Search
  • Follow NativePlanet
Share

ಅಡೂರ್ : ಸಂಪ್ರದಾಯಗಳ ಮಿಶ್ರಣ

24

ಕೇರಳದ ಪಥನಂತಿಟ್ಟ ಜಿಲ್ಲೆಯಲ್ಲಿರುವ ಅಡೂರ್ ಸಂಸ್ಕೃತಿ, ಮಂದಿರಗಳು, ಹಬ್ಬ ಮತ್ತು ಇಲ್ಲಿರುವ ಕೆಲವು ಪ್ರದೇಶಗಳಿಂದಾಗಿ ಸಾಂಪ್ರದಾಯಿಕ ನಗರ. ತಿರುವನಂತಪುರಂನಿಂದ 100 ಕಿ.ಮೀ. ಮತ್ತು ಎರ್ನಕುಲಂನಿಂದ 140 ಕಿ.ಮೀ. ದೂರದಲ್ಲಿರುವ ಅಡೂರ್ ಎರಡೂ ನಗರಗಳಿಗೆ ರಹದಾರಿ. ಹಲವಾರು ಪುರಾತನ ಮಂದಿರಳಿಂದಾಗಿಯೇ ಅಡೂರ್ ಪ್ರಸಿದ್ದಿ ಪಡೆದಿದೆ. ನಗರದ ವಿವಿಧ ಭಾಗಗಳಲ್ಲಿರುವ ಹಲವಾರು ಮಂದಿರಗಳು, ಉತ್ಸವಗಳು ಅನನ್ಯ ಸಂಸ್ಕೃತಿಯ ಉಗಮಕ್ಕೆ ಬೃಹತ್ ಕೊಡುಗೆ ನೀಡಿದೆ.

ಮಂದಿರ ಹಾಗೂ ಚರ್ಚ್ ಗಳ ನಗರ

ಭಗವಾನ್ ಕೃಷ್ಣನ ಮುಖ್ಯ ಮೂರ್ತಿಯಿರುವ ಪಾರ್ಥಸಾರಥಿ ಮಂದಿರವು ನಗರದ ಪ್ರಮುಖ ಆಕರ್ಷಣೆ. ಪಂದಲಂ ಮಹಾದೇವ ಮಂದಿರ, ಪಟ್ಟುಪುರಕಲ್ ದೇವಿ ಮಂದಿರ, ಪುಥೆಂಕವಿಲ್ ಭಗವತಿ ಮಂದಿರ ಮತ್ತು ಶ್ರೀನಾರಾಯಣಪುರಂ ಮಹಾವಿಷ್ಣು ಮಂದಿರ ಅಡೂರ್ ನಲ್ಲಿರುವ ಪ್ರಮುಖ ಧಾರ್ಮಿಕ ಕ್ಷೇತ್ರಗಳು. ಚೆನ್ನಮಪಳ್ಳಿಲ್ ನಲ್ಲಿರುವ ಪ್ರಸಿದ್ಧ ಶ್ರೀಧರ್ಮ ಶಾಸ್ತ ಮಂದಿರ ಮತ್ತು ಎಲಮನ್ನೂರ್ ನಲ್ಲಿರುವ ಮಹಾವಿಷ್ಣು ದೇವಸ್ಥಾನಗಳಿಗೆ ಭೇಟಿ ನೀಡಲು ಸಾವಿರಾರು ಮಂದಿ ಭಕ್ತರು ಆಗಮಿಸುತ್ತಾರೆ. ಸೇಂಟ್ ಜಾರ್ಜ್ ಅರ್ಥಡಕ್ಸ್ ಚರ್ಚ್ ಮತ್ತು ಸೇಂಟ್ ಮೇರಿ ಅರ್ಥಡಾಕ್ಸ್ ಸಿರಿಯನ್ ಕ್ಯಾಥಡ್ರಲ್ ಕ್ರಿಶ್ಚಿಯನ್ ಸಮುದಾಯದವರು ಸೆಳೆಯುವ ಎರಡು ಪ್ರಮುಖ ಕೇಂದ್ರಗಳು. ಈ ಮಂದಿರ ಹಾಗೂ ಚರ್ಚ್ ಗಳು ಪ್ರದೇಶದ ಸಂಸ್ಕೃತಿಯ ಇತಿಹಾಸದಲ್ಲಿ ಪ್ರಮುಖ ಪಾತ್ರವಹಿಸಿವೆ.

ಕೇರಳದ ಅತ್ಯಂತ ಹಳೆಯ ಮಾರುಕಟ್ಟೆಯಲ್ಲಿ ಒಂದಾಗಿರುವ ಮೂಲಂ ಮಾರುಕಟ್ಟೆ ಅಡೂರ್ ಗೆ ಆಗಮಿಸುವ ಪ್ರವಾಸಿಗಳಿಗೆ ಶಾಪಿಂಗ್ ನ ವಿಶೇಷ ಅನುಭವ ನೀಡುತ್ತದೆ. ಉಷ್ಣವಲಯದ ಹವಾಮಾನ ಹೊಂದಿರುವ ಅಡೂರ್ ಗೆ ಬೇಸಿಗೆ ಮತ್ತು ಮಳೆಗಾಲದಲ್ಲಿ ಪ್ರಯಾಣಿಸಬಾರದು. ನಗರಕ್ಕೆ ರೈಲು ಮತ್ತು ರಸ್ತೆ ಮೂಲಕ ಒಳ್ಳೆಯ ಸಂಪರ್ಕವಿರುವ ಕಾರಣ ಪ್ರಯಾಣದ ಖರ್ಚು ತುಂಬಾ ಕಡಿಮೆ.

ಅಡೂರ್ ಪ್ರಸಿದ್ಧವಾಗಿದೆ

ಅಡೂರ್ ಹವಾಮಾನ

ಉತ್ತಮ ಸಮಯ ಅಡೂರ್

  • Jan
  • Feb
  • Mar
  • Apr
  • May
  • Jun
  • July
  • Aug
  • Sep
  • Oct
  • Nov
  • Dec

ತಲುಪುವ ಬಗೆ ಅಡೂರ್

  • ರಸ್ತೆಯ ಮೂಲಕ
    ಅಡೂರ್ ನಿಂದ ಎರ್ನಕುಲಂ, ತಿರುವನಂತಪುರಂ ಮತ್ತು ಕೊಚ್ಚಿಗೆ ಅಡೂರ್ ನಿಂದ ರಸ್ತೆ ಮತ್ತು ಬಸ್ ಸಂಪರ್ಕವಿದೆ. ಕಲಂಕುಲಂ, ಪುನಲೂರ್, ಪಥ್ನಂಥಿಟ್ಟಾ, ಕೊಟ್ಟಾರಕ್ಕರ, ಗುರುವಾಯೂರ್, ಚಾವರ, ಕೊಲ್ಲಂ ಮತ್ತು ಕರುಂಗಪಳ್ಳಿಗೂ ಅಡೂರ್ ನಿಂದ ರಸ್ತೆ ಸಂಪರ್ಕವಿದೆ. ಬೆಂಗಳೂರಿನಿಂದ ಅಡೂರ್ ಗೆ ಲಕ್ಸೂರಿ ಬಸ್ ಸೇವೆಯಿದೆ.
    ಮಾರ್ಗಗಳ ಹುಡುಕಾಟ
  • ರೈಲಿನ ಮೂಲಕ
    ಅಡೂರ್ ಗೆ ಸಮೀಪದ ರೈಲು ನಿಲ್ದಾಣ ಎರ್ನಕುಲಂ 125 ಕಿ.ಮೀ. ದೂರದಲ್ಲಿದೆ. ಎರ್ನಕುಲಂ ಪ್ರಮುಖ ರೈಲು ನಿಲ್ದಾಣವಾಗಿದ್ದು, ರಾಷ್ಟ್ರದ ಎಲ್ಲಾ ಭಾಗಗಳಿಗೆ ಇಲ್ಲಿಂದ ರೈಲುಗಳಿವೆ. ರೈಲು ನಿಲ್ದಾಣದಿಂದ ಟ್ಯಾಕ್ಸಿಗಳಿಗೆ. ಎರ್ನಕುಲಂನಿಂದ ಅಡೂರ್ ಗೆ ಬಸ್ ಸೇವೆಯೂ ಲಭ್ಯವಿದೆ.
    ಮಾರ್ಗಗಳ ಹುಡುಕಾಟ
  • ಆಕಾಶದ ಮೂಲಕ
    ಅಡೂರ್ ಗೆ ಸಮೀಪದ ವಿಮಾನ ನಿಲ್ದಾಣ ಕೊಚ್ಚಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವು 140 ಕಿ.ಮೀ. ದೂರದಲ್ಲಿದೆ. ಭಾರತದ ಪ್ರಮುಖ ನಗರಗಳಾದ ಚೆನ್ನೈ, ಬೆಂಗಳೂರು, ದೆಹಲಿ ಮತ್ತು ಹೈದರಾಬಾದ್ ಗೆ ಕೊಚ್ಚಿ ವಿಮಾನ ನಿಲ್ದಾಣದಿಂದ ಹಲವಾರು ವಿಮಾನಗಳಿವೆ. ವಿಮಾನದಲ್ಲಿ ಆಗಮಿಸಿದರೆ ಬಳಿಕ ಟ್ಯಾಕ್ಸಿ ಮೂಲಕ ಪ್ರಯಾಣಿಸಬಹುದು.
    ಮಾರ್ಗಗಳ ಹುಡುಕಾಟ
One Way
Return
From (Departure City)
To (Destination City)
Depart On
19 Mar,Tue
Return On
20 Mar,Wed
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
19 Mar,Tue
Check Out
20 Mar,Wed
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
19 Mar,Tue
Return On
20 Mar,Wed