ಚಾರಣದಲ್ಲಿ ಭಾಗವಹಿಸಬೇಕೆಂದು ಬಯಸುವ ಸಾಹಸಿ ಪ್ರವಾಸಿಗರು ಕೊಡಚಾದ್ರಿಗೆ ಭೇಟಿ ನೀಡಬೇಕು. ಚಳಿಗಾಲದಲ್ಲಿ ಇಲ್ಲಿನ ಹವಾಮಾನ ಸ್ಪಷ್ಟ ಮತ್ತು ಸುತ್ತಮುತ್ತಲಿನ ಸುಂದರ ವೀಕ್ಷಣೆಗಳನ್ನು ಒದಗಿಸುವದರಿಂದ ಈ ಕಾಲದಲ್ಲಿ ಚಾರಣ ಮಾಡಬಹುದು. ಅಂತೆಯೇ, ಅವರು ದಟ್ಟವಾದ ಅರಣ್ಯದ ಪಶ್ಚಿಮ ಘಟ್ಟಗಳ ಪರ್ವತ ಶಿಖರದಲ್ಲಿ ಒಂದು ಹುಣ್ಣಿಮೆಯ ರಾತ್ರಿ ವಾಸ್ತವ್ಯಹೂಡಿ ತಮ್ಮ ಚಾರಣವನ್ನು ಆನಂದಿಸಬಹುದು. ಪ್ರವಾಸಿಗರು ಜೀಪ್ ರಸ್ತೆಯಲ್ಲಿನ ಸಂಪೆಕಟ್ಟೆ ಗ್ರಾಮದಿಂದ ಸುಲಭದ ಕಾಲ್ದಾರಿಯಿಂದ ಟ್ರೆಕಿಂಗ್ ಮಾಡಬಹುದು. ಶಿಖರದಿಂದ, ಪ್ರವಾಸಿಗರು ಸುಂದರ ಸೂರ್ಯಾಸ್ತ ನೋಟ ಮತ್ತು ಅರಬ್ಬೀ ಸಮುದ್ರವನ್ನೂ ನೋಡಬಹುದು.