಯಮಯವಾದ ಔತಣಕೂಟದಲ್ಲಿ ಭಾಗವಹಿಸಬೇಕೆಂದಿದ್ದು ಯಾರಿಗಾದರು ವಿಚಾರಿಸಿದರೆ ಸಿಗುವ ಉತ್ತರ ಕ್ಯಾಫೆ ಟಿಟೊಸ್. ಹೌದು, ಟಿಟೊ ಬೀದಿಯಲ್ಲಿರುವ ಇದು ಸದಾ ಜನದಟ್ಟಣೆಯಿಂದ ಕೂಡಿದ್ದು ಸಂಗೀತ, ಅಲ್ಕೊಹಾಲ ಮತ್ತು ಖಾದ್ಯಗಳಿಗೆ ಹೆಸರುವಾಸಿಯಾಗಿದೆ. ಇಲ್ಲಿನ ಪ್ರವೇಶ ಶುಲ್ಕವು 1500 ರೂ ಆಗಿದ್ದು ಒಮ್ಮೊಮ್ಮೆ ಒಬ್ಬರೆ ಪ್ರವೇಶ ಬಯಸುವವರನ್ನು ನಿರಾಕರಿಸಲಾಗುತ್ತದೆ.ಒಮ್ಮೆನಾದರು ನೀವು ಇಲ್ಲಿ ಪ್ರವೇಶಿಸಿದರೆ ಸಾಕು. ಇಲ್ಲಿನ ಉಲುವು ನಿಮ್ಮನ್ನು ಪುಳಕಿತಗೊಳಿಸುವುದಲ್ಲದೆ ಉಲ್ಲಾಸಭರಿತರನ್ನಾಗಿ ಮಾಡುತ್ತದೆ. ರುಚಿಭರಿತ ಅ ಲಾ ಕಾರ್ಟೆ ಊಟ ಮತ್ತು ಮಿತಿಯಿಲ್ಲದ ಮದ್ಯ ಸೇವನೆ ಅದೂ ಕೂಡ ಕೇವಲ 1500 ರೂ. ಗಳಲ್ಲಿ ದೊರೆಯುವುದರಿಂದ ಮನಸ್ಸು ಆಕಾಶದಲ್ಲಿ ಹಾರಾಡಿದಂತೆ ಭಾಸವಾಗುವುದು ಸಹಜ. ಇನ್ನೊಂದು ವಿಶೇಷತೆಯೆಂದರೆ ನೀವಿಲ್ಲಿ ಒಂದೆ ಸೂರಿನಡಿಯಲ್ಲಿ ವಿವಿಧ ಜನಾಂಗದ ಜನರನ್ನು ಕಾಣಬಹುದು.ಎತ್ತರವಾದ ಛಾವಣಿ ಮತ್ತು ವಿಸ್ತೃತ ಜಾಗವನ್ನು ಹೊಂದಿರುವ ಈ ಕ್ಲಬನಲ್ಲಿ ವಾರಾಂತ್ಯದಂದು ಬಹುಜನರನ್ನು ಕಾಣಬಹುದು. ಇನ್ನು ಸುರಕ್ಷತೆಯ ನಿಮಿತ್ತ ಹಲವಾರು ಮುಂಜಾಗೃತಾ ಕ್ರಮಗಳಿರುವುದನ್ನು ಗಮನಿಸಬಹುದು. ಆವಾಗಾವಾಗ ಇಲ್ಲಿ ಪ್ರಖ್ಯಾತ ಡಿಜೆಗಳ ಸಂಗೀತ ಏರ್ಪಡಿಸಿರುವುದನ್ನು ಕಾಣಬಹುದು. ಕುಣಿಯಲು ಅವಕಾಶಗಳಿದ್ದು ಇಷ್ಟವಿದ್ದಲ್ಲಿ ಪ್ರತ್ಯೇಕವಾಗಿ ಶುಲ್ಕ ಪಾವತಿಸಿ ಆನಂದಿಸಬಹುದು.

ಇನ್ನು ಇವರು ಒದಗಿಸುವ ಸೇವೆಯ ಗುಣಮಟ್ಟ ಅತ್ಯುತ್ತಮವಾದುದು ಎನ್ನುವುದರಲ್ಲಿ ಎರಡು ಮಾತಿಲ್ಲ. ವಾರಾಂತ್ಯದಲ್ಲಿ ಟಿಟೊ ಬೀದಿಯು ಅತ್ಯಂತ ಜನದಟ್ಟನೆಯಿಂದ ಕೂಡಿದ್ದು ಕ್ಯಾಬನಲ್ಲಿ ಸಂಚರಿಸುವುದು ತುಸು ಕಷ್ಟಮಯವಾಗಿರುವುದರಿಂದ ನಡೆಯುತ್ತಾ ಇಲ್ಲಿಗೆ ತಲುಪುವುದು ಉತ್ತಮ. ಒಂದು ಸಲ ಬಾಗಾದ ಕ್ಯಾಫೆ ಕಾಫಿ ಡೆ ಗೆ ಬಂದರೆ ಸಾಕು ಅಲ್ಲಿಂದ ಇದಕ್ಕೆ ನೀವಾಗೆ ಭೇಟಿ ನೀಡುವಿರಿ.

One Way
Return
From (Departure City)
To (Destination City)
Depart On
28 Mar,Thu
Return On
29 Mar,Fri
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
28 Mar,Thu
Check Out
29 Mar,Fri
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
28 Mar,Thu
Return On
29 Mar,Fri