Search
 • Follow NativePlanet
Share
ಮುಖಪುಟ » ಸ್ಥಳಗಳು» ಕೊಲ್ಲಂ

ಕೊಲ್ಲಂ: ಗೋಡಂಬಿ ಹಾಗೂ ನಾರಿನ ನಗರಿ

43

ಕೊಲ್ಲಂ, ಮುಖ್ಯವಾಗಿ ತನ್ನನ್ನು ಗುರುತಿಸಿಕೊಂಡಿದ್ದು, ಜನಪ್ರಿಯವಾಗಿದ್ದು 'ಕ್ವಾಯನ್‌' ಅನ್ನುವ ಹೆಸರಿನಿಂದ. ಈ ನಗರಿ ತನ್ನ ಶ್ರೀಮಂತ ಸಂಸ್ಕೃತಿ ಹಾಗೂ ವಾಣಿಜ್ಯ ವ್ಯವಹಾರಗಳಿಂದ ಜನಪ್ರಿಯವಾಗಿದೆ. ಈ ಕರಾವಳಿ ತಟದ ನಗರಿಯು ಅಷ್ಟಾಂಬುಧಿ ಕೆರೆಯನ್ನೂಹೊಂದಿದೆ. ಅಲ್ಲದೇ ಕೋಲಂ ಜಿಲ್ಲೆಯ ಕೇಂದ್ರವೂ ಇದೇ ಆಗಿದೆ. ಇದು ಇಲ್ಲಿನ ಸಾಂಸ್ಕೃತಿಕ ಶ್ರೀಮಂತಿಕೆಗೆ ಅಪಾರ ಕೊಡುಗೆ ನೀಡಿದ್ದು, ಕೇರಳದ ಆರ್ಥಿಕ ಪ್ರಗತಿಗೂ ಸಾಕಷ್ಟು ಸಹಕಾರ ನೀಡಿದೆ. ಇಲ್ಲಿನ ಐತಿಹಾಸಿಕ ಹಿನ್ನೆಲೆ ಗಮನಿಸಿದಾಗ ಅರಿವಿಗೆ ಬರುವ ಅಂಶವೆಂದರೆ ಅತಿ ದೊಡ್ಡ ವಾಣಿಜ್ಯ ವ್ಯಾಪಾರ ವಹಿವಾಟಿನ ಜಾಲವನ್ನು ಈ ಪ್ರದೇಶ ಹೊಂದಿದೆ. ಚೈನಾ, ರೋಮ್‌, ಹಾಗೂ ಮಧ್ಯ ಪೂರ್ವ ಯೂರೋಪ್‌ ರಾಷ್ಟಗಳೊಂದಿಗೆ ಸಂಪರ್ಕ ಹೊಂದಿದೆ. ದೇಶದ ಇತರೆ ಭಾಗಗಳಿಗೂ ಈ ನಗರದ ವಾಣಿಜ್ಯ ಸಂಪರ್ಕ ಆಂತರಿಕವಾಗಿ ಇದೆ. ತುಂಬಾ ಹಳೆಯ ಹಾಗೂ ಜನಪ್ರಿಯ ಕೈಗಾರಿಕಾ ಕೇಂದ್ರಗಳು ಇಲ್ಲಿವೆ.

ಇಂದು ಕೊಲ್ಲಂ ಜಾಗತಿಕ ಮಟ್ಟದಲ್ಲಿ ಹೆಸರುವಾಸಿ ಪ್ರದೇಶವಾಗಿದೆ. ಅತಿ ದೊಡ್ಡ ಪ್ರಮಾಣದಲ್ಲಿ ಮಧ್ಯಮ ದರ್ಜೆಯ ಗೋಡಂಬಿ ಬೆಳೆಯುವ ಹಾಗೂ ರಫ್ತು ಮಾಡುವ ಪ್ರದೇಶ ಎನಿಸಿಕೊಂಡಿದೆ. ಇದರಿಂದಾಗಿ ಕೊಲ್ಲಂನ್ನು ಗೋಡಂಬಿ ನಗರಿ ಅಂತಲೂ ಕರೆಯಲಾಗುತ್ತದೆ. ಇದಲ್ಲದೇ ತೆಂಗಿನ ನಾರು ಉತ್ಪಾದನಾ ಕೇಂದ್ರಗಳು ಈ ನಗರಿಯನ್ನು ಅತಿ ದೊಡ್ಡ ಕಾಟೇಜ್‌ ಕೈಗಾರಿಕಾ ವಲಯವನ್ನಾಗಿ ರೂಪಿಸಿವೆ.

ಸಂಸ್ಕೃತಿ

ತಲೆತಲಾಂತರಗಳಿಂದಲೂ ಈ ಪ್ರದೇಶ ಶ್ರೀಮಂತ ಸಂಸ್ಕೃತಿಯ ಹಿನ್ನೆಲೆ ಹೊಂದಿ ಬೆಳೆದು ಬಂದಿದೆ. ಕಲಿಕಾ ಕೇಂದ್ರಗಳು ಹಾಗೂ ಸಾಂಸ್ಕೃತಿಕ ಹಬ್‌ ಈ ಪ್ರದೇಶವನ್ನು ಸಾಂಸ್ಕೃತಿಕವಾಗಿ ಶ್ರೀಮಂತಗೊಳಿಸಿವೆ. ಈ ಪ್ರದೇಶಕ್ಕೆ ಭೇಟಿ ನೀಡಿ ಇಲ್ಲಿನ ಸಾಂಸ್ಕೃತಿಕ ವೈಭವ ಅರಿಯಲು ದಕ್ಷಿಣ ಭಾರತದಲ್ಲೆ ಉತ್ತಮ ತಾಣ ಎಂದು ನಂಬಲಾಗಿದೆ. ಅದರಲ್ಲೂ ಈ ಸ್ಥಳವು ಅತ್ಯುತ್ತಮ ಕಾಣಿಕೆ ನೀಡಿದೆ ಅನ್ನುವುದಕ್ಕೆ ಇಲ್ಲಿನ ಸಾಹಿತ್ಯವೆ ಸಾಕ್ಷಿಯಾಗಿದೆ. 14ನೇ ಶತಮಾನದಲ್ಲಿ ಮಲಯಾಳಂ ಸಾಹಿತ್ಯ ನೀಡಿದ  'ಲೇಲೇತಿಲಕಂ' ಹಾಗೂ 'ಉನ್ನೇಲಿ ಸಂದೇಶಂ' ಎಂಬ ಎರಡು ಮಹತ್ವಾಕಾಂಕ್ಷಿ ಬರವಣಿಗೆ ಕೆಲಸಗಳು ಈ ಸ್ಥಳದಲ್ಲೆ ಆಗಿದೆ. ಕತಕ್ಕಳಿ ನೃತ್ಯ ಕೇರಳದ ಅತ್ಯಂತ ವಿಶಿಷ್ಟ ನೃತ್ಯ ಪ್ರಕಾರ. ಕೊಟ್ಟಾರಕ್ಕರ ತಂಪೂರಂಗೆ ನೀಡಿದ ಹೊಸ ರೂಪದ ಪರಿಣಾಮ ಈ ಪ್ರಕಾರ ಜನ್ಮ ತಾಳಿದೆ. ಅತಿ ಶ್ರೇಷ್ಠ ಕಲಾವಿದರು, ಸಾಧಕರು ಹಾಗೂ ಬರಹಗಾರರನ್ನು ನೀಡಿದ ಕೀರ್ತಿ ಈ ಸ್ಥಳಕ್ಕೆ ಸಲ್ಲುತ್ತದೆ. ಬರಹಗಾರರಲ್ಲಿ ಪ್ರಮುಖರೆಂದರೆ ಕೆ.ಸಿ.ಕೇಶವ ಪಿಳ್ಳೈ, ಪರಾವೋರ್‌ ಕೇಶವನ್‌ ಅಸನ್‌, ಇ.ವಿ. ಕೃಷ್ಣ ಪಿಳ್ಳೈ ಮುಂತಾದವರು ಇಲ್ಲಿಯವರಾಗಿದ್ದು ಕೇರಳ ಹಾಗೂ ಇತರೆ ಭಾಗದ ಬಗ್ಗೆ ಬರೆದು ಜನಪ್ರಿಯರಾಗಿದ್ದಾರೆ.

ಎಲ್ಲೆಲ್ಲೂ ಹಬ್ಬಗಳು

ಹಬ್ಬಗಳನ್ನು ಆಚರಿಸುವ ತಾಣವಾಗಿ ಕೊಲ್ಲಂ ಜನಪ್ರಿಯ. ಸಾಕಷ್ಟು ಹಬ್ಬಗಳು ಇಲ್ಲಿ ನಡೆಯುತ್ತವೆ. ಇವುಗಳೇ ಲಕ್ಷಾಂತರ ಜನರನ್ನು ಇತ್ತ ಸೆಳೆಯುತ್ತವೆ. ಪ್ರತಿವರ್ಷ ಮಿಲಿಯನ್‌ಗಟ್ಟಲೆ ಜನ ಇತ್ತ ಬರುವುದು ಇಲ್ಲಿನ ಹಬ್ಬಗಳ ವೈಭವ ಸವಿಯಲು. ಕರಕುಶಲ ಉತ್ಸವ ಇಲ್ಲಿ ಪ್ರತಿ ವರ್ಷ ಡಿಸೆಂಬರ್‌- ಜನವರಿಯಲ್ಲಿ ನಡೆಯುತ್ತದೆ. ದೇಶದ ಎಲ್ಲೆಡೆಯಿಂದ ಸಾಕಷ್ಟು ಕರಕುಶಲಕರ್ಮಿಗಳು ಇತ್ತ ಬರುತ್ತಾರೆ. ಇದಲ್ಲದೇ ಈ ನಗರಿ ವಿಶೇಷವಾಗಿ ಗುರುತಿಸಿಕೊಂಡಿದ್ದು ಬೋಟಿಂಗ್‌ ಹಾಗೂ ಆನೆಗಳ ಉತ್ಸವಕ್ಕೆ. ನೋಡುಗರಿಗೆ ಇದು ಅಪಾರ ಮನರಂಜನೆ ಒದಗಿಸುತ್ತದೆ.

ಅಷ್ಟಮಿ ರೋಹಿಣಿ, ಓಣಂ ಹಾಗೂ ವಿಶು ಹಬ್ಬಗಳು ಕೊಲ್ಲಂನಲ್ಲಿ ಅತ್ಯಂತ ವಿಶೇಷವಾಗಿ  ಆಚರಿಸಲಾಗುವ ಉತ್ಸವಗಳು. ಒಶಿರಿಕಲಿ (ಫೆನ್ಸಂಗ್‌- ಫೈಟ್‌) ಪ್ರತಿ ವರ್ಷ ಜೂನ್‌ ತಿಂಗಳಲ್ಲಿ ಆಚರಿಸಲಾಗುತ್ತದೆ. ಇದರ ವಿಶೇಷತೆ ಕಾಣಲು ಪ್ರವಾಸಿಗರು ಬರುತ್ತಾರೆ. ಮರಮಾಡಿ ಮಲ್ಸರಮ್‌ (ಎತ್ತುಗಳ ಓಟ ಸ್ಪರ್ಧೆ), ಕೊಲ್ಲಂ ಪೂರಂ, ಪರಿಪ್ಪಲ್ಲಿ ಗಜಮೇಳ, ಅನ್ಯಾಡಿ ಎಲಿಫಂಟ್‌ ಪಗೆಂಟ್ರಿ ಹಾಗೂ ಪನ್ಮಾನಾ ಪೂರಂಗಳು ಇಲ್ಲಿ ಆಚರಣೆಯಾಗುವ  ಇತರೆ ಪ್ರಮುಖ ಉತ್ಸವಗಳು. ಪ್ರತಿಯೊಂದು ಉತ್ಸವದ ಆಚರಣೆ ಸಂದರ್ಭದಲ್ಲೂ ದೇಶದೆಲ್ಲೆಡೆಯಿಂದ ವೀಕ್ಷಿಸಲು ಭಕ್ತರು ಆಗಮಿಸುತ್ತಾರೆ.

ಕಣ್ಮನ ಸೆಳೆಯುವ ಅದ್ಭುತ ತಾಣಗಳು

ವರ್ಷದ ಎಲ್ಲಾ ದಿನಗಳಲ್ಲೂ ಪ್ರವಾಸಿಗರು ಇತ್ತ ಆಗಮಿಸುತ್ತಾರೆ. ಅಷ್ಟು ಆಕರ್ಷಣೆಗಳು, ತಾಣಗಳು, ಕಣ್ಮನ ಸೆಳೆಯುವ ಪ್ರದೇಶಗಳು ಇಲ್ಲಿವೆ. ವಿಶಾಲ ಹಾಗೂ ತರಹೇವಾರಿ ಆಕರ್ಷಣೆಗಳು ಇಲ್ಲಿರುವುದು ವಿಶೇಷ. ಕೊಲ್ಲಂ ಕಡಲ ತೀರ, ತಂಗೆಸ್ಸರಿ ಕಡಲ ತೀರ, ಅಡ್ವೆಂಚರ್‌ ಪಾರ್ಕ್ ಹಾಗೂ ತಿರುಮುಲ್ಲವರಂ ಕಡಲ ತೀರಗಳು ಇಲ್ಲಿ ಪ್ರಮುಖವಾಗಿವೆ. ಅತೀತವಾಗಿ ವೀಕ್ಷಕರು ಇಲ್ಲಿ ಬರುತ್ತಾರೆ. ಅಸ್ತಮುಡಿ ಹಿನ್ನೀರು, ಮುನ್ರೋಯಿ ಐಸ್‌ಲ್ಯಾಂಡ್‌, ನೀಂದಕರಾ ಕೋಟೆ, ಅಲುಮ್ಕದವು ಬೋಟ್‌ ಬಿಲ್ಡಿಂಗ್‌ ಯಾರ್ಡ್ ಹಾಗೂ ಸಸ್ತಮಕೋಟಾ ಕೆರೆಗಳು ನೀರನ್ನು ಇಷ್ಟಪಡುವವರನ್ನು ಬಹುವಾಗಿ ಮೆಚ್ಚಿಸುತ್ತವೆ. ಜನ ಸಂಪತ್ತಿನ ಅದ್ಭುತ ಜಗತ್ತನ್ನು ತೋರಿಸುತ್ತವೆ.

ರಾಮೇಶ್ವರ ದೇವಾಲಯ, ಅಚೇನ್ಕೊಯಿಲ್‌ ಹಾಗೂ ಮಯ್ಯಾಂಡ್‌ಗಳು ಇಲ್ಲಿನ ಇತರೆ ಪ್ರಮುಖ ಆಕರ್ಷಣೆಗಳು. ಅಲ್ಲದೇ ಇವಕ್ಕೆ ಐತಿಹಾಸಿಕ ಹಿನ್ನೆಲೆಯೂ ಇದೆ. ಅಮೃತಪುರಿ ಆಶ್ರಮವು ಜನಪ್ರಿಯ ಧಾರ್ಮಿಕ ಕೇಂದ್ರ. ಸಾವಿರಾರು ಭಕ್ತರು ಇಲ್ಲಿಗೆ ಆಗಮಿಸುತ್ತಾರೆ. ಮಾತಾ ಅಮೃತಾನಂದಮಯಿ ದೇವಿ ಅವರ ಆಶ್ರಮ ಇದಾಗಿದ್ದು, ಪ್ರತಿವರ್ಷ ಮಿಲಿಯನ್‌ಗಟ್ಟಲೆ ಭಕ್ತರು ಭೇಟಿ ನೀಡುತ್ತಾರೆ. ಆರ್ಯಾಂಕವು, ಚವರಾ, ಕೊಟ್ಟಾರಕರ, ಓಚಿರಾ ಹಾಗೂ ಕರಂಗಪಲ್ಲಿಗಳು ಪ್ರಮುಖ ಸಾಂಸ್ಕೃತಿಕ ಕೇಂದ್ರ ಹಾಗೂ ಧಾರ್ಮಿಕ ತಾಣಗಳಾಗಿ ಗುರುತಾಗಿವೆ.

ಅತ್ಯಾಕರ್ಷಕ ಪರಿಮಳ ಹಾಗೂ ಆಹ್ವಾನಿಸುವ ವಾತಾವರಣ

ಮಾಂಸಾಹಾರ ಅದರಲ್ಲೂ ಸಮುದ್ರದ ಆಹಾರಕ್ಕೆ  ಕೊಲ್ಲಂ ಅತ್ಯಂತ ಶ್ರೇಷ್ಟ ತಾಣ. ಇಲ್ಲಿ ಸಾಕಷ್ಟು ಮಾಂಸಾಹಾರಿ ಹೋಟೆಲ್‌, ರೆಸ್ಟೊರೆಂಟ್‌ಗಳಿವೆ. ಪ್ರವಾಸಿಗರು ಭೇಟಿ ನೀಡುವ ಎಲ್ಲಾ ತಾಣಗಳಲ್ಲಿಯೂ ಇವಿದ್ದು, ಕೇರಳದ ಸಾಂಪ್ರದಾಯಿಕ ಶೈಲಿಯ ಮೀನೂಟ ಹಾಗೂ ಇತರೆ ಸಮುದ್ರ ಜೀವಿಗಳ ಊಟ ಉಣಬಡಿಸುತ್ತವೆ. ಮೀನು, ಏಡಿಗಳು ಹಾಗೂ ಸೀಗಡಿ ಮೀನಿನ ಊಟವೂ ಇಲ್ಲಿ ಉತ್ಕೃಷ್ಟ ರೂಪದಲ್ಲಿ ಸಿಗುತ್ತದೆ.

ಕೊಲ್ಲಂ ನಗರವು ಉತ್ತಮ ರಸ್ತೆ, ರೈಲು ಸಂಪರ್ಕವನ್ನು ಹೊಂದಿದೆ. ಅಲ್ಲದೇ ಕೊಲ್ಲಂನ ಕೊನೆಯಲ್ಲಿ ಬರುವ ತಿರುವನಂತಪುರಂ, ಪಟ್ಟಣಂಥೀತಾ ಹಾಗೂ ಅಲಪ್ಪಿವುಜಾ ಜಿಲ್ಲೆಯಿಂದಲೂ ಉತ್ತಮ ಸಂಪರ್ಕ ಇದೆ. ವರ್ಷದ ಎಲ್ಲಾ ಕಾಲದಲ್ಲೂ ಇಲ್ಲಿಗೆ ಭೇಟಿ ನೀಡಬಹುದು. ಸರ್ವಕಾಲವೂ ಸಂದರ್ಶನಕ್ಕೆ ಸೂಕ್ತ ಎನಿಸುವ ವಾತಾವರಣ ಇದೆ. ಅಲ್ಲದೇ ಮಳೆಗಾಲವೂ ಉತ್ತಮವಾಗಿದ್ದು, ನೋಡುಗರ ಗಮನ ಸೆಳೆಯುತ್ತದೆ. ತನ್ನ ಸಹಜ ಸೌಂದರ್ಯದಿಂದ ಇದು ಗಮನ ಸೆಳೆಯುತ್ತದೆ. ಕೊಲ್ಲಂ ಬಿಟ್ಟು ವಾಪಸಾಗುವವರಿಗೆ ಇಲ್ಲಿಂದ ಏನನ್ನಾದರೂ ಕೊಂಡೊಯ್ಯಬೇಕೆಂದರೆ ಕೊಳ್ಳಲು ಸಾಕಷ್ಟು ವ್ಯಾಪಾರಿ ಮಾರುಕಟ್ಟೆಗಳು ಇವೆ. ತನ್ನ ವಿಶಿಷ್ಟ ಇತಿಹಾಸ, ಅತ್ಯಾಕರ್ಷಕ ವಾತಾವರಣ, ಎಲ್ಲಿ ಬೇಕಾದರೂ ನಿಂತು ನೋಡಲು ಅನುಕೂಲವಾಗುವ ವಿಶಾಲ ಕಡಲ ತೀರ, ಆಕರ್ಷಕ ಪರಿಮಳ ಸೂಸುವ ಹೂವುಗಳು ಇಲ್ಲಿ ಕಂಡುಬರುತ್ತವೆ. ಕನಸಿನ ರಜಾದಿನಗಳನ್ನು ಕಳೆಯಲು ಕೊಲ್ಲಂ ಹೇಳಿಮಾಡಿಸಿದ ತಾಣ. ವಿಭಿನ್ನ ಅನುಭವ ಹೊಂದಲು ಇದು ಹೇಳಿ ಮಾಡಿಸಿದ ತಾಣ.

ಕೊಲ್ಲಂ ಪ್ರಸಿದ್ಧವಾಗಿದೆ

ಕೊಲ್ಲಂ ಹವಾಮಾನ

ಉತ್ತಮ ಸಮಯ ಕೊಲ್ಲಂ

 • Jan
 • Feb
 • Mar
 • Apr
 • May
 • Jun
 • July
 • Aug
 • Sep
 • Oct
 • Nov
 • Dec

ತಲುಪುವ ಬಗೆ ಕೊಲ್ಲಂ

 • ರಸ್ತೆಯ ಮೂಲಕ
  ಕೊಲ್ಲಂಗೆ ರಸ್ತೆ ಸಂಪರ್ಕ ಅತ್ಯುತ್ತಮವಾಗಿದೆ. ರಸ್ತೆ ಮಾರ್ಗವಾಗಿ ಬರುವುದಾದರೆ 3 ಪ್ರಮುಖ ರಾಷ್ಟ್ರೀಯ ಹೆದ್ದಾರಿಗಳು ಈ ಜಿಲ್ಲೆಯನ್ನು ಸಂಪರ್ಕಿಸುತ್ತವೆ. ನಿರಂತರ ಬಸ್‌ ಸೌಲಭ್ಯ ಕೊಲ್ಲಂನಿಂದ ಸಮೀಪದ ಜಿಲ್ಲೆಗಳಾದ ತಿರುವನಂತಪುರಂ, ಪಟ್ನಾಂತೀತ, ಕೊಟ್ಟಾಯಂ ಹಾಗೂ ಎರ್ನಾಕುಲಂಗೆ ಇದೆ. ಖಾಸಗಿ ಲಗ್ಜುರಿ ಬಸ್‌ಗಳು ಕೊಲ್ಲಂಗೆ ದಕ್ಷಿಣ ಭಾರತದ ಪ್ರಮುಖ ಭಾಗಗಳಿಂದ ಸಂಪರ್ಕ ಕಲ್ಪಿಸುತ್ತವೆ. ಬೆಂಗಳೂರು, ಚೆನ್ನೈ, ಕೊಚ್ಚಿ, ಕೊಯಮತ್ತೂರು ಹಾಗೂ ಪಾಂಡಿಚೆರಿ ಇದರಲ್ಲಿ ಸೇರಿವೆ.
  ಮಾರ್ಗಗಳ ಹುಡುಕಾಟ
 • ರೈಲಿನ ಮೂಲಕ
  ಕೊಲ್ಲಂ ರೈಲು ನಿಲ್ದಾಣ ಕೇರಳದಲ್ಲೇ ಅತ್ಯುತ್ತಮ ರೈಲು ಸಂಪರ್ಕ ಹೊಂದಿರುವ ನಿಲ್ದಾಣ ಎನಿಸಿದೆ. ಉತ್ತಮ ಸಂಪರ್ಕ ಜಾಲವನ್ನೂ ಹೊಂದಿದೆ. ರಾಜ್ಯದ ಎಲ್ಲಾ ಪ್ರಮುಖ ನಗರದಿಂದ ಇಲ್ಲಿಗೆ ಸಂಪರ್ಕ ಇದೆ. ಇದಲ್ಲದೇ ದೇಶದ ಪ್ರಮುಖ ನಗರಗಳಾದ ಬೆಂಗಳೂರು, ಚೆನ್ನೈ, ಮುಂಬಯಿ, ದಿಲ್ಲಿ ಇತ್ಯಾದಿ ಭಾಗದಿಂದಲೂ ಸಂಪರ್ಕ ಚೆನ್ನಾಗಿದೆ. ಆಟೊ ರಿಕ್ಷಾ ಹಾಗೂ ಟ್ಯಾಕ್ಸಿ ಸೌಲಭ್ಯ ಈ ನಿಲ್ದಾಣದಿಂದ ಸದಾ ಲಭ್ಯವಿರುತ್ತದೆ.
  ಮಾರ್ಗಗಳ ಹುಡುಕಾಟ
 • ಆಕಾಶದ ಮೂಲಕ
  ಕೊಲ್ಲಂನಲ್ಲಿ ಯಾವುದೇ ವಿಮಾನ ನಿಲ್ದಾಣ ಇಲ್ಲ. ಇದಕ್ಕೆ ಸಮೀಪದ ನಿಲ್ದಾಣ ತಿರುವನಂತಪುರಂ. ಇಲ್ಲಿಂದ 70 ಕಿ.ಮೀ. ದೂರದಲ್ಲಿದೆ. ತಿರುವನಂತಪುರಂ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ದೇಶದ ಎಲ್ಲಾ ಭಾಗ ಹಾಗೂ ವಿಶ್ವದ ಕೆಲ ರಾಷ್ಟ್ರಗಳ ಉತ್ತಮ ಸಂಪರ್ಕ ಹೊಂದಿದೆ. ಏರ್‌ಪೋರ್ಟ್ ನಿಂದ ಕೊಲ್ಲಂ ತಲುಪಲು ಸಾಕಷ್ಟು ಬಸ್‌ ಹಾಗೂ ಟ್ಯಾಕ್ಸಿ ಸೌಲಭ್ಯ ಉತ್ತಮವಾಗಿದೆ.
  ಮಾರ್ಗಗಳ ಹುಡುಕಾಟ
One Way
Return
From (Departure City)
To (Destination City)
Depart On
16 May,Mon
Return On
17 May,Tue
Travellers
1 Traveller(s)

Add Passenger

 • Adults(12+ YEARS)
  1
 • Childrens(2-12 YEARS)
  0
 • Infants(0-2 YEARS)
  0
Cabin Class
Economy

Choose a class

 • Economy
 • Business Class
 • Premium Economy
Check In
16 May,Mon
Check Out
17 May,Tue
Guests and Rooms
1 Person, 1 Room
Room 1
 • Guests
  2
Pickup Location
Drop Location
Depart On
16 May,Mon
Return On
17 May,Tue