Search
  • Follow NativePlanet
Share
ಮುಖಪುಟ » ಸ್ಥಳಗಳು» ಕಂಜಿರಪಳ್ಳಿ

ಕಂಜಿರಪಳ್ಳಿ - ಧಾರ್ಮಿಕ ಏಕತೆಯ ವಾಸಸ್ಥಾನ

8

ಕಂಜಿರಪಳ್ಳಿ ಕೇರಳ ರಾಜ್ಯದ ಕೊಟ್ಟಾಯಂ ಜಿಲ್ಲೆಯಲ್ಲಿರುವ ಪುಟ್ಟ ತಾಲೂಕು ಪಟ್ಟಣ. ಇಲ್ಲಿ ಸಿರಿಯಾನ್ ಕ್ರಿಶ್ಚಿಯನ್ ಸಮುದಾಯದ ಜನಸಂಖ್ಯೆ ಹೆಚ್ಚಾಗಿದೆ. ಮುಸ್ಲಿಂ ಮತ್ತು ಹಿಂದೂ ಸಮುದಾಯದ ಜನರೂ ಕೂಡ ಇಲ್ಲಿದ್ದಾರೆ. ಈ ರೀತಿಯ ಧಾರ್ಮಿಕ ವಸಾಹತು ಕಂಜಿರಪಳ್ಳಿಯ ಸಂಸ್ಕ್ರತಿಯ ಮೇಲೆ ಪರಿಣಾಮ ಬೀರಿದೆ.

ಒಂದು ಕಾಲದಲ್ಲಿ ಈ ಪ್ರದೇಶದಲ್ಲಿ ಕಂಜಿಮ್ ಮರಗಳು ಅತಿ ಹೆಚ್ಚು ಸಂಖ್ಯೆಯಲ್ಲಿ ಕಾಣಿಸಿದ ಪರಿಣಾಮ ಕಂಜಿರಪಳ್ಳಿ ಎಂಬ ಹೆಸರು ಬಂದಿದೆ. ಈ ಪ್ರದೇಶದಲ್ಲಿ ಕೊಯ್ಯನ್ ಬುಡಕಟ್ಟು ಜನರು ಮೂಲ ನಿವಾಸಿಗರು. ತಮಿಳರು ಒಳ ಬಂದ ನಂತರ ತಮಿಳರು ಇಲ್ಲಿಗೆ ವಲಸೆ ಬರುವ ಸಂಖ್ಯೆ ಹೆಚ್ಚಾಗಿ ತಮಿಳು ವಸಾಹತು ಹುಟ್ಟಿಕೊಂಡಿತು. ವಲಸೆ ಬಂದ ಪಾಂಡ್ಯನ್ ರಾಜ ಈ ಪ್ರದೇಶವನ್ನು ಪಡೆದುಕೊಂಡ. ಇಲ್ಲಿಗೆ ವಲಸೆ ಬಂದ ಬಹುಪಾಲು ತಮಿಳರು ವ್ಯಾಪಾರಿಗಳಾಗಿದ್ದು ಇಲ್ಲಿ ನೆಲೆ ನಿಂತ ನಂತರ ಕೃಷಿಯನ್ನು ಆರಂಭಿಸಿದರು. ಮೊದಲ ತಮಿಳು ವಸಾಹತುಗಾರರನ್ನು ಚೆಟ್ಟಿನಾಡ್ ಹಳ್ಳಿಗೆ ಸೇರಿದ ಕಣ್ಣೂರು ಚೆಟ್ಟಿಗಳೆಂದು ಕರೆಯಲಾಗುತ್ತಿತ್ತು.

ಧಾರ್ಮಿಕ ಐಕ್ಯತೆಯ ಪ್ರತಿರೂಪ

ಇಲ್ಲಿನ ಪ್ರಮುಖ ಆಕರ್ಷಣೆಗಳೆಂದರೆ ಗಣಪತಿ ಕೋವಿಲ್, ಸೇಂಟ್ ಮೇರಿಸ್ ಚರ್ಚ್, ಮಧುರೈ ಮೀನಾಕ್ಷಿ ದೇವಸ್ಥಾನ, ನೈನಾರು ಮಸೀದಿ, ಸೇಂಟ್ ಡೋಮ್ನಿಕ್ಸ್ ಸೈರೋ ಮಲಬಾರ್ ಕ್ಯಾಥೋಲಿಕ್ ಪ್ರಾರ್ಥನಾ ಮಂದಿರ ಮತ್ತು ಇನ್ನೂ ಹಲವು. ಗಣಪತಿಯಾರ್ ದೇವಸ್ಥಾನ ಅತ್ಯಂತ ಪುರಾತನವಾಗಿದ್ದು ಈ ಪ್ರದೇಶದಲ್ಲಿ ಪ್ರಭಾವವನ್ನು ಹೊಂದಿದೆ ಎಂಬುದಕ್ಕೆ ಹಲವಾರು ಸಾಕ್ಷ್ಯಗಳಿವೆ. ಇಲ್ಲಿನವರು ಪಾಲಿಸುವ ಸಂಸ್ಕೃತಿ ಮತ್ತು ಸಂಪ್ರದಾಯಕ್ಕೆ ಇದೊಂದು ಉದಾಹರಣೆ. ಒಂದು ಕಾಲದಲ್ಲಿ ಪ್ರಮುಖ ಮಾರಾಟ ಕೇಂದ್ರವಾಗಿದ್ದ ನಿಲಕ್ಕಲ್ ಎಂಬ ಈ ಪ್ರದೇಶದಲ್ಲಿ ಸಿರಿಯಾನ್ ಕ್ಯಾಥೋಲಿಕ್ ಸಮುದಾಯದ ಮಂದಿ ದೊಡ್ಡ ಸಂಖ್ಯೆಯಲ್ಲಿದ್ದಾರೆ.

ಇಲ್ಲಿನ ಹಳೆಯದಾದ ಪಝಾಯಾ ಪಳ್ಳಿ ಅಥವಾ ಸೇಂಟ್ ಮೇರಿಸ್ ಓಲ್ಡ್ ಚರ್ಚ್ ಅನ್ನು 1449 ಕ್ಕೂ ಮುಂಚೆಯೇ ಮೊದಲು ಪೋರ್ಚುಗೀಸರು ಭಾರತಕ್ಕೆ ಕಾಲಿಟ್ಟಾಗಲೇ ಕಟ್ಟಿಸಲಾಗಿದೆ. ಸಾವಿರಾರು ಮುಸ್ಲೀಮರು ಪ್ರತಿವರ್ಷ ಭೆಟಿ ನೀಡುವ ನೈನಾರು ಮಸೀದಿ ಇಲ್ಲಿನ ಮತ್ತೊಂದು ಪ್ರಮುಖ ಆಕರ್ಷಣೆ. ಈ ಮಸೀದಿಯನ್ನು ಹಿಂದೂ ದೇವತೆ ಅಯ್ಯಪ್ಪನ ಭಕ್ತನಾದ ಮುಸ್ಲಿಂ ಸಂತನೊಬ್ಬನ ನೆನಪಿನಲ್ಲಿ ಕಟ್ಟಿಸಲಾಗಿದೆ.

ಕಂಜಿರಪಳ್ಳಿ ಪ್ರಸಿದ್ಧವಾಗಿದೆ

ತಲುಪುವ ಬಗೆ ಕಂಜಿರಪಳ್ಳಿ

  • ರಸ್ತೆಯ ಮೂಲಕ
    ಕೊಚ್ಚಿಯಿಂದ ಕಂಜಿರಪಳ್ಳಿಗೆ ಒಂದೂವರೆ ತಾಸು ಸುಮಾರು 101 ಕಿಲೋಮೀಟರ್ ಪ್ರಯಾಣಿಸಿದರೆ ಸಾಕು. ಟ್ಯಾಕ್ಸಿ ಮತ್ತು ಕ್ಯಾಬ್ ಸೌಲಭ್ಯಗಳು ಇಲ್ಲಿ ಬೇಕಾದಷ್ಟಿವೆ. ನಗರದ ಬೇರೇ ಬೇರೇ ಭಾಗಗಳಿಗೆ ಕೆಎಸ್ಆರ್ ಟಿಸಿ ಮತ್ತು ಖಾಸಗಿ ಬಸ್ಸುಗಳ ಸೇವೆಯಿದೆ.
    ಮಾರ್ಗಗಳ ಹುಡುಕಾಟ
  • ರೈಲಿನ ಮೂಲಕ
    ಕೊಟ್ಟಾಯಂ ರೈಲ್ವೇ ನಿಲ್ದಾಣ ಕಂಜಿರಪಳ್ಳಿಗೆ ಹತ್ತಿರದಲ್ಲಿದೆ. ದಕ್ಷಿಣ ಮತ್ತು ಉತ್ತರಭಾರತದ ಪ್ರಮುಖ ನಗರಗಳಾದ ಚೆನ್ನೈ, ತ್ರಿವೇಂಡ್ರಮ್, ಬೆಂಗಳೂರು, ಮಂಗಳೂರು, ಕೊಚ್ಚಿನ್ ಮತ್ತು ದೆಹಲಿಯನ್ನು ಸಂಪರ್ಕಿಸುವ ರೈಲುಗಳು ಇಲ್ಲಿಂದ ಲಭ್ಯವಿವೆ.
    ಮಾರ್ಗಗಳ ಹುಡುಕಾಟ
  • ಆಕಾಶದ ಮೂಲಕ
    ಕಂಜಿರಪಳ್ಳಿಗೆ ಹತ್ತಿರವಾದ ವಿಮಾನ ನಿಲ್ದಾಣವೆಂದರೆ ಕೊಚ್ಚಿನ್ ಅಂತರಾಷ್ಟ್ರೀಯ ವಿಮಾನ ನಿಲ್ದಾಣ. ಈ ನಗರದಿಂದ ಸರಿಸುಮಾರು 72 ಕಿಲೋಮೀಟರ್ ದೂರದಲ್ಲಿದೆ. ವಿಮಾನನಿಲ್ದಾಣದಿಂದ ಕಂಜಿರಪಳ್ಳಿಗೆ ಟ್ಯಾಕ್ಸಿ ಬಾಡಿಗೆ ಪಡೆಯಬಹುದು ಅಥವಾ ಬಸ್ ಸೌಲಭ್ಯವೂ ಇದೆ.
    ಮಾರ್ಗಗಳ ಹುಡುಕಾಟ
One Way
Return
From (Departure City)
To (Destination City)
Depart On
19 Apr,Fri
Return On
20 Apr,Sat
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
19 Apr,Fri
Check Out
20 Apr,Sat
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
19 Apr,Fri
Return On
20 Apr,Sat