ಪೀರ್ಮೆಡೆ : ಪರ್ವತ ಪ್ರದೇಶ

ಕೊಟ್ಟಾಯಂ ನ ಪೂರ್ವಕ್ಕೆ 85 ಕಿ.ಮೀ ದೂರದಲ್ಲಿರುವ ಪೀರ್ಮೆಡೆಯು ಕೇರಳದ ಪರ್ವತ ಪ್ರದೇಶಗಳಲ್ಲೇ ಅತ್ಯಂತ ಆಕರ್ಷಕವಾದದ್ದು. ಈ ಪರ್ವತವು ಪ್ರವಾಸಿಗರಿಗೆ ಟ್ರೆಕ್ಕಿಂಗ್ನ ಖುಷಿ ಕೊಡುತ್ತದೆ ಹಾಗೂ ಪ್ರಶಾಂತ ವಾತಾವರಣದ ಮಧುರ ಅನುಭೂತಿಯನ್ನು ನೀಡುತ್ತದೆ. ಈ ಪರ್ವತಕ್ಕೆ ಹೆಸರು ಬಂದಿದ್ದು, ಟ್ರಾವಣ್ಕೋರ್ ರಾಜಕುಟುಂಬಕ್ಕೆ ನೇರ ಸಂಪರ್ಕವನ್ನು ಹೊಂದಿದ್ದ ಸೂಫಿ ಸಂತ ಪೀರ್ ಮೊಹಮ್ಮದ್ರಿಂದ.

ಪೀರ್ಮೆಡೆಯು 915 ಮೀ. ಅಕ್ಷಾಂಶದಲ್ಲಿದೆ ಮತ್ತು ಪಶ್ಚಿಮ ಘಟ್ಟಕ್ಕೆ ಸೇರಿದೆ. ಹಿಂದೊಮ್ಮೆ ಈ ಪರ್ವತವು ರಾಜ ಕುಟುಂಬದ ಪ್ರವಾಸಿ ತಾಣವಾಗಿತ್ತು. ಇಂದಿಗೂ ಈ ಹೆಗ್ಗಳಿಕೆಯನ್ನು ಇದು ಕಾಪಾಡಿಕೊಂಡಿದೆ. ರಾಜ ಕುಟುಂಬದ ಬೇಸಿಗೆಕಾಲದ ಅರಮನೆಯನ್ನು ಈಗ ಸರ್ಕಾರಿ ಅತಿಥಿಗೃಹವನ್ನಾಗಿಸಲಾಗಿದೆ. ಚಹಾ, ಏಲಕ್ಕಿ, ರಬ್ಬರ್ ಮತ್ತು ಕಾಫಿ ತೋಟವು ಈ ಗುಡ್ಡದ ಸುತ್ತಲೂ ಬೆಳೆದಿರುತ್ತದೆ. ಈ ಪರ್ವತಕ್ಕೆ ದೇವರೇ ಬಂದು ಹಸಿರಿನ ಶಾಲನ್ನು ಹೊದಿಸಿದಂತೆ ನಿಮಗೆ ಭಾಸವಾದರೆ ಅಚ್ಚರಿಯಿಲ್ಲ. ಇಲ್ಲಿನ ಇನ್ನಿತರ ಆಕರ್ಷಣೆಗಳೆಂದರೆ ಪೆರಿಯಾರ್ ಟೈಗರ್ ರಿಸರ್ವ್ ಮತ್ತು ಜಲಪಾತಗಳು.

ಪ್ರಶಾಂತ ವಾತಾವರಣ ಮತ್ತು ರುಚಿಕರ ತಿನಿಸಿನ ಊರು

ಪೀರ್ಮೆಡೆಯಲ್ಲಿ ವರ್ಷಂಪ್ರತಿ ತಂಪಾದ ವಾತಾವರಣ ಇರುತ್ತದೆ. ಅಕ್ಷಾಂಶ ಏರಿದ ಹಾಗೆ ತಾಪಮಾನವು ನಿಧಾನವಾಗಿ ಏರುತ್ತಲೇ ಹೋಗುತ್ತದೆ. ದಟ್ಟವಾದ ಕಾಡು, ವಿಶಾಲವಾದ ಹುಲ್ಲುಗಾವಲು, ಸುಂದರವಾದ ಜಲಪಾತಗಳು ಮತ್ತು ವೈವಿಧ್ಯಮಯ ಪ್ರಾಣಿಸಂಕುಲ... ಇವೆಲ್ಲವೂ ನಿಸರ್ಗಪ್ರಿಯರಿಗೆ ಅತ್ಯಂತ ಆಹ್ಲಾದಕರ ವಾತಾವರಣವನ್ನು ಒದಗಿಸುತ್ತದೆ. ಪರ್ವತದಲ್ಲಿ ಮಳೆಗಾಲವು ಭೀಕರವಾಗಿರುತ್ತದೆ. ಆಯುರ್ವೇದಿಕ್ ಮಸಾಜ್ ಮಾಡಿಸಿಕೊಳ್ಳುವುದಕ್ಕೆ ಪೀರ್ಮೆಡೆಗೆ ಭೇಟಿ ನೀಡಬಹುದು. ಇಲ್ಲಿ ಈ ಮಸಾಜ್ ತುಂಬಾ ಪ್ರಸಿದ್ಧವಾಗಿದೆ. ಚಹಾ, ಏಲಕ್ಕಿ ಮತ್ತು ಇತರ ಸಾಂಬಾರು ಸಾಮಗ್ರಿಗಳನ್ನು ಈ ಪ್ರದೇಶದಲ್ಲಿ ಖರೀದಿಸಬಹುದು.

Please Wait while comments are loading...