India
Search
  • Follow NativePlanet
Share
ಮುಖಪುಟ » ಸ್ಥಳಗಳು » ಪಥನಂತಿಟ್ಟ » ಹವಾಮಾನ

ಪಥನಂತಿಟ್ಟ ಹವಾಮಾನ

ಚಳಿಗಾಲವು, ಪಥನಂತಿಟ್ಟ ನಗರಕ್ಕೆ ಹೋಗಲು ಪ್ರಶಸ್ತವಾದ ಸಮಯ. ಈ ಸಮಯದಲ್ಲಿ ಹವಾಮಾನವು ಸೌಮ್ಯ ಹಾಗೂ ಹೆಚ್ಚು ತಂಪಾಗಿರುತ್ತದೆ. ಅಕ್ಟೋಬರ್ ಹಾಗೂ ಫೆಬ್ರವರಿ ಯಲ್ಲಿ ಉತ್ತಮವಾದ ವಾತಾವರಣ ನಿಮ್ಮನ್ನು ಸೆಳೆಯುತ್ತದೆ. ಚಳಿಗಾಲದಲ್ಲಿ ಪಥನಂತಿಟ್ಟ ನಗರಕ್ಕೆ  ಬರುವಾಗ ಉಣ್ಣೆ ಬಟ್ಟೆಗಳನ್ನು ತರುವುದು ಸೂಕ್ತ.ಧಾರ್ಮಿಕ ನೆಲೆವೀಡಾದ ಪಥನಂತಿಟ್ಟ ಪ್ರವಾಸಿಗರ ಆಕರ್ಷಣೀಯ ಸ್ಥಳವೆನಿಸಿದೆ. ಆದ್ದರಿಂದ ನಿಮ್ಮ ರಜಾ ದಿನಗಳನ್ನು ಕಳೆಯಲು ಕೇರಳ ರಾಜ್ಯದ ಪಥನಂತಿಟ್ಟ ಎಂಬ ಪುಟ್ಟ ಪಟ್ಟಣಕ್ಕೆ ಬನ್ನಿ. ನಿಮ್ಮ ಮನಸ್ಸಿಗೆ ನೆಮ್ಮದಿ ನೀಡುವಂತಹ ಏಕೈಕ ಸ್ಥಳ ಪಥನಂತಿಟ್ಟ ಪಟ್ಟಣ !

ಬೇಸಿಗೆಗಾಲ

ಪಥನಂತಿಟ್ಟ ನಗರದಲ್ಲಿ ಸಾಮಾನ್ಯವಾಗಿ ಮಾರ್ಚ್ ನಿಂದ ಪ್ರಾರಂಭವಾಗಿ ಮೇ ತಿಂಗಳಿನ ವರೆಗೆ ಬೇಸಿಗೆ ಕಾಲವನ್ನು ಕಾಣಬಹುದು. ಪಥನಂತಿಟ್ಟದಲ್ಲಿ ಬೇಸಿಗೆಯು ಕಡಿಮೆ ಅವಧಿಯದಾಗಿದ್ದರೂ ಈ ಸಮಯದಲ್ಲಿ ಶಾಖ ಅಧಿಕವಾಗಿರುತ್ತದೆ.  ಆದ್ದರಿಂದ ಈ ಸಮಯದಲ್ಲಿ ಪಥನಂತಿಟ್ಟಕ್ಕೆ ಪ್ರಯಾಣ ಬೆಳೆಸುವುದು ಸೂಕ್ತವಲ್ಲ. ಬೇಸಿಗೆಯಲ್ಲಿ ಇಲ್ಲಿನ ತಾಪಮಾನ ತುಸು ಹೆಚ್ಚಾಗಿಯೇ ಇದ್ದು ಗರಿಷ್ಠ 34 ಡಿ.ಸೆ  ದಾಖಲಾಗುತ್ತಿದ್ದು, ಕನಿಷ್ಠ  28 ಡಿ.ಸೆ. ದಾಖಲಾಗುತ್ತದೆ.

ಮಳೆಗಾಲ

ಪಥನಂತಿಟ್ಟ ನಗರದಲ್ಲಿ ಮಖೆಗಾಲವು ದೀರ್ಘವಾಗಿದ್ದು, ಜೂನ್ ನಿಂದ ಸೆಪ್ಟಂಬರ್ ವರೆಗೆ ಹೆಚ್ಚಾಗಿ ಮಳೆ ಸುರಿಯುತ್ತದೆ. ಸೆಪ್ಟಂಬರ್ ನಲ್ಲಿ ಕಡಿಮೆ ಮಳೆಯಿದ್ದು ಮಳೆಗಾಲ  ಮುಗಿಯುವ ಮುನ್ಸೂಚನೆಯನ್ನು ಹೇಳುತ್ತದೆ.

ಚಳಿಗಾಲ

ಪಥನಂತಿಟ್ಟ ನಗರದಲ್ಲಿ  ಅಕ್ಟೋಬರ್, ನವೆಂಬರ್, ಡಿಸೆಂಬರ್, ಜನೆವರಿ ಮತ್ತು ಫೆಬ್ರವರಿ ಈ ತಿಂಗಳುಗಳಲ್ಲಿ  ಚಳಿಗಾಲದ ಅನುಭವ ನೀಡುತ್ತದೆ. ಈ ಸಮಯದಲ್ಲಿ ವಾತಾವರಣವು ಶಾಂತವಾಗಿದ್ದು, ಬೆಚ್ಚಗಿರುತ್ತದೆ. ಚಳಿಗಾಲದಲ್ಲಿ ಇಲ್ಲಿನ ತಾಪಮಾನ  ಗರಿಷ್ಠ 25 ಡಿ.ಸೆ  ದಾಖಲಾಗುತ್ತಿದ್ದು, ಕನಿಷ್ಠ  17 ಡಿ.ಸೆ. ದಾಖಲಾಗುತ್ತದೆ.