Search
  • Follow NativePlanet
Share
ಮುಖಪುಟ » ಸ್ಥಳಗಳು » ತ್ರಿಶ್ಶುರ್ » ಆಕರ್ಷಣೆಗಳು » ವಡಕ್ಕುಂನಾಥನ್ ದೇವಾಲಯ

ವಡಕ್ಕುಂನಾಥನ್ ದೇವಾಲಯ, ತ್ರಿಶ್ಶುರ್

2

ವಡಕ್ಕುಂನಾಥನ್ ದೇವಾಲಯವು ನೋಡಲೆ ಬೇಕಾದ ಸ್ಥಳಗಳಲ್ಲಿ ಒಂದಾಗಿ ಸ್ಥಾನ ಪಡೆದಿದೆ. ಪರಮಶಿವನ ತಾಣವಾಗಿರುವ ಇದು ತೆಂಕೈಲಾಸಂ ಮತ್ತು ವೃಷಭಾಚಲಂ ಎಂಬ ಹೆಸರುಗಳಿಂದಲು ಕರೆಯಲ್ಪಡುತ್ತದೆ. ದಂತಕಥೆಗಳ ಪ್ರಕಾರ ಇದು ವಿಷ್ಣುವಿನ ಅವತಾರವಾದ ಪರಶುರಾಮರಿಂದ ನಿರ್ಮಿಸಲ್ಪಟ್ಟ ಮೊಟ್ಟಮೊದಲ ದೇವಾಲಯವಂತೆ. ದಂತಕಥೆಯ ಪ್ರಕಾರ ಈ ದೇವಾಲಯವು ಆಸ್ತಿಕರಿಗೆ ತನ್ನ ಪವಿತ್ರಶಕ್ತಿಯನ್ನು ಸಂಚಯಿಸುತ್ತದೆಯಂತೆ. ಗರ್ಭಗುಡಿಯ ಸುತ್ತಲು ನಾಲ್ಕುದಿಕ್ಕಿನಲ್ಲಿ ಎದ್ದು ನಿಂತಿರುವ ಸ್ಮಾರಕ ಗೋಪುರಗಳು ನಿಮಗೆ ಕೇರಳದ ವಾಸ್ತುಶಿಲ್ಪದ ಪರಿಚಯವನ್ನು ಆಸ್ವಾದಿಸುವ ಅವಕಾಶವನ್ನುಂಟು ಮಾಡುತ್ತವೆ.

ಈ ದೇವಾಲಯವು ಕೇವಲ ಪುರಾಣಗಳ ಕಥೆಯನ್ನಷ್ಟೆ ಹೇಳುವುದಿಲ್ಲ. ಬದಲಿಗೆ ಇಲ್ಲಿ ಮರದಲ್ಲಿ ಕೆತ್ತಲಾಗಿರುವ ಐತಿಹಾಸಿಕ ಭಿತ್ತಿಚಿತ್ರಕಲೆಯಲ್ಲಿ ಅರಳಿರುವ ಮಹಾಭಾರತ ಕಾವ್ಯದ ಚಿತ್ರಗಳನ್ನು ನೋಡಿ ತಣಿಯಬಹುದು. ಅಲ್ಲದೆ ತನ್ನ ಕುಟಂಬಲಮ್ ಮೂಲಕ ಕಲೆ ಮತ್ತು ಸಂಸ್ಕೃತಿಯ ಕುರಿತಾಗಿ ಒಲವುಳ್ಳವರಿಗು ಸಹ ಇದು ಆಕರ್ಷಣೀಯವಾದ ತಾಣವಾಗಿದೆ. ಇದೊಂದು ಪ್ರದರ್ಶನ ಕಲೆಗಾಗಿ ಮುಡಿಪಾಗಿಟ್ಟು ನಿರ್ಮಿಸಲಾಗಿರುವ ಪ್ರದೇಶವಾಗಿದ್ದು, ಇಲ್ಲಿನ ವೇದಿಕೆಯನ್ನು ಈ ದೇವಾಲಯದ ಗರ್ಭಗುಡಿಯಷ್ಟೇ ಪವಿತ್ರವೆಂದು ಭಾವಿಸಲಾಗುತ್ತದೆ. ಈ ದೇವಾಲಯವು ಪೂರಮ್ ಉತ್ಸವ ನಡೆಯುವ ಟೆಕ್ಕಿಕಾಡು ಮೈದಾನದ ಬಳಿ ನೆಲೆಸಿದೆ.

One Way
Return
From (Departure City)
To (Destination City)
Depart On
07 Sep,Mon
Return On
08 Sep,Tue
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
07 Sep,Mon
Check Out
08 Sep,Tue
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
07 Sep,Mon
Return On
08 Sep,Tue