ಶನಿವಾರ ವಾಡಾವು ಐತಿಹಾಸಿಕವಾಗಿ ಪ್ರಮುಖವಾದದ್ದು. ಇದು ಪುಣೆಯ ಪೇಷ್ವಾ ಆಡಳಿತಗಾರರ ಕೇಂದ್ರವಾಗಿ ಕಾರ್ಯನಿರ್ವಹಿಸಿತ್ತು. 1730ರಲ್ಲಿ ಅಂದರೆ ಸುಮಾರು 300 ವರ್ಷಗಳ ಹಿಂದೆ ಬಾಜಿ ರಾವ್ರಿಂದ ಈ ಪ್ರದೇಶ ನಿರ್ಮಿಸಲ್ಪಟ್ಟಿತ್ತು.1827ರಲ್ಲಿ ಇಲ್ಲಿಗೆ ಬೆಂಕಿ ಹೊತ್ತಿಕೊಂಡು ಎಲ್ಲವೂ ಭಸ್ಮವಾಗಿದೆ, ಸದ್ಯ ಈ ಪ್ರದೇಶ ಈಗ ಹಾಳಾಗಿದೆ. ಅರಮನೆಯಲ್ಲಿ ಬೆಳಕು ಮತ್ತು ಧ್ವನಿಯ ಕಾರ್ಯಕ್ರಮವನ್ನು ನೀವು ನೋಡಬೇಕು.
ಮರಾಠಾ ಸಂಸ್ಕೃತಿಯ ಪ್ರಮುಖ ಕೇಂದ್ರವಾಗಿ ಈ ಅರಮನೆಯು ಗೋಚರಿಸುತ್ತದೆ. ಮರಾಠಾ ಶೈಲಿ ಮತ್ತು ಮುಘಲ್ ಶೈಲಿಯ ವಾಸ್ತುಶಿಲ್ಪದ ಸಂಯೋಗ ಇಲ್ಲಿ ತುಂಬಾ ಅದ್ಭುತವಾಗಿ ನಡೆದಿದೆ.