Search
  • Follow NativePlanet
Share
ಮುಖಪುಟ » ಸ್ಥಳಗಳು » ಆಗುಂಬೆ » ಹವಾಮಾನ

ಆಗುಂಬೆ ಹವಾಮಾನ

ಬೇಸಿಗೆಗಾಲ

(ಏಪ್ರಿಲ್ ನಿಂದ ಮೇವರೆಗೆ); ಆಗುಂಬೆಯಲ್ಲಿ ಬೇಸಿಗೆಯು ಒಣ ಮತ್ತು ಕಡುಬಿಸಿಲಿನಿಂದ ಕೂಡಿದ್ದು 30 ಡಿಗ್ರಿ  ಉಷ್ಣಾಂಶದಿಂದ ಕೂಡಿರುತ್ತದೆ. ಈ ಕಡು ಬಿಸಿಲಿನಿಂದಾಗಿ ಪ್ರವಾಸಿಗರು ಬೇಸಿಗೆಯಲ್ಲಿ ಆಗುಂಬೆಗೆ ಪ್ರವಾಸ ಹೊರಡುವ ಯೋಜನೆಯನ್ನು ಕೈ ಬಿಡುವುದು ಕ್ಷೇಮ.

ಮಳೆಗಾಲ

(ಜೂನ್ ನಿಂದ ಸೆಪ್ಟೆಂಬರ್): ಆಗುಂಬೆಯಲ್ಲಿ ಮಳೆಗಾಲದಲ್ಲಿ ಅತಿ ಹೆಚ್ಚು ಮಳೆಬೀಳುತ್ತದೆ. ಜೂನ್ ನಿಂದ ಸೆಪ್ಟೆಂಬರ್ ತಿಂಗಳವರೆಗೆ ಆಗುಂಬೆಯು ತನ್ನ ವಾರ್ಷಿಕ ಪಾಲಿನ ಶೇ.80 ರಷ್ಟು ಮಳೆಯನ್ನು ಕಾಣುತ್ತದೆ. ಆಗ ಇಲ್ಲಿನ ತೇವಾಂಶ ತನ್ನ ಉನ್ನತ ಮಟ್ಟವನ್ನು ಈ ಕಾಲದಲ್ಲಿ ತಲುಪಿರುತ್ತದೆ. ಆದರೂ ಮಳೆಗಾಲವು ಮಲೆನಾಡಿನ ಕಾಡುಗಳನ್ನು ಮತ್ತು ಆಗುಂಬೆಯ ಜಲಪಾತಗಳನ್ನು ನೋಡಲು ಒಳ್ಳೆಯ ಕಾಲ.

ಚಳಿಗಾಲ

(ಡಿಸೆಂಬರ್ ನಿಂದ ಫ಼ೆಬ್ರವರಿವರೆಗೆ); ಆಗುಂಬೆಯು ಚಳಿಗಾಲದಲ್ಲಿ ಉಲ್ಲಾಸಕರವಾದ ಹವಾಮಾನವನ್ನು ಹೊಂದಿರುತ್ತದೆ. ಚಳಿಗಾಲದಲ್ಲಿ ಇಲ್ಲಿನ ಉಷ್ಣಾಂಶ ಕೆಲವೊಮ್ಮೆ 18 ಡಿಗ್ರಿಯಷ್ಟು ಸಹಾ ಕುಸಿದಿರುತ್ತದೆ. ಆಗ ಇಲ್ಲಿನ ಪ್ರದೇಶಗಳು ಚಾರಣಕ್ಕೆ ಅತ್ಯಂತ ಯೋಗ್ಯಕರವಾಗಿರುತ್ತವೆ.