Search
  • Follow NativePlanet
Share
ಮುಖಪುಟ » ಸ್ಥಳಗಳು » ಕೊಲ್ಲಂ » ಆಕರ್ಷಣೆಗಳು » ತಿರುಮಲ್ಲುವರಂ ಕಡಲತೀರ

ತಿರುಮಲ್ಲುವರಂ ಕಡಲತೀರ, ಕೊಲ್ಲಂ

1

ಕೋಲಂ ನಗರದಿಂದ 6 ಕಿ.ಮೀ. ದೂರದಲ್ಲಿ ತಿರುಮಲ್ಲುವರಂ ಕಡಲತೀರ ಇದೆ. ಮರಳ ಹಾಸುಗಳಿಂದ ಆವೃತ್ತವಾದ ವಿಶಾಲ ತೀರ ಇಲ್ಲಿನ ವಿಶೇಷ. ಸಂಪೂರ್ಣ ವಾಣಿಜ್ಯ ಬಳಕೆಗೆ ಇದು ಹೆಸರಾಗಿದೆ. ಸೌಮ್ಯವಾಗಿ ದಡಕ್ಕೆ ಮುತ್ತಿಕ್ಕುವ ಅಲೆಗಳು ಇಲ್ಲಿ ಪ್ರವಾಸಿಗರ ಈಜಾಟಕ್ಕೆ ಮುಕ್ತ ಅವಕಾಶ ಕಲ್ಪಿಸುತ್ತವೆ. ಇದರಿಂದ ಇಲ್ಲಿ ಈಜು, ಸಮುದ್ರ ಸ್ನಾನಕ್ಕೆ ಹೆಚ್ಚು ಪ್ರಾಧಾನ್ಯ. ಮಕ್ಕಳ ಪಾಲಿಗಂತೂ ಇದು ಸ್ವರ್ಗ. ಕೌಟುಂಬಿಕ ಪ್ರವಾಸಕ್ಕೆ ಇದು ಹೇಳಿ ಮಾಡಿಸಿದ ತಾಣ. ಸುತ್ತಲಿನ ಸೌಂದರ್ಯ ವೀಕ್ಷಿಸುತ್ತಾ, ಸಮುದ್ರದ ಅಲೆಯನ್ನು ವೀಕ್ಷಿಸುತ್ತಾ ಜನ ಇಲ್ಲಿ ಅತಿ ಆನಂದ ಅನುಭವಿಸುತ್ತಾರೆ.

ಈ ದ್ವೀಪ ಪ್ರದೇಶ ಹಾಗೂ ಕಡಲ ತೀರ ಪ್ರವಾಸಿಗರ ಮನತಣಿಸುವುದು ಮಾತ್ರವಲ್ಲ, ನಗರ ಜೀವನದಿಂದ, ಒತ್ತಡದಿಂದ, ಸಮಸ್ಯೆ, ಜಂಜಾಟದಿಂದ ದೂರ ಮಾಡಿ ಅತ್ಯಾನಂದ ನೀಡುತ್ತದೆ. ನಿತ್ಯ ಜೀವನಕ್ಕೆ ಒಂದು ಬದಲಾವಣೆ ನೀಡಿ ಆನಂದ ಉಂಟು ಮಾಡುತ್ತದೆ. ಇಲ್ಲಿಂದ ಕಟ್ಟಿಕೊಂಡ ಸಂತೋಷ ಬಹುಕಾಲ ನಮ್ಮೊಂದಿಗಿರುತ್ತದೆ.

ಈ ತೀರದ ಸಮೀಪದಲ್ಲಿಯೇ ವಿಷ್ಣುವಿನ ದೇವಾಲಯವನ್ನೂ ಹೊಂದಿದೆ. 'ನೈರಾಜಚಾ ಪರಾ' ಹೆಸರಿನ ಬೃಹತ್‌ ಬಂಡೆಯೂ ಈ ಭಾಗದಲ್ಲಿಯೇ ಬರುತ್ತದೆ. ಇದು ಕೂಡ ಆಕರ್ಷಕವಾಗಿದೆ. ಇದು ಕೂಡ ಈ ಕಡಲ ತೀರದ ಒಂದು ಆಕರ್ಷಣೆಯಾಗಿದೆ. ಸಮುದ್ರದಲ್ಲಿ ಈ ಬಂಡೆ ಇರುವುದು ಇನ್ನೊಂದು ವಿಶೇಷ. ದಡದಿದ ಅರ್ಧ ಕಿ.ಮೀ. ದೂರದಲ್ಲಿದೆ.

ಇಲ್ಲಿಗೆ ಭೇಟಿ ನೀಡುವುದಕ್ಕೆ ಸಂಜೆಯ ಸಮಯ ಪ್ರಶಸ್ತ. ಸಮುದ್ರದ ಸಹಜ ಸೌಂದರ್ಯವನ್ನು ಆಸ್ವಾದಿಸಬಹುದು. ಮಳೆಗಾಲವನ್ನು ಹೊರತುಪಡಿಸಿ ವರ್ಷದ ಯಾವುದೇ ಸಮಯದಲ್ಲಿ ಇಲ್ಲಿಗೆ ಭೇಟಿ ನೀಡಬಹುದು.

One Way
Return
From (Departure City)
To (Destination City)
Depart On
07 Sep,Mon
Return On
08 Sep,Tue
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
07 Sep,Mon
Check Out
08 Sep,Tue
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
07 Sep,Mon
Return On
08 Sep,Tue