Search
  • Follow NativePlanet
Share
ಮುಖಪುಟ » ಸ್ಥಳಗಳು » ಕರ್ನಾಲಾ » ಆಕರ್ಷಣೆಗಳು » ಕರ್ನಾಲಾ ಕೋಟೆ

ಕರ್ನಾಲಾ ಕೋಟೆ, ಕರ್ನಾಲಾ

3

ಕರ್ನಾಲಾ ಕೋಟೆ ರಾಯ್ ಗಡ ಜಿಲ್ಲೆಯಲ್ಲಿರುವ ಕರ್ನಾಲಾದ ಪ್ರಮುಖ ಆಕರ್ಷಣೆ. ಇದನ್ನು ಫನ್ನಲ್ ಹಿಲ್ ಎಂದೂ ಕರೆಯುತ್ತಾರೆ. ಇದು ಕರ್ನಾಲಾ ಪಕ್ಷಿಧಾಮದ ಒಳಗಿದೆ ಮತ್ತು ಎರಡು ಕೋಟೆ ಗೋಪುರಗಳಿಂದ ಮಾಡಲ್ಪಟ್ಟಿದೆ. ಒಂದು ಎತ್ತರದಲ್ಲಿದ್ದರೆ ಮತ್ತೊಂದು ಸ್ವಲ್ಪ ತಗ್ಗಿನಲ್ಲಿದೆ.

ಎತ್ತರದಲ್ಲಿರುವ ಕೋಟೆಯಲ್ಲಿ 125 ಅಡಿ ಎತ್ತರದ ಒಂದು ಸ್ಥಂಬವಿದೆ. ಇದನ್ನು ಕಂದು ಬಣ್ಣದ ಅಗ್ನಿಶಿಲೆಯಿಂದ ಮಾಡಲಾಗಿದೆ. ಸ್ಥಳೀಯ ಭಾಷೆಯಲ್ಲಿ ಇದನ್ನು ಪಾಂಡು ಟವರ್ ಎಂದು ಕರೆಯಲಾಗುತ್ತದೆ. ಇದನ್ನು ಅಕ್ಕ ಪಕ್ಕದ ಸ್ಥಳಗಳಲ್ಲಿ ನಡೆಯುವ ಚಟುವಟಿಕೆಗಳ ಮೇಲೆ ನಿಗಾ ಇಡುವ ಉದ್ದೇಶದಿಂದ ಕಟ್ಟಲಾಗಿದೆ. ಆದರೆ ಸದ್ಯಕ್ಕೆ ಇದು ಶಿಥಿಲಾವಸ್ಥೆಯಲ್ಲಿದೆ.

ಈ ಕೋಟೆ ಪರ್ಶಿಯಾ ಹಾಗೂ ಮರಾಠಿ ಬರಹಗಳನ್ನು ಒಳಗೊಂಡಿದೆ. ಮರಾಠಿ ಅಕ್ಷರಗಳು ಅಸ್ಪಷ್ಟವಾಗಿವೆ ಮತ್ತು ಇದರಲ್ಲಿ ಬರೆಯಲಾದ ದಿನಾಂಕ ನಮೂದಿಸಲಾಗಿಲ್ಲ. ಆದರೆ ಪರ್ಷಿಯನ್ ಅಕ್ಷರದ ಪಕ್ಕ ‘ಸೈಯ್ಯದ್ ನೂರುದ್ದೀನ್ ಮೊಹಮ್ಮದ್ ಖಾನ್, ಹಿಜ್ರಿ, 1147 AH (1735 CE)’ ಎಂದು ಬರೆಯಲಾಗಿದೆ. ಇದು ಪ್ರಾಯಶಃ ಮೊಘಲ್ ಆಳ್ವಿಕೆಯ ಅವಧಿಯ ಕೆತ್ತನೆಯಾಗಿದೆ ಎಂದು ನಂಬಲಾಗಿದೆ.

ಈ ಕೋಟೆಯಲ್ಲಿ ಒಂದು ನೀರಿನ ಸಂಗ್ರಹಾಗಾರ (ನೀರಿನ ತೊಟ್ಟಿ) ಇದೆ. ಇದಲ್ಲದೆ ಇದರ ತುದಿಯಿಂದ ರಾಜಮಾಚಿ ಕೋಟೆ ಮತ್ತು ಪ್ರಬಾಲ್ ಗಡ ಕೋಟೆಗಳು ಸರಿಯಾಗಿ ಕಾಣುತ್ತವೆ.

One Way
Return
From (Departure City)
To (Destination City)
Depart On
25 Apr,Thu
Return On
26 Apr,Fri
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
25 Apr,Thu
Check Out
26 Apr,Fri
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
25 Apr,Thu
Return On
26 Apr,Fri