Search
  • Follow NativePlanet
Share
ಮುಖಪುಟ » ಸ್ಥಳಗಳು » ತ್ರಿಶ್ಶುರ್ » ಹವಾಮಾನ

ತ್ರಿಶ್ಶುರ್ ಹವಾಮಾನ

ಸುಡುವ ಬಿಸಿಲಿನ ಬೇಸಿಗೆ ಮತ್ತು ಎಡೆಬಿಡದೆ ಸುರಿಯುವ ಕುಂಭದ್ರೋಣ ಮಳೆಯ ಮಳೆಗಾಲಕ್ಕಿಂತ ಚಳಿಗಾಲ ಅಂದರೆ, ಅಕ್ಟೋಬರ್ ಮತ್ತು ಫೆಬ್ರವರಿ ತಿಂಗಳುಗಳ ನಡುವಿನ ಕಾಲವು ಇಲ್ಲಿಗೆ ಭೇಟಿಕೊಡಲು ಅತ್ಯಂತ ಸೂಕ್ತ ಸಮಯವಾಗಿದೆ. ಚಾರಣವಾಗಲಿ, ಸ್ಥಳ ವೀಕ್ಷಣೆಯಾಗಲಿ, ಈ ಕಾಲವು “ಕೇರಳದ ಸಾಂಸ್ಕೃತಿಕ ರಾಜಧಾನಿ”ಯನ್ನು ಸುತ್ತಾಡಲು ಹೇಳಿ ಮಾಡಿಸಿದ ಸಮಯವಾಗಿರುತ್ತದೆ.

ಬೇಸಿಗೆಗಾಲ

ಮಾರ್ಚ್- ಮೇ: ತ್ರಿಶ್ಶೂರ್ ಒಣ ಮತ್ತು ಧಗೆಯಿಂದ ಕೂಡಿದ ಬೇಸಿಗೆಯನ್ನು ಹೊಂದಿರುತ್ತದೆ. ಆಗ ಇಲ್ಲಿನ ಉಷ್ಣಾಂಶವು 30°-35° ಸೆಲ್ಶಿಯಸ್ ವರೆಗು ಇರುತ್ತದೆ. ಈ ಅವಧಿಯಲ್ಲಿನ ಬಿಸಿಲು ದೇಹದಲ್ಲಿರುವ ನೀರನ್ನೆಲ್ಲ ಬಸಿದು ಹಾಕುತ್ತದೆ. ಹಾಗಾಗಿ ಈ ಕಾಲ ಪ್ರವಾಸ ಮಾಡಲು ಸೂಕ್ತವಲ್ಲ.

ಮಳೆಗಾಲ

ಜೂನ್ ನಿಂದ ಸೆಪ್ಟಂಬರ್: ಮಳೆಗಾಲವು ತ್ರಿಶ್ಶೂರಿನಲ್ಲಿ ಮೇ ತಿಂಗಳ ಕಡೆಯ ವಾರದಲ್ಲಿ ನೈಋತ್ಯ ಮಾನ್ಸೂನ್ ಮಾರುತಗಳ ಆಗಮನದೊಂದಿಗೆ ಆರಂಭವಾಗುತ್ತದೆ. ಜುಲೈ ಅಂತ್ಯದವರೆಗಿನ ಕಾಲವು ಇಲ್ಲಿ ಬೀಳುವ ಭಾರೀ ವರ್ಷಧಾರೆಗೆ ಕುಖ್ಯಾತಿ ಪಡೆದಿದೆ.

ಚಳಿಗಾಲ

ಅಕ್ಟೋಬರ್- ಫೆಬ್ರವರಿ: ಈ ಅವಧಿಯು ತ್ರಿಶ್ಶೂರಿನಲ್ಲಿ ಅತ್ಯಂತ ಆಹ್ಲಾದಕರವಾದ ಹವಾಗುಣಕ್ಕೆ ಹೆಸರಾಗಿದೆ. ಆಗ ಇಲ್ಲಿನ ಉಷ್ಣಾಂಶವು ಅಂದಾಜು 30° ಹಾಸು ಪಾಸಿನಲ್ಲಿರುತ್ತದೆ.