ತರ್ಕಾರ್ಲಿ ಬೀಚ್ ಸಿಂಧುದುರ್ಗದ ಪ್ರಮುಖ ಆಕರ್ಷಣೆಯಾಗಿದೆ. ಸಿಂಧುದುರ್ಗ ಜಿಲ್ಲೆಯ ಒಂದು ಸಣ್ಣ ಗ್ರಾಮವಾಗಿರುವ ತರ್ಕಾರ್ಲಿಯ ಜೊತೆಗೆ ಈ ಕರಾವಳಿ ತೀರವಿದ್ದು, ನಡಿಗೆಯ ಮೂಲಕ ರೋಮಾಂಚನಕಾರಿ ಅನುಭವವನ್ನು ಅನುಭವಿಸಲು ಬಯಸುವವರಿಗೆ ಹೇಳಿ ಮಾಡಿಸಿದಂತಿದೆ. ಕಾಲಿಗೆ ಕಚಗುಳಿಯಿಡುವ ಮರಳು ಮತ್ತು ಆಕಾಶ ಭೂಮಿ ಸಮ್ಮಿಲನದ ಅಂಚಿನವರೆಗೂ ಚಾಚಿಕೊಂಡಿರುವ ನಿರ್ಮಲ ಸರೋವರದ ನೀರು ನಿಮ್ಮನ್ನು ಅಮಲೇರಿಸುವಂತೆ ಮಾಡುತ್ತದೆ. ನಿರ್ಮಲವಾದ ಮತ್ತು ಸ್ಪಷ್ಟವಾದ ನೀರಿನ ಗುಣವು ಸಮುದ್ರತಳವನ್ನು ಕಾಣುವಂತೆ ಮಾಡುತ್ತದೆ.
ಇಲ್ಲಿನ ಬೀಚ್ ಹೆಣ್ಣು ಆಮೆಗಳಿಗೆ ಒಂದು ನಂಬಿಕಸ್ತ ವಲಯವಾಗಿದೆ, ಅದೃಷ್ಟವಿದ್ದಲ್ಲಿ ನೀವು, ಬೀಚ್ ನ ಮೇಲೆ ಮಲಗಿರುವ ಅಥವಾ ಮೊಟ್ಟೆಯಿಂದ ಹೊರಬರುತ್ತಿರುವ ಅಥವಾ ಮರಳಿನಲ್ಲಿ ತನ್ನ ಮೊಟ್ಟೆಗಳನ್ನು ರಕ್ಷಿಸುತ್ತಿರುವ ಆಮೆಗಳನ್ನು ನೋಡಬಲ್ಲಿರಿ.