Search
  • Follow NativePlanet
Share
ಮುಖಪುಟ » ಸ್ಥಳಗಳು » ಅರ್ಕಿ » ಹವಾಮಾನ

ಅರ್ಕಿ ಹವಾಮಾನ

ವರ್ಷದ ಎಲ್ಲಾ ದಿನಗಳಲ್ಲಿಯೂ ಪ್ರವಾಸಿಗರನ್ನು ಕೈ ಬಿಸಿ ಕರೆಯುತ್ತದೆ ಅರ್ಕಿ. ಮೋಜು ಮಾಡುವುದಕ್ಕಾಗಿ ಪ್ರವಾಸ ಕೈಗೊಳ್ಳುವಿರಾದರೆ ನಿಮಗೆ ಚಳಿಗಾಲ ಸೂಕ್ತ. ಎಲ್ಲಾ ಸ್ಥಳಗಳನ್ನು ವೀಕ್ಷಿಸುವ ಉದ್ದೇಶ ನಿಮ್ಮದಾಗಿದ್ದರೆ ಬೇಸಿಗೆಗಾಲದಲ್ಲಿ ಬರಬಹುದು. ಈ ಅವಧಿಯಲ್ಲಿ ಎಲ್ಲೆಡೆ ಸುತ್ತಾಡಲು ಅನುಕೂಲಕರವಾದ ವಾತಾವರಣ ಇರುತ್ತದೆ. ಮಳೆಗಾಲ ಹಾಗೂ ಮಳೆಗಾಲದ ನಂತರ ಹೂ ಬಿಡುವ ಅವಧಿಯೂ ನಿಮಗೆ ಅನನ್ಯವಾದ ಅನುಭವ ನೀಡುತ್ತದೆ. ಆಯ್ಕೆ ನಿಮಗೇ ಬಿಟ್ಟದ್ದು.

ಬೇಸಿಗೆಗಾಲ

(ಮಾರ್ಚ ನಿಂದ ಜೂನ್): ಮಾರ್ಚ್‌ ತಿಂಗಳಿನಲ್ಲಿ ಆರಂಭವಾಗುವ ಬೇಸಿಗೆ ಕಾಲ ಜೂನ್‌ ತಿಂಗಳಿನವರೆಗೂ ಇರುತ್ತದೆ. ಈ ಅವಧಿಯಲ್ಲಿ ತಾಪಮಾನ 24 ಡಿಗ್ರಿ ಸೆಂಟಿಗ್ರೇಡ್‌ನಿಂದ 30 ಡಿಗ್ರಿ ಸೆಂಟಿಗ್ರೇಡ್‌ವರೆಗೂ ಇರುತ್ತದೆ.

ಮಳೆಗಾಲ

ಮುಂಗಾರು (ಜುಲೈ - ಆಗಸ್ಟ್):  ಹಿಂಗಾರು (ಸೆಪ್ಟೆಂಬರ್‌ ಮತ್ತು ನವೆಂಬರ್‌): ಆರ್ಕಿಯಲ್ಲಿ ಮಳೆಗಾಲ ಜುಲೈ ತಿಂಗಳಿನಲ್ಲಿ ಪ್ರಾರಂಭವಾಗಿ ಆಗಸ್ಟ ತಿಂಗಳಿನಲ್ಲಿ ಕೊನೆಗೊಳ್ಳುತ್ತದೆ. ಈ ಅವಧಿಯಲ್ಲಿ ಇಲ್ಲಿನ ವಾತಾವರಣ ತೇವಾಂಶದಿಂದ ಕೂಡಿರುತ್ತದೆ. ಮಳೆಗಾಲದ ನಂತರದ ಅವಧಿಯಲ್ಲಿ ಪ್ರವಾಸಿಗರು ಇಲ್ಲಿ ಹೂ ಬಿಡುವ ವಿವಿಧ ಸಸ್ಯಗಳ ವರ್ಣಮಯ ಸೌಂದರ್ಯವನ್ನು ಆಸ್ವಾದಿಸಬಹುದಾಗಿದೆ.

ಚಳಿಗಾಲ

(ನವೆಂಬರ್ - ಫೆಬ್ರವರಿ ): ಇಲ್ಲಿ ಚಳಿಗಾಲ ನವೆಂಬರ್‌ನಲ್ಲಿ ಆರಂಭವಾಗಿ ಫೆಬ್ರುವರಿ ತನಕ ಇರುತ್ತದೆ. ಈ ಅವಧಿಯಲ್ಲಿ ಹಿಮಪಾತ ಸಂಭವಿಸುತ್ತದೆ. ತಾಪಮಾನವಂತೂ ಶೂನ್ಯ ಮಟ್ಟಕ್ಕೆ ಕುಸಿಯುತ್ತದೆ.