Search
  • Follow NativePlanet
Share
ಮುಖಪುಟ » ಸ್ಥಳಗಳು » ತ್ರಿಶ್ಶುರ್ » ಆಕರ್ಷಣೆಗಳು » ಪಾರಂಬಿಕ್ಕುಲಮ್ ವನ್ಯಜೀವಿಧಾಮ

ಪಾರಂಬಿಕ್ಕುಲಮ್ ವನ್ಯಜೀವಿಧಾಮ, ತ್ರಿಶ್ಶುರ್

3

ಪಾರಂಬಿಕ್ಕುಲಮ್ ವನ್ಯಜೀವಿಧಾಮವು ಪರಿಸರ ಪ್ರಿಯರ ನೆಚ್ಚಿನ ತಾಣವಾಗಿದೆ. ಇದು ತಮಿಳುನಾಡಿನ ಅಣ್ಣಾಮಲೈ ಪರ್ವತಶ್ರೇಣಿ ಮತ್ತು  ಕೇರಳದ ನೆಲ್ಲಿಯಂಪದಿ ಪರ್ವತಶ್ರೇಣಿಗಳ ನಡುವೆ ನೆಲೆಗೊಂಡಿದೆ. ಈ ಕಣಿವೆಯಲ್ಲಿರುವ ನಿರ್ಮಲ ವಾತಾವರಣವನ್ನು ಆಸ್ವಾದಿಸಲು ಇಲ್ಲಿಗೆ ಭೇಟಿ ಕೊಡಬೇಕು. 285 ಚ.ಕಿ.ಮೀ.ನಷ್ಟು ವ್ಯಾಪಿಸಿರುವ ಈ ವನ್ಯಧಾಮವು ಯಥೇಚ್ಛವಾಗಿ ವನ್ಯಮೃಗಗಳನ್ನು, ಸಸ್ಯಸಂಪತ್ತನ್ನು ಹೊಂದಿದೆ. ವಿಶ್ವದ ಅತ್ಯಂತ ಸೂಕ್ಷ್ಮ ಜೀವ ವೈವಿಧ್ಯದ  34 ತಾಣಗಳಲ್ಲಿ ಒಂದಾಗಿ ಸ್ಥಾನಪಡೆದಿರುವ ಈ ವನ್ಯಧಾಮಕ್ಕೆ ಯಾವುದೇ ರೀತಿಯ ಖಾಸಗಿ ವಾಹನಗಳು ಪ್ರವೇಶಿಸುವುದನ್ನು ನಿರ್ಬಂಧಿಸಲಾಗಿದೆ. ನೀವು ಇಲ್ಲಿನ ಹುಲಿ , ಚಿರತೆ, ಕಾಡುನಾಯಿ, ಆನೆ, ಬೈಸನ್ ಇತ್ಯಾದಿಗಳನ್ನು ನೋಡಲು ಸಫಾರಿ ವಾಹನಗಳಲ್ಲಿ ಹೋಗಬೇಕಾಗುತ್ತದೆ. ಅತಿ ಅಪರೂಪವೆಂಬ ಹಣೆಪಟ್ಟಿಯನ್ನು ಹೊಂದಿರುವ 134 ಜಾತಿಯ ಪಕ್ಷಿಗಳು ಇಲ್ಲಿ ಆಶ್ರಯ ಪಡೆದಿವೆ. ಅಷ್ಟೇ ಅಲ್ಲದೆ ಬಗೆ ಬಗೆಯ ಕೀಟ, ಸರಿಸೃಪ, ಉಭಯವಾಸಿ, ಮೀನು, ಚಿಟ್ಟೆ, ಸಸ್ಯ ಮತ್ತು ಇತ್ಯಾದಿಗಳನ್ನು ಇಲ್ಲಿ ಕಾಣಬಹುದು.

ಈ ವನ್ಯಧಾಮವು ಇಲ್ಲಿಗೆ ಆಗಮಿಸುವವರಿಗೆ ಟೆಂಟ್ ಗಳಿಂದ ಹಿಡಿದು ಮರದ ಕುಟೀರಗಳವರೆಗೆ ವಿವಿಧ ಬಗೆಯ ವಸತಿ ಸೌಲಭ್ಯವನ್ನು ಒದಗಿಸುತ್ತದೆ. ಈ ವನ್ಯಜೀವಿಧಾಮಕ್ಕೆ ರಸ್ತೆ ಮಾರ್ಗವಾಗಿ ಮಾತ್ರ ತಲುಪಬಹುದು. ಒಂದು ರಸ್ತೆಯು ಪಾಲಕ್ಕಾಡಿನಿಂದ(ಕೇರಳ) ಇದನ್ನು ಸಂಪರ್ಕಿಸಿದರೆ ಇನ್ನೊಂದು ಕೊಯಮತ್ತೂರಿನಿಂದ (ತಮಿಳುನಾಡು) ಸಂಪರ್ಕಿಸುತ್ತದೆ. ಪೊಲ್ಲಾಚ್ಚಿ (ತಮಿಳುನಾಡು) ಯಿಂದ ಇಲ್ಲಿಗೆ ಬಸ್ಸುಗಳ ಸೌಕರ್ಯವಿದೆ. ಇದು ಬೆಳಗ್ಗೆ 7 ರಿಂದ ಸಂಜೆ 6 ರವರೆಗೆ ತೆರೆದಿರುತ್ತದೆ.

One Way
Return
From (Departure City)
To (Destination City)
Depart On
19 Apr,Fri
Return On
20 Apr,Sat
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
19 Apr,Fri
Check Out
20 Apr,Sat
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
19 Apr,Fri
Return On
20 Apr,Sat