Search
 • Follow NativePlanet
Share
ಮುಖಪುಟ » ಸ್ಥಳಗಳು» ಪಥನಂತಿಟ್ಟ

ಪಥನಂತಿಟ್ಟ : ಕಲೆ ಸಂಸ್ಕೃತಿ ಹಾಗೂ ಧರ್ಮಗಳ ಸಮ್ಮಿಶ್ರ ನೋಟ

22

ಕಲೆ, ಸಂಸ್ಕೃತಿಗಳು, ಹಾಗೂ ಸಾಂಪ್ರದಾಯಿಕ ನೃತ್ಯಗಳು ಕೇರಳದಲ್ಲಿ ಸಾಕಷ್ಟು ಪ್ರಸಿದ್ಧವಾಗಿದೆ. ದೇಶ ವಿದೇಶಗಳ ಮೂಲೆ ಮೂಲೆಗಳಿಂದ ಪ್ರವಾಸಿಗರು ಇಲ್ಲಿನ ಸಮೃದ್ಧಿಯನ್ನು ನೋಡಲು ಇಲ್ಲಿಗೆ ಬರುತ್ತಾರೆ. ಕೇರಳದ ಪ್ರತಿಯೊಂದು ಜಿಲ್ಲೆಯೂ ತನ್ನದೇ ಆದ ವೈಶಿಷ್ಟ್ಯತೆಗಳನ್ನು ಹೊಂದಿದೆ. ಅಂತಹ ವಿಶಿಷ್ಟ ಧಾರ್ಮಿಕ ರಾಜಧಾನಿ ಅದುವೇ ಪಥನಂತಿಟ್ಟ ಪಟ್ಟಣ.

ಕೇರಳದ ದಕ್ಷಿಣ ಭಾಗದಲ್ಲಿ ಪಥನಂತಿಟ್ಟ ಜಿಲ್ಲೆಯನ್ನು ಕಾಣಬಹುದು. ದೇವತೆಗಳ ಸ್ವಂತ ನಾಡು ಎಂದು ಕರೆಯಲ್ಪಡುವ ಕೇರಳ ರಾಜ್ಯದಲ್ಲಿರುವ ಪುಟ್ಟ ಜಿಲ್ಲೆ ಪಥನಂತಿಟ್ಟ. ನವೆಂಬರ್ 1, 1982 ರಿಂದ ಈ ಜಿಲ್ಲೆಯ ಅಭಿವೃದ್ಧಿ ಪ್ರಕ್ರಿಯೆಯ ವೇಗ ವರ್ಧನೆಗಾಗಿ ಸೂತ್ರಗಳನ್ನು ರಚಿಸಲಾಯಿತು. ಈ ಪ್ರಯತ್ನದ ನಂತರ ಇಂದು ಈ ಪಥನಂತಿಟ್ಟ ಜಿಲ್ಲೆಯು ವೇಗವಾಗಿ ಬೆಳೆಯುತ್ತಿರುವ ನಗರ ಹಾಗೂ ವ್ಯಾಪಾರಿ ಕೇಂದ್ರವೆನಿಸಿದೆ. ಪಥನಂತಿಟ್ಟ ಎಂಬ ಹೆಸರು ’ಪಥನಂ’ ಹಾಗೂ ’ತಿಟ್ಟ’ ಎಂಬ ಎರಡು ಶಬ್ದಗಳಿಂದ ಉತ್ಪತ್ತಿಯಾಗಿದೆ. (ಈ ಎರಡೂ ಪದಗಳಿಂದಾದ  ಸಂಯುಕ್ತ ಶಬ್ದದ ಅರ್ಥವೇನೆಂದರೆ ’ ನದಿಗಳ ಸಮೀಪವಿರುವ ಹತ್ತು ಮನೆಗಳ ಸಮೂಹ’) ಪಥನಂತಿಟ್ಟ ಸ್ಥಳವು ಪ್ರಪಾಸಕ್ಕೆ ಸೂಕ್ತ ಸ್ಥಳವಾಗಿದ್ದು, ಇಲ್ಲಿ ದೋಣಿ ಸ್ಪರ್ಧೆ, ಧಾರ್ಮಿಕ ಪುಣ್ಯಕ್ಷೇತ್ರಗಳು, ಹಾಗೂ ಸಾಂಸ್ಕೃತಿಕ ತರಬೇತಿ ಕೇಂದ್ರಗಳು ಇನ್ನೂ ಮುಂತಾದ ವೈಶಿಷ್ಟ್ಯಗಳನ್ನು ಹೊಂದಿದೆ. ಈ ಸ್ಥಳವನ್ನು ಕೆಲವೊಮ್ಮೆ ’ಕೇರಳದ ಯಾತ್ರಾರ್ಥಿಗಳ ರಾಜಧಾನಿ ಎಂದೂ ಕರೆಯಲಾಗುತ್ತದೆ’. ಪಥನಂತಿಟ್ಟ ’ಸಬರಿಮಾಲಾ’ದ ನೆಲೆಯಾಗಿದೆ. ಅಲ್ಲದೇ ಪ್ರತಿ ವರ್ಷ ಲಕ್ಷಾತರ ಭಕ್ತಾದಿಗಳು ಬರುವ ಸ್ವಾಮಿ ಅಯ್ಯಪ್ಪ ಸನ್ನಿಧಾನವೂ ಇಲ್ಲೆ ಇದೆ. ಮೇಲಾಗಿ ಸಾಂಪ್ರದಾಯ ಕಲೆ ಹಾಗೂ ಸಂಸ್ಕೃತಿಗಳ ನೆಲೆವೀಡಾಗಿದೆ ಪಥನಂತಿಟ್ಟ ಜಿಲ್ಲೆ.

ಹತ್ತು ದಿನಗಳ ಕಾಲ  ನಡೆಯುವ ಇಲ್ಲಿನ ಶ್ರೀಮಂತ ಕಲೆ ಎನಿಸಿದ  ’ಪದ್ಯಾಣಿ’ ಎಂಬ ಪ್ರಸಿದ್ಧ ಶಾಸ್ತ್ರೀಯ ನೃತ್ಯ ನೋಡುಗನ ಮನ ತಣಿಸುತ್ತದೆ. ಕದಮನಿಟ್ಟ ದೇವಿ ದೇವಾಲಯದಲ್ಲಿ ಈ ಪ್ರದರ್ಶನವನ್ನು ನಡೆಸಲಾಗಿತ್ತದೆ. ಪಥನಂತಿಟ್ಟ ನಗರವು ’ವಾಸ್ತುವಿದ್ಯಾ ಗರುಕುಲಂ’ ಗೆ ಹೆಸರುವಾಸಿ. ಈ ಗುರುಕುಲದ ಉದ್ಧೇಶವೆಂದರೆ, ವಾಸ್ತುವಿದ್ಯಾ ಮತ್ತು ಗೋಡೆ ವರ್ಣ ಚಿತ್ರಗಳ ಸಂರಕ್ಷಣೆ ಹಾಗೂ ಪ್ರಚಾರ. ಇಲ್ಲಿನ ಮತ್ತೊಂದು ಗಮನಾರ್ಹ ಸ್ಥಳೀಯ ಪ್ರಸಿದ್ಧ ಕಲೆಯೆಂದರೆ ’ ಅರನ್ಮುಲ ಕನ್ನಡಿ’. ಇದು ಕೈಯಲ್ಲಿ ಕನ್ನಡಿಯನ್ನು ಲೋಹ – ಮಿಶ್ರ ಲೋಹದಿಂದ ಕನ್ನಡಿ ಮಾಡುವ ವಿದ್ಯೆ. ಕುತೂಹಲವೆಂದರೆ ಈ ಕನ್ನಡಿ ತಯಾರು ಮಾಡುವ ವಿದ್ಯೆಯನ್ನು ಕುಂಟುಂಬ ರಹಸ್ಯ ಎಂಬಂತೆ ಕುಶಲಕರ್ಮಿಗಳು ಕಾಪಾಡಿಕೊಂಡು ಬಂದಿದ್ದು ಪೀಳಿಗೆಯಿಂದ ಪೀಳಿಗೆಗೆ ಹಸ್ತಾಂತರಿಸಿಕೊಂಡು ಬಂದಿದ್ದಾರೆ. ಸಬರಿಮಾಲಾ ದೇವಾಲಯವನ್ನು ಹೊರತುಪಡಿಸಿ, ಪರುಮಲಾದಲ್ಲಿನ ಮಾಲಂಕಾರಾ ಸಾಂಪ್ರದಾಯಿಕ / ಆರ್ಥೋಡಾಕ್ಸ್ ಚರ್ಚ್, ಕಡುಮೂನ್ ಚೈಲಂತಿಯಂಬಮಂ, ಪಲೈಕರಾ ಚರ್ಚ್, ಕವಿಯೂರು ಮಹಾದೇವ ದೇವಾಲಯ ಹಾಗೂ ಪ್ರಶಿದ್ಧ ಸ್ವಾತಂತ್ರ್ಯ ಹೋರಾಟಗಾರ ಆಡೂರ್ ವೇಲು ಥಂಪಿ ವೇಲು ರ ಪ್ರತಿಮೆ ಇವೆಲ್ಲವೂ  ಪಥನಂತಿಟ್ಟ ಪಟ್ಟಣಕ್ಕೆ ಬಂದವರ ಕಣ್ಣಿಗೆ ರಸದೌತಣವನ್ನು ನೀಡುತ್ತವೆ. ಉಷ್ಣವಲಯದ ವಾಯುಗುಣವನ್ನು ಹೊಂದಿರುವ ಪಥನಂತಿಟ್ಟ ಪಟ್ಟಣದಲ್ಲಿ ಚಳಿಗಾಲವು ಪ್ರವಾಸಿಗರ ಭೇಟಿಗೆ ಉತ್ತಮವಾದ ಸಮಯ. ಈ ಸ್ಥಳಕ್ಕೆ ನೀವು ವಿಮಾನದ ಮೂಲಕ, ರೈಲು ಅಥವಾ ರಸ್ತೆ ಮಾರ್ಗವಾಗಿಯೂ ಸುಲಭವಾಗಿ ತಲುಪಬಹುದು.  ಬನ್ನಿ, ಪಥನಂತಿಟ್ಟಕ್ಕೆ ಬಂದು ಇಲ್ಲಿನ ಪ್ರಶಾಂತ ಮಡಿಲಲ್ಲಿ ವಿರಮಿಸಿ, ಹಾಗೂ ಇಲ್ಲಿನ ದೇವಾಲಯಗಳಲ್ಲಿ ನಿಮ್ಮ ಮನಸ್ಸಿನಿಂದ ಶರಣಾಗತರಾಗಿ.

ಪಥನಂತಿಟ್ಟ ಪ್ರಸಿದ್ಧವಾಗಿದೆ

ಪಥನಂತಿಟ್ಟ ಹವಾಮಾನ

ಪಥನಂತಿಟ್ಟ
32oC / 90oF
 • Haze
 • Wind: N 15 km/h

ಉತ್ತಮ ಸಮಯ ಪಥನಂತಿಟ್ಟ

 • Jan
 • Feb
 • Mar
 • Apr
 • May
 • Jun
 • July
 • Aug
 • Sep
 • Oct
 • Nov
 • Dec

ತಲುಪುವ ಬಗೆ ಪಥನಂತಿಟ್ಟ

 • ರಸ್ತೆಯ ಮೂಲಕ
  ಪುನಲೂರ್-ಮುವತ್ತುಪುಳಾ ರಸ್ತೆ ಹಾಗೂ ಟಿ.ಕೆ ಮುಖ್ಯ ರಸ್ತೆಗಳು ಪಥನಂತಿಟ್ಟ ನಗರದ ಹತ್ತಿರದಿಂದಲೇ ಹಾಯ್ದು ಹೋಗುತ್ತಿದ್ದು ಪ್ರವಾಸಿಗರ ಪ್ರಯಾಣಕ್ಕೆ ಉತ್ತಮ ವಾತಾವರಣ ಕಲ್ಪಿಸಿವೆ. ಪಥನಂತಿಟ್ಟ ನಗರದಿಂದ ಹತ್ತಿರದ ಎಲ್ಲಾ ಪ್ರದೇಶಗಳಿಗೆ ನಿರಂತರವಾಗಿ ಬಸ್ ಸೌಕರ್ಯವಿದೆ. ಈ ನಗರದಲ್ಲಿ ಖಾಸಗೀ ಹಾಗೂ ಸರ್ಕಾರಿ ಜೊತೆಗೆ ಐಷಾರಾಮಿ / ಲಕ್ಸುರಿ ಬಸ್ ಸೇವೆ ಪ್ರಯಾಣಿಕರಿಗಾಗಿ ಸದಾ ಲಭ್ಯ.
  ಮಾರ್ಗಗಳ ಹುಡುಕಾಟ
 • ರೈಲಿನ ಮೂಲಕ
  ತಿರುವಲ್ಲಾ ಹಾಗೂ ಚೆಂಗನ್ನೂರ್ ನಗರಗಳು ಪಥನಂತಿಟ್ಟ ನಗರಕ್ಕೆ ಅತ್ಯಂತ ಹತ್ತಿರದಲ್ಲಿದ್ದು ಇಲ್ಲಿಂದ ರೈಲ್ವೆ ಸೌಲಭ್ಯವಿದೆ. ಚೆಂಗನ್ನೂರ್ ರೈಲ್ವೆ ನಿಲ್ದಾಣವು ಪಥನಂತಿಟ್ಟ ದಿಂದ ಕೇವಲ 26 ಕೀ.ಮಿ ಅಂತರದಲ್ಲಿ ಹಾಗೂ ತಿರುವಲ್ಲಾ ರೈಲ್ವೆ ನಿಲ್ದಾಣವು 30 ಕೀ.ಮಿ ದೂರದಲ್ಲಿದೆ. ಈ ರೈಲ್ವೆ ನಿಲ್ದಾಣಗಳಿಂದ ಭಾರತದ ಎಲ್ಲಾ ಪ್ರಮುಖ ನಗರಗಳಿಗೆ ರೈಲ್ವೆ ಸಂಪರ್ಕ ಕಲ್ಪಿಸಲಾಗಿದೆ. ಆದ್ದರಿಂದ ರೈಲಿನ ಮೂಲಕ ಭಾರತದ ಯಾವುದೇ ಭಾಗದಿಂದ ಪಥನಂತಿಟ್ಟ ನಗರಕ್ಕೆ ಪ್ರವಾಸಕ್ಕಾಗಿ ಬರಬಹುದು.
  ಮಾರ್ಗಗಳ ಹುಡುಕಾಟ
 • ಆಕಾಶದ ಮೂಲಕ
  ಪಥನಂತಿಟ್ಟಕ್ಕೆ ಅತ್ಯಂತ ಹತ್ತಿರದಲ್ಲಿರುವ ವಿಮಾನ ನಿಲ್ದಾಣವೆಂದರೆ ತಿರುವನಂತಪುರಂ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ. ಇಲ್ಲಿ ಅಂತಾರಾಷ್ಟ್ರೀಯ ಹಾಗೂ ರಾಷ್ಟ್ರೀಯ ಎರಡೂ ಕಡೆಯಿಂದ ವಿಮಾನಗಳ ಹಾರಾಟವಿದೆ. ಈ ವಿಮಾನ ನಿಲ್ದಾಣದಿಂದ 113 ಕೀ.ಮಿ ಅಂತರದಲ್ಲಿ ಪಥನಂತಿಟ್ಟ ನಗರವಿದೆ. ಪ್ರವಾಸಿಗರು ವಿಮಾನ ನಿಲ್ದಾಣದಿಂದ ಟ್ಯಾಕ್ಸಿ ಅಥವಾ ಬಸ್ ಮೂಲಕ ಪಥನಂತಿಟ್ಟವನ್ನು ತಲುಪಬಹುದು. ಅಲ್ಲದೇ ಕೊಚ್ಚಿನ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವು ಪಥನಂತಿಟ್ಟ ನಗರದಿಂದ 142 ಕೀ.ಮಿ ದೂರದಲ್ಲಿದೆ. ಇಲ್ಲಿಂದಲೂ ಕೂಡಾ ಟ್ಯಾಕ್ಸಿ ಮೊದಲಾದ ವಾಹನಗಳ ಮೂಲಕ ಪಥನಂತಿಟ್ಟಕ್ಕೆ ಪ್ರವಾಸಕ್ಕಾಗಿ ಬರಬಹುದಾಗಿದೆ.
  ಮಾರ್ಗಗಳ ಹುಡುಕಾಟ
One Way
Return
From (Departure City)
To (Destination City)
Depart On
18 Jul,Thu
Return On
19 Jul,Fri
Travellers
1 Traveller(s)

Add Passenger

 • Adults(12+ YEARS)
  1
 • Childrens(2-12 YEARS)
  0
 • Infants(0-2 YEARS)
  0
Cabin Class
Economy

Choose a class

 • Economy
 • Business Class
 • Premium Economy
Check In
18 Jul,Thu
Check Out
19 Jul,Fri
Guests and Rooms
1 Person, 1 Room
Room 1
 • Guests
  2
Pickup Location
Drop Location
Depart On
18 Jul,Thu
Return On
19 Jul,Fri
 • Today
  Pathanamthitta
  32 OC
  90 OF
  UV Index: 6
  Haze
 • Tomorrow
  Pathanamthitta
  26 OC
  79 OF
  UV Index: 6
  Light rain shower
 • Day After
  Pathanamthitta
  25 OC
  77 OF
  UV Index: 6
  Light rain shower