Search
  • Follow NativePlanet
Share
ಮುಖಪುಟ » ಸ್ಥಳಗಳು » ಅಲಿಬಾಗ್ » ಹವಾಮಾನ

ಅಲಿಬಾಗ್ ಹವಾಮಾನ

ಅಲಿಬಾಗ್ ಪಟ್ಟಣಕ್ಕೆ ವರ್ಷವಿಡಿ ಯಾವುದೆ ಸಮಯದಲ್ಲಾದರು ಭೇಟಿ ನೀಡಬಹುದು. ಉಷ್ಣವಲಯದ ವಾಯುಗುಣಕ್ಕೆ ನೀವು ಹೊಂದಿಕೊಳ್ಳದೆ ಇದ್ದರೆ ಇಲ್ಲಿನ ಬೇಸಿಗೆಯು ಹೆಚ್ಚು ಶಾಖ ಅಥವಾ ಉಷ್ಣ ಎನಿಸಬಹುದು. ಆದ್ದರಿಂದ ಚಳಿಗಾಲವು ಅಲಿಬಾಗ್ ಗೆ ಭೇಟಿ ನೀಡಲು ಪ್ರಶಸ್ತವಾದ ಸಮಯ.

ಬೇಸಿಗೆಗಾಲ

ಮಾರ್ಚ್ ತಿಂಗಳಿನಿಂದ ಜುಲೈ ತಿಂಗಳ ವರೆಗೆ ಅಲಿಬಾಗ್ ನಲ್ಲಿ ಬೇಸಿಗೆ ಕಾಲ. ಬೇಸಿಗೆಯ ಋತುವಿನಲ್ಲಿ ಇಲ್ಲಿನ ಹವಾಮಾನ ಹಿತಕರವಾಗಿದ್ದು, ಆತೀಥ್ಯದಾಯಕವಾಗಿರುತ್ತದೆ. ಬೇಸಿಗೆಯಲ್ಲಿ ತಾಪಮಾನವು ಪ್ರವಾಸಿಗರು ಸಹಿಸುವಂತಹ ಅಂದರೆ ಗರಿಷ್ಠ 36 ಡಿ.ಸೆ ನಷ್ಟು ದಾಖಲಾಗುತ್ತದೆ.

ಮಳೆಗಾಲ

ಅಲಿಬಾಗ್ ನಲ್ಲಿ ಮಳೆಗಾಲದಲ್ಲಿ ಗಣನೀಯ ಪ್ರಮಾಣದಲ್ಲಿ ಮಳೆಯಾಗುತ್ತದೆ. ಈ ಸಮಯದಲ್ಲಿ ಇಲ್ಲಿನ ಪ್ರದೇಶಗಳು ಮಳೆಯಿಂದಾಗಿ ಅತ್ಯಂತ ಮನಮೋಹಕವಾಗಿ ಕಾಣುತ್ತದೆ. ಇಲ್ಲಿನ ಭಾರಿ ಮಳೆಯು ಮಳೆಗಾಲದಲ್ಲಿ ನೀವು ಇಲ್ಲಿಗೆ ಬರುವ ಯೋಜನೆಯನ್ನು ತಲೆಕೆಳಗು ಮಾಡಬಹುದು. ಆದ್ದರಿಂದಲೆ ಮಳೆಗಾಲದಲ್ಲಿ ಪ್ರವಾಸಿಗರು ಅಲಿಬಾಗ್ ಪ್ರದೇಶಕ್ಕೆ ಬರಲು ಹಿಂದೇಟು ಹಾಕುತ್ತಾರೆ.

ಚಳಿಗಾಲ

ಅಲಿಬಾಗ್ ನಲ್ಲಿ ಚಳಿಗಾಲದಲ್ಲಿ ತಾಪಮಾನವು ಗರಿಷ್ಠ 30 ಡಿ.ಸೆ ನಿಂದ 12 ಡಿ.ಸೆ ಗೆ ಇಳಿಯುತ್ತದೆ. ಹೊಸವರ್ಷದ ಆಗಮನದ ಸಮಯದಲ್ಲಿ ಸಹಸ್ರಾರು ಸಂಖ್ಯೆಯ ಪ್ರವಾಸಿಗರು ಕುಟುಂಬ ಸಮೇತರಾಗಿ ಹೊಸವರ್ಷವನ್ನು ಆಚರಿಸುವುದಕ್ಕೆ ಸ್ವರ್ಗದಂತಹ ಈ ಸ್ಥಳಕ್ಕೆ ಭೇಟಿ ನೀಡುತ್ತಾರೆ. ಚಳಿಗಾಲವು ನವೆಂಬರ್ ತಿಂಗಳಿನಿಂದ ಫೆಬ್ರವರಿ ತಿಂಗಳಿನವರೆಗೆ ಮುಂದುವರಿಯುತ್ತದೆ.