Search
 • Follow NativePlanet
Share

ಅರ್ಕಿ - ದೇವಾಲಯಗಳು ಮತ್ತು ಗುಹೆಗಳ ನಡುವೆ 

15

ಹಿಮಾಚಲ ಪ್ರದೇಶದ ಪ್ರವಾಸೀತಾಣಗಳ ಪಟ್ಟಿಯಲ್ಲಿ ಸೋಲನ್‌ ಜಿಲ್ಲೆಯಲ್ಲಿರುವ ಅರ್ಕಿ ಕೂಡಾ ಒಂದು. ಜಿಲ್ಲೆಯ ಅತೀ ಸಣ್ಣ ಪಟ್ಟಣ ಇದಾಗಿದ್ದರೂ ದೇಶ, ವಿದೇಶಗಳ ಪ್ರವಾಸಿಗರನ್ನು ಸೆಳೆಯುವ ಹಲವು ವಿಶೇಷಗಳ ತವರಾಗಿದೆ. ಇತಿಹಾಸದ ಪುಸ್ತಕವನ್ನು ಮಗುಚಿದಾಗ ಈ ಪುಟ್ಟ ಪಟ್ಟಣವನ್ನು ಕ್ರಿ.ಶ 1660 -65 ರ ನಡುವಿನ ಅವಧಿಯಲ್ಲಿ ಬಗಲ್‌ ರಾಜ್ಯವನ್ನು ಆಳುತ್ತಿದ್ದ ರಾಜಾ ಅಜಯ್‌ದೇವ ನಿರ್ಮಿಸಿದನೆಂಬುದು ಗೊತ್ತಾಗುತ್ತದೆ. ಇನ್ನೊಂದು ಪ್ರಸಿದ್ಧ ಪ್ರವಾಸೀ ಕೇಂದ್ರ ಶಿಮ್ಲಾದಿಂದ 52 ಕಿಲೋಮೀಟರ್‌ ಅಂತರದಲ್ಲಿರುವ ಅರ್ಕಿಯಲ್ಲಿ ಪ್ರಾಚೀನ ಕಾಲದ ರಾಜಮನೆತನಗಳ ಸ್ಮಾರಕಗಳು ಇನ್ನೂ ಇವೆ. ದೇಶದ ಎಲ್ಲಾ ಭಾಗಗಳಿಂದ ಪ್ರವಾಸಿಗರನ್ನು ಆಕರ್ಷಿಸುವ ಅರ್ಕಿಯಲ್ಲಿ ಅನೇಕ ದೇವಾಲಯಗಳಿವೆ. ಅವುಗಳಲ್ಲಿ, ಲೂತೂರು ಮಹಾದೇವ ದೇವಾಲಯ, ದುರ್ಗಾ ದೇವಸ್ಥಾನ, ಮತ್ತು ಶಖ್ನಿ ಮಹಾದೇವ ದೇವಾಲಯ ಮುಖ್ಯವಾದವು. ಅರ್ಕಿ ಕೇಂದ್ರ ಸ್ಥಾನದಿಂದ ಕೇವಲ 4 ಕಿಲೋಮೀಟರ್ ಅಂತರದಲ್ಲಿ ಶಿವನಿಗೆ ಮೀಸಲಾಗಿರುವ ಲೂತೂರು ಮಹಾದೇವ ದೇವಾಲಯವಿದೆ. ಇದನ್ನು ಹಿಂದೂ ಶಕ್ತಿಪೀಠ ಅಂತಲೂ ಕರೆಯಲಾಗುತ್ತದೆ. 1621ರಲ್ಲಿ ಬಗಲ್‌ ಪ್ರಾಂತ್ಯವನ್ನು ಆಳುತ್ತಿದ್ದ ರಾಜ ಈ ದೇವಾಲಯವನ್ನು ನಿರ್ಮಿಸಿರುವುದಾಗಿ ಗೊತ್ತಾಗುತ್ತದೆ. ಪ್ರವಾಸಿಗರು ಬಯಸಿದಲ್ಲಿ ಇಲ್ಲಿನ ದುರ್ಗಾ ದೇವಾಲಯಕ್ಕೆ ಭೇಟಿ ನೀಡಬಹುದು. ಇದು ತನ್ನ ವೈಭವೋಪೇತ ವಿಶಿಷ್ಠ ಶಿಖರದಿಂದ ಪ್ರಸಿದ್ಧವಾದ ಶಕ್ತಿಕೇಂದ್ರ. ಈ ದೇವಾಲಯದ ಸನಿಹದಲ್ಲೇ ಇರುವ ಮತ್ತೊಂದು ದೇವಾಲಯವೆಂದರೆ ಶಖ್ನಿ ಮಹಾದೇವ ದೇವಾಲಯ. ಈ ಎಲ್ಲ ದೇವಾಲಯಗಳ ಸುತ್ತಲಿನ ವಾತಾವರಣ ಮನಸಿಗೆ ಅನಿರ್ವಚನೀಯ ಆನಂದವನ್ನು ಕಟ್ಟಿಕೊಡುತ್ತವೆ.

ಪ್ರಗತಿಪರ ಆಡಳಿತ ಎಂದೇ ಗುರುತಿಸಿಕೊಂಡಿದ್ದ ಬಘಲ್‌ ಸಾಮ್ರಾಜ್ಯದ ಕೈಗನ್ನಡಿಯಂತೆ ಅರ್ಕಿಯ ಕೋಟೆ ಮತ್ತು ಅರಮನೆಗಳು ತೋರುತ್ತವೆ. ಇವು ಅರ್ಕಿಯ ಪ್ರಮುಖ ಆಕರ್ಷಣೆಯಾಗಿವೆ. 1695 ರಿಂದ 1700 ರ ವರೆಗೆ ಆಳ್ವಿಕೆ ನಡೆಸಿದ ರಾಣಾ ಪೃಥ್ವಿಸಿಂಗ್‌ ಈ ಕೋಟೆಯನ್ನು ನಿರ್ಮಿಸಿರುವುದಾಗಿ ಐತಿಹಾಸಿಕ ದಾಖಲೆಗಳು ಹೇಳುತ್ತವೆ. ಈ ಕೋಟೆಯ ವಾಸ್ತುಶಿಲ್ಪ ರಜಪೂತ ಮತ್ತು ಮೊಘಲ್ ಶೈಲಿಗಳ ಸಮ್ಮಿಲನವನ್ನು ಹೊಂದಿದೆ. ಅರಣ್ಯವಾಸಿ ಜನಾಂಗದ ಜೀವನಕ್ರಮವನ್ನು ಸಾರುವ 'ಪಹರಿ' ಶೈಲಿಯ ಗೋಡೆ ವರ್ಣಚಿತ್ರಗಳು ನಿಮ್ಮನ್ನು ಕೆಲಕಾಲ ಹಿಡಿದು ನಿಲ್ಲಿಸುತ್ತವೆ. 18 ನೇ ಶತಮಾನದಲ್ಲಿ ರಾಣಾ ಪೃಥ್ವಿ ಸಿಂಗ್ ನಿರ್ಮಿಸಿದ ಅರ್ಕಿ ಅರಮನೆ ಕೋಟೆಯು, ಪಶ್ಚಿಮ ಭಾಗದಲ್ಲಿದೆ. 'ಕಲಾಂ' ಶೈಲಿಯ ವಾಸ್ತು ಶಿಲ್ಪದಲ್ಲಿ ನಿರ್ಮಾಣವಾದ ಈ ಅರಮನೆ ಸುಂದರವಾಗಿದೆ. ಸಮೀಪದಲ್ಲಿಯೇ ಇರುವ ಭಕಲಾಗ್, ದಿವಾನ್ ಇ ಖಾಸ್, ಕುಣಿಹಾರ್ ಹಾಗೂ ಲಕ್ಷ್ಮೀನಾರಾಯಣ ದೇವಸ್ಥಾನ, ಅರ್ಕಿಯ ಗಮನಾರ್ಹ ಪ್ರವಾಸೀ ತಾಣಗಳಾಗಿವೆ.

ಅರ್ಕಿಗೆ ಬರಲಿಚ್ಛಿಸುವವರು ರಸ್ತೆ, ವಾಯು ಹಾಗೂ ರೈಲು ಮಾರ್ಗಗಳ ಮೂಲಕ ಇಲ್ಲಿಗೆ ಬರಬಹುದು. ವರ್ಷದುದ್ದಕ್ಕೂ ಉತ್ತಮ ಹವಾಗುಣವನ್ನೇ ಹೊಂದಿರುವುದರಿಂದ ಯಾವ ಕಾಲದಲ್ಲಿ ಬೇಕಾದರೂ ಅರ್ಕಿ ಪ್ರವಾಸವನ್ನು ಯೋಜಿಸಿಕೊಳ್ಳಬಹುದು.

ಅರ್ಕಿ ಪ್ರಸಿದ್ಧವಾಗಿದೆ

ಅರ್ಕಿ ಹವಾಮಾನ

ಅರ್ಕಿ
21oC / 69oF
 • Sunny
 • Wind: NE 8 km/h

ಉತ್ತಮ ಸಮಯ ಅರ್ಕಿ

 • Jan
 • Feb
 • Mar
 • Apr
 • May
 • Jun
 • July
 • Aug
 • Sep
 • Oct
 • Nov
 • Dec

ತಲುಪುವ ಬಗೆ ಅರ್ಕಿ

 • ರಸ್ತೆಯ ಮೂಲಕ
  ಅರ್ಕಿಗೆ ತಲುಪಲು ನೇರವಾದ ಬಸ್ ಸೌಲಭ್ಯ ಇಲ್ಲದೆ ಇದ್ದರೂ ಕೇವಲ 30 ಕಿ.ಮೀ ಅಂತರದಲ್ಲಿರುವ ಧರಂಪುರನಿಂದ ನಿಯಮಿತವಾಗಿ ಬಾಡಿಗೆ ವಾಹನಗಳ ಸೌಲಭ್ಯವಿದೆ ಮತ್ತು ದೆಹಲಿಯಿಂದ ಧರಂಪುರ್ ಗೆ ಬಸ್‌ ಗಳು ನಿರಂತರವಾಗಿ ತೆರಳುತ್ತಿರುತ್ತವೆ.
  ಮಾರ್ಗಗಳ ಹುಡುಕಾಟ
 • ರೈಲಿನ ಮೂಲಕ
  ಅರ್ಕಿಗೆ ಹತ್ತಿರದಲ್ಲಿರುವ ರೈಲು ನಿಲ್ದಾಣವೆಂದರೆ ಕಲ್ಕಾ ನಿಲ್ದಾಣ. 73 ಕಿ ಮೀ ಅಂತರದಲ್ಲಿದೆ. ಭಾರತದ ಪ್ರಮುಖ ನಗರದಳಿಂದ ದಿನವಿಡೀ ಇಲ್ಲಿಗೆ ರೈಲು ಸಂಚರಿಸುತ್ತದೆ. ಇಲ್ಲಿಂದ ಮುಂದೆ ಬಾಡಿಗೆ ವಾಹನಗಳ ಮೂಲಕ ಪ್ರಯಾಣಿಸಬಹುದು.
  ಮಾರ್ಗಗಳ ಹುಡುಕಾಟ
 • ಆಕಾಶದ ಮೂಲಕ
  ಅರ್ಕಿಯಿಂದ ಕೇವಲ 40 ಕಿ.ಮೀ ಅಂತರದಲ್ಲಿ ಜಬ್ಬರ್‌ಹಟ್ಟಿ ವಿಮಾನ ನಿಲ್ದಾಣವಿದೆ. ಇದನ್ನು ಹೊರತುಪಡಿಸಿದರೆ 90 ಕಿಮೀ ದೂರದ, ಚಂಡೀಘಢ ವಿಮಾನ ನಿಲ್ದಾಣದ ಮೂಲಕವೂ ಬರಬಹುದಾಗಿದೆ. ಈ ವಿಮಾನ ನಿಲ್ದಾಣವು ಶಿಮ್ಲಾ, ದೆಹಲಿ ಮತ್ತು ಮುಂಬೈ ಸೇರಿದಂತೆ ದೇಶದ ಎಲ್ಲಾ ಪ್ರಮುಖ ನಗರಗಳೊಂದಿಗೆ ಸಂಪರ್ಕ ಕಲ್ಪಿಸುತ್ತದೆ. ಇಲ್ಲಿಂದ ಮುಂದೆ ಬಾಡಿಗೆ ಟ್ಯಾಕ್ಸಿ ಪಡೆದು ಪ್ರಯಾಣ ಮುಂದುವರೆಸಬಹುದಾಗಿದೆ.
  ಮಾರ್ಗಗಳ ಹುಡುಕಾಟ
One Way
Return
From (Departure City)
To (Destination City)
Depart On
27 May,Mon
Return On
28 May,Tue
Travellers
1 Traveller(s)

Add Passenger

 • Adults(12+ YEARS)
  1
 • Childrens(2-12 YEARS)
  0
 • Infants(0-2 YEARS)
  0
Cabin Class
Economy

Choose a class

 • Economy
 • Business Class
 • Premium Economy
Check In
27 May,Mon
Check Out
28 May,Tue
Guests and Rooms
1 Person, 1 Room
Room 1
 • Guests
  2
Pickup Location
Drop Location
Depart On
27 May,Mon
Return On
28 May,Tue
 • Today
  Arki
  21 OC
  69 OF
  UV Index: 6
  Sunny
 • Tomorrow
  Arki
  13 OC
  56 OF
  UV Index: 6
  Partly cloudy
 • Day After
  Arki
  14 OC
  57 OF
  UV Index: 7
  Partly cloudy