Search
  • Follow NativePlanet
Share
ಮುಖಪುಟ » ಸ್ಥಳಗಳು » ತಪೋಲಾ » ಹವಾಮಾನ

ತಪೋಲಾ ಹವಾಮಾನ

ತಪೋಲದ ಹಿರಿಮೆ ಏನೆಂದರೆ ಇಲ್ಲಿ ವರ್ಷಪೂರ್ತಿ ಒಂದೇ ತರಹದ ವಾತಾವರಣವಿರುವುದು. ಅದರೂ ಇಲ್ಲಿಗೆ ಭೇಟಿ ಕೊಡಲು ಹಾಗು ನಗರದ ಸೌಂದರ್ಯ ರಾಶಿಯನ್ನು ಸವಿಯಲು ಆಪ್ತವಾದ ಕಾಲ ಚಳಿಗಾಲ ಎನ್ನಬಹುದು. ಮುಂಗಾರು ಕಳೆದ ಮೇಲೂ ಕೂಡ ಇಲ್ಲಿಗೆ ಭೇಟಿ ಕೊಡಲು ಒಳ್ಳೆಯ ಸಮಯ.

ಬೇಸಿಗೆಗಾಲ

ತಪೋಲದಲ್ಲಿ ಮಾರ್ಚ್ ತಿಂಗಳಿನಿಂದ ಜೂನ್ ತಿಂಗಳವರೆಗೆ ಬೇಸಿಗೆ ಇದ್ದರೂ ಹಿತಕರವಾದ ವಾತಾವರಣವಿರುತ್ತದೆ. ಇಲ್ಲಿನ ಉಷ್ಣಾಂಶ ಸುಮಾರು 29 ರಿಂದ 18 ಡಿಗ್ರಿ ಸೆಲ್ಶಿಯಸ್ ಇರುತ್ತದೆ. ಆದ್ದರಿಂದ ಪ್ರವಾಸಿಗರು ಇಲ್ಲಿಗೆ ಭೇಟಿ ಕೊಡಲು ಇದು ಒಳ್ಳೆಯ ಸಮಯ.

ಮಳೆಗಾಲ

ಇಲ್ಲಿ ಮಳೆಗಾಲ ಜೂನ್ ಮಧ್ಯದಿಂದ ಶುರುವಾಗಿ ಸೆಪ್ಟೆಂಬರ್ ಕೊನೆಯವರೆಗೂ ಮುಂದುವರೆಯುತ್ತದೆ. ಈ ಪ್ರದೇಶ ಸರಾಸರಿ  ಮಳೆ ಪಡೆಯುತ್ತದೆ. ಈ ಸಮಯದಲ್ಲಿ, ಈ ಸೀಮೆ ಅಧ್ಬುತವಾದ ಸೌಂದರ್ಯ ಹೊಂದುವುದನ್ನು ನೋಡುವುದೇ ಚೆನ್ನ.

ಚಳಿಗಾಲ

ತಪೋಲದಲ್ಲಿ ಚಳಿಗಾಲ ಡಿಸೆಂಬರ್ ನಿಂದ ಫೆಬ್ರವರಿ ವರೆಗೂ ಇರುತ್ತದೆ. ಈ ಸಮಯದಲ್ಲಿ ಇಲ್ಲಿನ ಗರಿಷ್ಟ ಉಷ್ಣಾಂಶ 24 ಡಿಗ್ರಿ ಸೆಲ್ಶಿಯಸ್ ವರೆಗೂ ಇರುತ್ತದೆ ಹಾಗು ಕನಿಷ್ಠ ಉಷ್ಣಾಂಶ 5 ಡಿಗ್ರಿ ಸೆಲ್ಶಿಯಸ್ ಗೆ ತಲುಪುತ್ತದೆ.