Search
  • Follow NativePlanet
Share
ಮುಖಪುಟ » ಸ್ಥಳಗಳು» ತ್ರಿಶ್ಶುರ್

ತ್ರಿಶ್ಶೂರ್ - ಇತಿಹಾಸ, ಸಂಸ್ಕ್ರತಿ ಮತ್ತು ವಿರಾಮಕಾಲ ಕೂಡುವ ಸ್ಥಳ.

46

ತ್ರಿಶ್ಶೂರ್ ಒಂದು ಕೇವಲ ವಿರಾಮಕಾಲವನ್ನು ಕಳೆಯುವ ಸ್ಥಳವಷ್ಟೇ ಅಲ್ಲದೆ ಕೇರಳದ ಸಾಂಸ್ಕ್ರತಿಕ ರಾಜಧಾನಿಯೆಂದು ಸಹ ಕರೆಯಲ್ಪಡುತ್ತದೆ. ಇದು ಒಂದು ಅದ್ಭುತವಾದ ಸ್ಥಳವಾಗಿದ್ದು ಇಲ್ಲಿನ ಕಲಾವಿದರ ಕೈಚಳಕದಿಂದ ಅರಳಿದ ಕಲೆಯು ಮನುಷ್ಯ ಮತ್ತು ದೇವರು ಇಬ್ಬರ ಕಣ್ಣುಗಳನ್ನು ತೆರೆಸುವಂತಹ ಚಮತ್ಕಾರವನ್ನು ಹೊಂದಿವೆ. ತ್ರಿಶ್ಶೂರ್ ಎಂಬುದು ತ್ರಿಶಿವಪೆರೂರು (ಪರಮಶಿವನ ಊರು ಎಂದರ್ಥ) ಎಂಬ ಹೆಸರಿನ ಸಂಕ್ಷಿಪ್ತ ರೂಪವಾಗಿದೆ. ಈ ಹೆಸರು ಇಲ್ಲಿನ ವಡಕ್ಕುಮನಾಥನ್ ಕ್ಷೇತ್ರದಲ್ಲಿರುವ ಮೂಲದೇವರಿನಿಂದಾಗಿ ಬಂದಿದೆ.

ಗತಕಾಲದ ಸಾಕ್ಷಿಗಳು

ಈ ಊರು ತನ್ನ ಹೆಸರಿಗೆ ಸಾರ್ಥಕ ತರುವಂತೆ ದೈವಿಕ, ಪ್ರಾಕೃತಿಕ ಮತ್ತು ಸಾಂಸ್ಕೃತಿಕ ಸೌಂದರ್ಯವನ್ನು ಹೊಂದಿದೆ. ಇದನ್ನು ಇಲ್ಲಿನ ವಿವಿಧ ಸ್ಥಳಗಳಲ್ಲಿ ನಾವು ಸಾಕ್ಷೀಕರಿಸಬಹುದು. ಈ ಊರು ತನ್ನಲ್ಲಿರುವ ಪುರಾತನ ಪೂಜಾಸ್ಥಳಗಳು, ವಾಸ್ತು ಶಿಲ್ಪಗಳು ಹಾಗು ಅವುಗಳ ಇತಿಹಾಸದಿಂದ ಇಲ್ಲಿಗೆ ಆಗಮಿಸುವವರು ಊಹೆಯನ್ನು ಮತ್ತು ಭರವಸೆಯ ಅಣು ಅಣುವನ್ನು ಸಹ ತೃಪ್ತಿಗೊಳಿಸುತ್ತದೆ. ಇಲ್ಲಿನ ಸಮೃದ್ಧ ಇತಿಹಾಸವು ಇಲ್ಲಿರುವ ಪತ್ರಾಗಾರಗಳಲ್ಲಿ ಮತ್ತು ವಸ್ತುಸಂಗ್ರಹಾಲಯಗಳಲ್ಲಿ ಬೆಚ್ಚಗೆ ಕುಳಿತಿದ್ದು, ಹಲವಾರು ಕಥೆಗಳು ಪುನರ್ ಉಲ್ಲೇಖಗೊಳ್ಳಲು ಮತ್ತು ಪುನರ್ ಕಲ್ಪನೆಗೆ ಒಳಪಡಲು ನಿಮಗಾಗಿ ಕಾದು ಕುಳಿತಿವೆ. ಪೋರ್ಚುಗೀಸ್, ಡಚ್ ಮತ್ತು ಇಂಗ್ಲೀಷರ ಕಾಲದ ಗತವೈಭವವನ್ನು ಕಂಡಿರುವ ಈ ನಗರವು ಅವರ ಇತಿಹಾಸವನ್ನು ಹೇಳುತ್ತ ನಿಮ್ಮನ್ನು ಮಂತ್ರಮುಗ್ದಗೊಳಿಸಲು ಕಾಯುತ್ತಿದೆ.

ಒಂದು ನಗರಕ್ಕಿಂತ ಮಿಗಿಲಾದುದು

ಇಲ್ಲಿನ ಹೊರಾಂಗಣದ ಅನುಭವಗಳು, ಧುಮ್ಮಿಕ್ಕಿ ಹರಿಯುವ ಜಲಪಾತಗಳು, ಬೀಚುಗಳು, ಜಲಾಶಯ ಎಲ್ಲವು ಕೂಡಿ ನಿಮ್ಮ ತನು ಮನವನ್ನು ಪುಳಕಗೊಳಿಸುತ್ತ ಹೊಸ ಪ್ರಪಂಚವನ್ನು ತೋರಿಸುತ್ತವೆ.

ತ್ರಿಶ್ಶೂರಿಗೆ ಯಾವಾಗ ಹೋಗಬೇಕು?

ವಾಣಿಜ್ಯ ಕೇಂದ್ರವಾಗಿರುವ ತ್ರಿಶ್ಶೂರ್ ತನ್ನ ಅತಿಥಿ ಸತ್ಕಾರದಿಂದಾಗಿ ವರ್ಷಾಪೂರ್ತಿ ಪ್ರವಾಸಿಗರನ್ನು ತನ್ನತ್ತ ಆಕರ್ಷಿಸುತ್ತಿರುತ್ತದೆ. ಇಲ್ಲಿ ಎಪ್ರಿಲ್ - ಮೇ ತಿಂಗಳುಗಳಲ್ಲಿ ನಡೆಯುವ ಪೂರಮ್ ಉತ್ಸವವು ಭಕ್ತಾಧಿಗಳನ್ನು ಮತ್ತು ಪ್ರವಾಸಿಗರನ್ನು ತನ್ನತ್ತ ಆಕರ್ಷಿಸುತ್ತಿರುತ್ತದೆ. ಆದರು ಸಹ ಈ ಸಮಯದಲ್ಲಿ ಇಲ್ಲಿನ ಬಿಸಿಲು ಮತ್ತು ಆರ್ದ್ರತೆಯಿಂದ ದೂರವಿರುವುದು ಉತ್ತಮ. ಅಕ್ಟೋಬರ್- ಫೆಬ್ರವರಿ ತಿಂಗಳುಗಳು ಇಲ್ಲಿಗೆ ಭೇಟಿ ಕೊಡಲು ಅತ್ಯುತ್ತಮ ಸಮಯವಾಗಿದೆ. ತ್ರಿಶ್ಶೂರ್ ಸ್ವಂತ ವಿಮಾನ ನಿಲ್ದಾಣವನ್ನು ಹೊಂದಿಲ್ಲ. ಆದರು ಇಲ್ಲಿಗೆ ಇನ್ನಿತರ ಊರುಗಳಿಂದ ಬಸ್ಸುಗಳ ಸೌಕರ್ಯವು ಉತ್ತಮವಾಗಿದೆ. ಬಹುತೇಕ ಸಂದರ್ಭದಲ್ಲಿ ರೈಲು ಪ್ರಯಾಣವು ಇಲ್ಲಿಗೆ ತಲುಪಲು ಅತ್ಯಂತ ಅನುಕೂಲಕರವಾಗಿರುತ್ತದೆ.

ತ್ರಿಶ್ಶುರ್ ಪ್ರಸಿದ್ಧವಾಗಿದೆ

ತ್ರಿಶ್ಶುರ್ ಹವಾಮಾನ

ಉತ್ತಮ ಸಮಯ ತ್ರಿಶ್ಶುರ್

  • Jan
  • Feb
  • Mar
  • Apr
  • May
  • Jun
  • July
  • Aug
  • Sep
  • Oct
  • Nov
  • Dec

ತಲುಪುವ ಬಗೆ ತ್ರಿಶ್ಶುರ್

  • ರಸ್ತೆಯ ಮೂಲಕ
    ನೀವು ತ್ರಿಶ್ಶೂರಿಗೆ ಬಸ್ಸಿನ ಮೂಲಕ ಬೆಂಗಳೂರು, ತ್ರಿವೇಂದ್ರಂ, ಮುಂಬಯಿ, ಕೊಯಮತ್ತೂರ್, ಕಣ್ಣೂರ್, ಕೋಳಿಕೊಡೆ, ಕೊಚ್ಚಿ ಮತ್ತು ಇತ್ಯಾದಿ ನಗರಗಳಿಂದ ತಲುಪಬಹುದು. ಇದಕ್ಕಾಗಿ ಹಲವಾರು ಸರ್ಕಾರಿ ಮತ್ತು ಖಾಸಗಿ ಬಸ್ಸುಗಳು ನಿಮಗೆ ಬಸ್ಸುಗಳ ಸೌಕರ್ಯವನ್ನು ಒದಗಿಸುತ್ತವೆ. ಆದರೆ ಇದು ದುಬಾರಿ ಮತ್ತು ಅಸುಖಕರವಾಗಿರುತ್ತದೆ. ತ್ರಿಶ್ಶೂರ್ ಮೂಲಕ ರಾಷ್ಟ್ರೀಯ ಹೆದ್ದಾರಿ 47 ಮತ್ತು ರಾಷ್ಟ್ರೀಯ ಹೆದ್ದಾರಿ 17 ಹಾದು ಹೋಗುತ್ತದೆ. ಇವು ಕೊಚ್ಚಿ, ಕೋಳಿಕೊಡ್ , ಚೆನ್ನೈ, ಬೆಂಗಳೂರು, ಕೋಯಮತ್ತೂರ್, ಮಧುರೈ, ಪೊಲ್ಲಾಚ್ಚಿಯಂತಹ ನಗರಗಳನ್ನು ಸಂಪರ್ಕಿಸುತ್ತವೆ.
    ಮಾರ್ಗಗಳ ಹುಡುಕಾಟ
  • ರೈಲಿನ ಮೂಲಕ
    ಭಾರತದ ಹಲವಾರು ನಗರಗಳೊಂದಿಗೆ ತ್ರಿಶ್ಶೂರ್ ಉತ್ತಮ ರೈಲು ಸಂಪರ್ಕವನ್ನು ಹೊಂದಿದೆ. ಮುಂಬಯಿ, ದೆಹಲಿ, ಕೊಲ್ಕತ್ತಾ, ಮಂಗಳೂರು, ಚೆನ್ನೈ, ಹೈದರಾಬಾದ್ ಇತ್ಯಾದಿ ನಗರಗಳಿಗೆ ದಿನಂಪ್ರತಿ ರೈಲುಗಳ ಓಡಾಟ ವ್ಯವಸ್ಥೆ ಇಲ್ಲಿದೆ.
    ಮಾರ್ಗಗಳ ಹುಡುಕಾಟ
  • ಆಕಾಶದ ಮೂಲಕ
    ತ್ರಿಶ್ಶೂರಿನಲ್ಲಿ ವಿಮಾನ ನಿಲ್ದಾಣವಿಲ್ಲ. ಕೊಚ್ಚಿ ವಿಮಾನ ನಿಲ್ದಾಣವು ಇಲ್ಲಿಗೆ 58 ಕಿ.ಮೀ ದೂರದಲ್ಲಿದ್ದು, ಇಲ್ಲಿಗೆ ಸಮೀಪದ ವಿಮಾನ ನಿಲ್ದಾಣವಾಗಿದೆ. ಸಿಂಗಾಪುರ್ ,ಯೂರೋಪ್, ಶ್ರೀಲಂಕಾಗಳಿಂದ ನೇರವಾಗಿ ಇಲ್ಲಿಗೆ ವಿಮಾನ ಸೇವೆ ಲಭ್ಯವಿದೆ. ಅಲ್ಲದೆ ಕೊಚ್ಚಿಯಿಂದ ಭಾರತದ ಹಲವಾರು ನಗರಗಳಿಗೆ ವಿಮಾನಗಳು ಹಾರಾಡುತ್ತಿರುತ್ತವೆ.
    ಮಾರ್ಗಗಳ ಹುಡುಕಾಟ
One Way
Return
From (Departure City)
To (Destination City)
Depart On
29 Mar,Fri
Return On
30 Mar,Sat
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
29 Mar,Fri
Check Out
30 Mar,Sat
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
29 Mar,Fri
Return On
30 Mar,Sat