Search
  • Follow NativePlanet
Share
ಮುಖಪುಟ » ಸ್ಥಳಗಳು » ಕೊಲ್ಲಂ » ಆಕರ್ಷಣೆಗಳು » ಅಷ್ಟಮುಡಿ ಹಿನ್ನೀರು

ಅಷ್ಟಮುಡಿ ಹಿನ್ನೀರು, ಕೊಲ್ಲಂ

6

ಅಷ್ಟಮುಡಿ ಹಿನ್ನೀರು ವಲಯವು ಪ್ರವಾಸಿಗರನ್ನು ಕೈಬೀಸಿ ಕರೆಯುತ್ತದೆ. ಇಲ್ಲಿನ ನೈಸರ್ಗಿಕ ಪರಿಸರ, ಮರಗಿಡ, ಜಲ ಸಂಪತ್ತು ಎಲ್ಲವೂ ಒಟ್ಟೊಟ್ಟಿಗೆ ಇವೆ. ಅಷ್ಟಮುಡಿ ಕೆರೆಯ ಹಿನ್ನೀರು ಇದಾಗಿದ್ದು, ಅತಿ ದೀರ್ಘ ಹಾಗೂ ವಿಸ್ತಾರವಾದ ದಡವನ್ನು ಹೊಂದಿದೆ. ರಾಜ್ಯದ ಅತಿ ದೊಡ್ಡ ಹಾಗೂ ಶುದ್ಧ ನೀರಿನ ಕೆರೆ ಇದು ಎಂಬ ಹೆಗ್ಗಳಿಕೆ ಹೊಂದಿದೆ. ಈ ಕೆರೆಯ ಮಾರ್ಗವಾಗಿ ಪ್ರವಾಸ ಹೊರಟರೆ ಸುಂದರವಾದ ಪರಿಸರ, ಸಾಲಾಗಿ ಬೆಳೆದು ನಿಂತ ತೆಂಗಿನ ಮರ, ಪಾಮ್‌ ಮರಗಳು ಗಮನ ಸೆಳೆಯುತ್ತವೆ. ಆಕರ್ಷಣೀಯವಾಗಿ ಗೋಚರಿಸಿ ಪ್ರವಾಸದ ಕಳೆ ಹೆಚ್ಚಿಸುತ್ತವೆ.

ಹೌಸ್‌ಬೋಟ್‌ ಯಾನ ಅಷ್ಟಮುಡಿ ಕೆರೆಯ ಪ್ರಮುಖ ಹಾಗೂ ಮುಖ್ಯ ಆಕರ್ಷಣೆ. ಇದನ್ನು ಯಾವೊಬ್ಬ ಪ್ರವಾಸಿಗನೂ ತಪ್ಪಿಸಿಕೊಳ್ಳಲು ಇಷ್ಟಪಡುವುದಿಲ್ಲ. ಕೊಲ್ಲಂ ಜಿಲ್ಲಾ ಪ್ರವಾಸೋದ್ಯಮ ಉತ್ತೇಜನ ಸಮೀತಿ ಇಲ್ಲಿ ಸಾಕಷ್ಟು ವಿಧದ ಬೋಟಿಂಗ್‌ ಸೌಲಭ್ಯವನ್ನು ನೀಡುತ್ತಿದೆ. ಹಗಲು ಟ್ರಿಪ್‌, ರಾತ್ರಿ ಯಾನ ಸೇರಿದಂತೆ ಹಲವು ವಿಧದ ಅವಕಾಶ ಪ್ರವಾಸಿಗರಿಗೆ ಸಿಗುತ್ತದೆ. ಪ್ರತ್ಯೇಕ ಪ್ಯಾಕೇಜ್‌ಗಳನ್ನು ಆಯ್ಕೆ ಮಾಡಿಕೊಳ್ಳಬಹುದಾಗಿದೆ. ಪ್ರವಾಸಿಗರು ತಮಗೆ ಬೇಕಾದ ಪ್ಯಾಕೇಜ್‌ ಆರಿಸಿಕೊಂಡು ಬಳಸಬಹುದು. ಸಮಯ, ಆರ್ಥಿಕ ಸ್ಥಿತಿ ಹಾಗೂ ಇತರೆ ಆಯ್ಕೆಯನ್ನು ಪರಿಗಣಿಸಿ ತಮಗೆ ಬೇಕಾದ್ದನ್ನು ಪಡೆಯಬಹುದು.

ಇಲ್ಲಿರುವ ಹೌಸ್‌ಬೋಟ್‌ಗಳು ಅತ್ಯಂತ ಸುಸಜ್ಜಿತ, ಆಧುನಿಕ ಸೌಲಭ್ಯ ಹೊಂದಿವೆ. ವಿಶೇಷತೆಗಳೆಂದರೆ ಸರ್ವಸಿದ್ಧ ಬೆಡ್‌ ರೂಂಗಳು, ಕಿಚನ್‌, ಬಾಲ್ಕನಿ, ಇತರೆ ಮನರಂಜನಾ ಸಾಮಗ್ರಿಗಳನ್ನು ಹೊಂದಿವೆ. ಸಾಕಷ್ಟು ರೆಸಾರ್ಟ್ ಗಳು ಲಭ್ಯವಿದ್ದು, ತರಹೇವಾರಿ ಬಜೆಟ್‌ನಲ್ಲಿ ಸಿಗುತ್ತವೆ. ಆರ್ಥಿಕ ಸಾಮರ್ಥ್ಯ ಆಧರಿಸಿ ಆಯ್ಕೆ ಮಾಡಿಕೊಳ್ಳಬಹುದು. ಈ ರೆಸಾರ್ಟ್ ಗಳು ಕೆರೆಯ ಸುತ್ತಲೂ ಇದ್ದು ಪ್ರತಿ ರೆಸಾರ್ಟ್ ನಲ್ಲಿ ಅಗತ್ಯ ಸೌಲಭ್ಯಗಳಾದ ಸ್ಪಾ, ಆಯುರ್ವೇದ ಮಸಾಜ್‌, ಸಮುದ್ರ ಜೀವಿಗಳ ತರಹೇವಾರಿ ಊಟ ಸಿಗುತ್ತದೆ.

One Way
Return
From (Departure City)
To (Destination City)
Depart On
08 Jun,Mon
Return On
09 Jun,Tue
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
08 Jun,Mon
Check Out
09 Jun,Tue
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
08 Jun,Mon
Return On
09 Jun,Tue