Search
 • Follow NativePlanet
Share
ಮುಖಪುಟ » ಸ್ಥಳಗಳು» ಚೊಟ್ಟನಿಕ್ಕಾರಾ

ಚೊಟ್ಟನಿಕ್ಕಾರಾ - ದೇವರ ಆಶೀರ್ವಾದ, ದೇವಸ್ಥಾನಗಳ ತವರು

14

ಚೊಟ್ಟನಿಕ್ಕಾರಾವು ಕೇರಳದ ಮಧ್ಯಭಾಗದಲ್ಲಿರುವ ನಿಸರ್ಗ ಸುಂದರ ತಾಣ. ಎರ್ನಾಕುಲಂ ಜಿಲ್ಲೆಯ ಕೊಚ್ಚಿಯ ಪ್ರಾಂತ್ಯದಲ್ಲಿರುವ ಈ ಪ್ರದೇಶವು ಮಿಲಿಯನ್‌ಗಳಷ್ಟು ಜನರ ಧಾರ್ಮಿಕ ಭಾವನೆಗಳನ್ನು ಹೊಂದಿದೆ. ಕೇರಳದಲ್ಲೇ ಪ್ರಮುಖ ಧಾರ್ಮಿಕ ತಾಣವಾಗಿರುವ ಈ ಪ್ರದೇಶಕ್ಕೆ ವರ್ಷಂಪ್ರತಿ ಸಾವಿರಾರು ಭಕ್ತರು ಆಗಮಿಸುತ್ತಾರೆ. ಈ ಪ್ರಶಾಂತ ಮತ್ತು ಸುಂದರ ತಾಣವು ಭಕ್ತರಿಗೆ ಆಸಕ್ತಿಯನ್ನು ಹೆಚ್ಚಿಸುತ್ತದೆ ಮತ್ತು ದೇಹ ಮತ್ತು ಮನಸಿಗೆ ಉಲ್ಲಾಸವನ್ನು ನೀಡುತ್ತದೆ.

ಈ ಸಣ್ಣ ಪ್ರದೇಶವು ಪ್ರವಾಸಿಗರಿಗೆ ಹಬ್ಬವನ್ನುಂಟುಮಾಡುವ ಸ್ಥಳ. ಚೊಟ್ಟನಿಕ್ಕಾರ ದೇವಸ್ಥಾನವನ್ನು ಚೊಟ್ಟನಿಕ್ಕಾರಾ ಭಗವತಿ ದೇವಸ್ಥಾನ ಎಂದೂ ಕರೆಯಲಾಗಿದೆ. ಇಲ್ಲಿನ ಪ್ರಮುಖ ಆಕರ್ಷಕ ತಾಣವಿದು. ಈ ದೇವಸ್ಥಾನವು ಶತಮಾನಗಳಷ್ಟು ಹಳೆಯದು. ಇದು ಹಿಂದೂ ದೇವಿಯಾದ ಭಗವತಿಗೆ ಅರ್ಪಿಸಲಾದ ದೇವರು. ದೇವಸ್ಥಾನದ ವಾಸ್ತುಶಿಲ್ಪ ಶೈಲಿಯು ಗಮನಾರ್ಹವಾಗಿದೆ. ಇಲ್ಲಿ ವಿಶ್ವಕರ್ಮ ಸ್ತಪತಿಯ ಹೊಗಳಿಕೆಯನ್ನು ಮಾಡಲಾಗಿದೆ. ಚೊಟ್ಟನಿಕ್ಕಾರ ಮಾಕಮ್‌ ತೊಳಲ್‌ ಎಂಬುದು ಇಲ್ಲಿನ ನಡೆಯುವ ಪ್ರಸಿದ್ಧ ಹಬ್ಬ. ದೂರದ ಊರುಗಳಿಂದ ಈ ಹಬ್ಬಕ್ಕೆ ಭಕ್ತರು ಆಗಮಿಸುತ್ತಾರೆ.

ಹಿಂದೆ ತ್ರಿಪುನಿತುರಾ ಅರಮನೆಯಾಗಿದ್ದದ್ದು ಈಗ ಆರ್ಕಿಯಲಾಜಿಕಲ್‌ ಮ್ಯೂಸಿಯಂ ಆಗಿದೆ. ಇದು ಚೊಟ್ಟನಿಕ್ಕಾರಾದ ಇನ್ನೊಂದು ಪ್ರಮುಖ ಆಕರ್ಷಕ ತಾಣ. ಕೋಚಿ ರಾಜರ ಆಡಳಿತಕ್ಕೆ ಸಂಬಂದಿಸಿದ ಐತಿಹಾಸಿಕ ಕರಕುಶಲ ಸಾಮಗ್ರಿಗಳನ್ನು ಇಲ್ಲಿ ಪ್ರದರ್ಶನಕ್ಕಿಡಲಾಗಿದೆ. ಕಾಡುತುರುತಿ ಶಿವ ದೇವಸ್ಥಾನ ಮತ್ತು ಪೂರ್ಣತ್ರಯೇಸಾ ದೇವಸ್ಥಾನವು ಎರಡು ಪ್ರಮುಖ ದೇವಸ್ಥಾನಗಳಾಗಿವೆ. ಎಂಬಾಂಕ್‌ ಕೆರೆಯು ಕಾಡುತುರುತಿ ಶಿವ ದೇವಸ್ಥಾನದ ಸಮೀಪವೇ ಇದ್ದು ಪ್ರವಾಸಿಗರನ್ನು ಆಕರ್ಷಿಸುತ್ತದೆ.

ಧಾರ್ಮಿಕತೆಯೊಡನೆ ಸಂಸ್ಕೃತಿಯ ಸಮ್ಮಿಳನ

ಚೊಟ್ಟನಿಕ್ಕಾರಾ ದೇವಸ್ಥಾನ ಮತ್ತು ಇತರ ಪ್ರಮುಕ ದೇವಸ್ಥಾನಗಳು ಚೊಟ್ಟನಿಕ್ಕಾರಾ ಹಳ್ಳಿಗೆ ತನ್ನದೇ ಆದ ವಿಶಿಷ್ಟ ಸಾಂಸ್ಕೃತಿಕ ಮಹತ್ವವನ್ನು ನೀಡಿದೆ. ವಿವಿಧ ಹಬ್ಬಗಳನ್ನು ಮತ್ತು ಜಾತ್ರೆಗಳನ್ನು ಈ ದೇವಸ್ಥಾನದಲ್ಲಿ ಹಮ್ಮಿಕೊಳ್ಳಲಾಗುತ್ತದೆ. ಇದರಿಂದಾಗಿ ಚೊಟ್ಟನಿಕ್ಕಾರದಲ್ಲಿ ಎಂದಿಗೂ ಹಬ್ಬದ ಕಳೆ ಇರುತ್ತದೆ. ಈ ಪ್ರದೇಶವು ಬಹುತೇಕ ವರ್ಷಪೂರ್ತಿ ಭಕ್ತರಿಂದ ತುಂಬಿರುತ್ತದೆ.

ತಿರುವೋಣಮ್‌ ಹಬ್ಬವನ್ನು ಓಣಮ್‌ ಸಂದರ್ಭದಲ್ಲಿ ಮಾಡಲಾಗುತ್ತದೆ. ನವರಾತ್ರಿ ಅಘೋಶಮ್‌, ವೃಶ್ಚಿಕ ಮಂಡಲ ಮಹೋತ್ಸವಮ್‌, ತಿರುಕ್ಕಾರ್ತಿಕ ಹಬ್ಬ, ರಾಮಾಯಣ ಮಾಸಮ್‌ ಮತ್ತು ಉತ್ರಮ್‌ ಅರಟ್ಟು ಹಬ್ಬಗಳು ಇಲ್ಲಿ ಪ್ರಮುಖವಾದವು. ಚೊಟ್ಟನಿಕ್ಕಾರಾ ದೇವಸ್ಥಾನದ ವಾರ್ಷಿಕ ಜಾತ್ರೆಯಲ್ಲಿ ಏಳು ಆನೆಗಳು ಭಾಗವಹಿಸುತ್ತವೆ. ಈ ಸಂದರ್ಭವನ್ನು ಪ್ರವಾಸಿಗರು ಕಳೆದುಕೊಳ್ಳಲೇಬಾರದು.

ಪ್ರಶಾಂತ ವಾತಾವರಣ ಮತ್ತು ಸೂಕ್ತ ಸಾರಿಗೆ

ಚೊಟ್ಟನಿಕ್ಕಾರವು ಸಮಶೀತೋಷ್ಣ ವಾತಾವರಣವನ್ನು ವರ್ಷಪೂರ್ತಿ ಹೊಂದಿರುತ್ತದೆ. ಬೇಸಿಗೆಕಾಲವು ಒಣಹವೆಯನ್ನು ಕೂಡಿದ್ದು ಮಳೆಗಾಲವು ತೇವವಾಗಿರುತ್ತದೆ. ಈ ದೇವಸ್ಥಾನಕ್ಕೆ ಭೇಟಿ ನೀಡಲು ಉತ್ತಮ ವಾತಾವರಣವೆಂದರೆ ಅಗಸ್ಟ್‌ನಿಂದ ಮಾರ್ಚ್‌ ಅವಧಿ. ಪ್ರವಾಸಿಗರು ತಮ್ಮ ಆಚರಣೆಗಳಿಗೆ ಅನುಸಾರವಾಗಿ ಇಲ್ಲಿ ಭೇಟಿ ನೀಡಬಹುದು. ಕೊಚ್ಚಿಯ ಹೊರಭಾಗದಲ್ಲಿ ಚೊಟ್ಟನಿಕ್ಕಾರವಿದೆ. ಹೀಗಾಗಿ ಸೂಕ್ತ ಸಾರಿಗೆ ಸಂಪರ್ಕವನ್ನೂ ಹೊಂದಿದೆ. ಕೊಚ್ಚಿಯ ಸುತ್ತಮುತ್ತಲಿನ ಇತರ ಭಾಗಗಳನ್ನೂ ಸೇರಿಸಿ ಪ್ರವಾಸಿಗರು ಪ್ರವಾಸ ಯೋಜನೆಯನ್ನು ಮಾಡಿಕೊಳ್ಳಬಹುದು. ಸಮೀಪದ ರೈಲ್ವೆ ನಿಲ್ದಾಣವೆಂದರೆ ಕೊಚ್ಚಿ ರೈಲ್ವೆ ನಿಲ್ದಾಣ. ಚೊಟ್ಟನಿಕ್ಕಾರಕ್ಕೆ ಬಸ್‌ ಸೇವೆಗಳು ಲಭ್ಯವಿದೆ.

ಪ್ರಶಾಂತ ತಾಣ, ವೆಚ್ಚವೂ ಕಡಿಮೆ

ಇತರ ಎಲ್ಲಾ ದಕ್ಷಿಣ ಭಾಗದ ಹಳ್ಳಿಗಳಂತೆ, ಚೊಟ್ಟನಿಕ್ಕಾರವೂ ಕೂಡಾ ಹಸಿರಿನ ತಾಣ. ರಸ್ತೆಯ ಮೂಲಕ ಈ ಹಳ್ಳಿಗೆ ಪ್ರಯಾಣಿಸುತ್ತಿದ್ದರೆ, ಹಸಿರು ಸಿರಿಯನ್ನು ಕಣ್ತುಂಬಿಸಿಕೊಳ್ಳಬಹುದು. ತೆಂಗಿನ ತೋಟಗಳು ರಸ್ತೆಯ ಬದಿಯಲ್ಲಿ ನಿಮ್ಮನ್ನ ಬೆನ್ನತ್ತುತ್ತವೆ. ಪ್ರಾರ್ಥನೆ, ಗಂಟೆ ಜಾಗಟೆಗಳ ಧ್ವನಿ ಬೆಳ್ಳಂಬೆಳಗ್ಗೆಯೇ ಪ್ರವಾಸಿಗರ ಕಿವಿ ತುಂಬುತ್ತವೆ. ನಿರಂತರ 12 ದಿನಗಳವರೆಗೆ ಪ್ರವಾಸಿಗರು ಇಲ್ಲಿನ ದೇವಸ್ಥಾನಕ್ಕೆ ಭೇಟಿ ನೀಡಿದರೆ ಐಶ್ವರ್ಯ ವೃದ್ಧಿಸುತ್ತದೆ ಎಂಬುದು ಇಲ್ಲಿನ ಪ್ರತೀತಿ.

ಚೊಟ್ಟನಿಕ್ಕಾರಕ್ಕೆ ಪ್ರವಾಸ ಕೈಗೊಳ್ಳುವಾಗ ಇದಕ್ಕೆ ಸಮೀಪದ ಇನ್ನೂ ಕೆಲವು ಪ್ರದೇಶಗಳನ್ನು ಸೇರಿಸಿ ಯೋಜಿಸುವುದು ಒಳ್ಳೆಯದು. ಆಗ ಇಲ್ಲಿನ ಸೌಂದರ್ಯವನ್ನು ಇನ್ನಷ್ಟು ಆಕರ್ಷಕವಾಗಿ ಕಣ್ತುಂಬಿಕೊಳ್ಳಬಹುದು. ಇಲ್ಲಿಗೆ ಸಮೀಪದಲ್ಲಿರುವ ಇತರ ಪ್ರವಾಸಿ ತಾಣಗಳೆಂದರೆ, ಟ್ರಾವಣ್‌ಕೋರ್ಷ ಫರ್ಟಿಲೈಸರ್ಸ್‌, ಮಟ್ಟನ್‌ಚೇರಿ ಹಾರ್ಬರ್ವ, ವೈಕಮ್‌ ಮಹಾದೇವ ದೇವಸ್ಥಾನ ಮತ್ತು ಎರ್ನಾಕುಲತಪ್ಪನ್‌ ದೇವಸ್ಥಾನಗಳಾಗಿವೆ. ಕಡಿಮೆ ವೆಚ್ಚದ ಸಾರಿಗೆ ವ್ಯವಸ್ಥೆ ಮತ್ತು ವಸತಿ ಸೌಲಭ್ಯವು ಪ್ರವಾಸಿಗರಿಗೆ ಹೊರೆಯಾಗುವುದಿಲ್ಲ.

ಚೊಟ್ಟನಿಕ್ಕಾರಾ ಪ್ರಸಿದ್ಧವಾಗಿದೆ

ಚೊಟ್ಟನಿಕ್ಕಾರಾ ಹವಾಮಾನ

ಚೊಟ್ಟನಿಕ್ಕಾರಾ
31oC / 88oF
 • Haze
 • Wind: WNW 11 km/h

ಉತ್ತಮ ಸಮಯ ಚೊಟ್ಟನಿಕ್ಕಾರಾ

 • Jan
 • Feb
 • Mar
 • Apr
 • May
 • Jun
 • July
 • Aug
 • Sep
 • Oct
 • Nov
 • Dec

ತಲುಪುವ ಬಗೆ ಚೊಟ್ಟನಿಕ್ಕಾರಾ

 • ರಸ್ತೆಯ ಮೂಲಕ
  ಕೊಚ್ಚಿಯ ಹೊರವಲಯದಲ್ಲಿರುವ ಚೊಟ್ಟನಿಕ್ಕಾರಾಗೆ ಸಾಕಷ್ಟು ಬಸ್‌ ಸೇವೆಯ ಸೌಲಭ್ಯವಿದೆ. ಕೇರಳ ರಾಜ್ಯ ಸಾರಿಗೆ ಬಸ್‌ಗಳು ನಿರಂತರವಾಗಿ ಕೊಚ್ಚಿಯಿಂದ ಚೊಟ್ಟನಿಕ್ಕಾರಾಗೆ ಬಸ್‌ ಸೇವೆ ಇದೆ. ಕೊಚ್ಚಿಗೆ ದಕ್ಷಿಣ ಭಾರತದ ನಗರಗಳಾದ ಬೆಂಗಳೂರು, ಚೆನ್ನೈ, ತಿರುವನಂತಪುರಂ ಮತ್ತು ಹೈದರಬಾದ್‌ಗೆ ಸಂಪರ್ಕವನ್ನು ಹೊಂದಿವೆ.
  ಮಾರ್ಗಗಳ ಹುಡುಕಾಟ
 • ರೈಲಿನ ಮೂಲಕ
  ಚೊಟ್ಟನಿಕ್ಕಾರಾಗೆ ಸಮೀಪದ ರೈಲ್ವೆ ನಿಲ್ದಾಣವೆಂದರೆ ತ್ರಿಪುನಿತುರಾ. ಇದು ಸುಮಾರು 4 ಕಿ.ಮೀ ದೂರದಲ್ಲಿದೆ. ಈ ಸ್ಟೇಷನ್‌ನಿಂದ ಪ್ರವಾಸಿಗರು ಟ್ಯಾಕ್ಸಿ ಅಥವಾ ಆಟೋವನ್ನು ಬಾಡಿಗೆಗೆ ಪಡೆದು ಪ್ರಯಾಣಿಸಬಹುದು. ಇಲ್ಲಿಗೆ ಸಮೀಪದ ರೈಲ್‌ಹೆಡ್‌ ಎಂದರೆ ಎರ್ನಾಕುಲಂ. ಚೊಟ್ಟನಿಕ್ಕಾರಾದಿಂದ ಇಲ್ಲಿಗೆ ಸುಮಾರು 30 ಕಿ.ಮೀ ದೂರವಿದೆ.
  ಮಾರ್ಗಗಳ ಹುಡುಕಾಟ
 • ಆಕಾಶದ ಮೂಲಕ
  ಚೊಟ್ಟನಿಕ್ಕಾರಾಗೆ ಸಮೀಪದ ವಿಮಾನ ನಿಲ್ದಾಣವೆಮದರೆ ಕೊಚ್ಚಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ(ನೆಡುಂಬಸ್ಸೆರಿ ವಿಮಾನ ನಿಲ್ದಾಣ). ಕೊಚ್ಚಿ ವಿಮಾನ ನಿಲ್ದಾನವು ಭಾರತದ ಬಹುತೇಕ ನಗರಗಳ ಸಂಪರ್ಕವನ್ನು ಹೊಂದಿದೆ. ಇದು ಚೊಟ್ಟನಿಕ್ಕಾರಾದಿಂದ ಸುಮಾರು 45 ಕಿ.ಮೀ ದೂರದಲ್ಲಿದೆ. ಪ್ರವಾಸಿಗರು ಇಲ್ಲಿಂದ ಟ್ಯಾಕ್ಸಿಯನ್ನು ಬಾಡಿಗೆಗೆ ಪಡೆದು ಚೊಟ್ಟನಿಕ್ಕಾರಾಗೆ ಪ್ರಯಾಣಿಸಬಹುದು. ಇದಕ್ಕೆ ತಗಲುವ ವೆಚ್ಚ ಸುಮಾರು 600 ರೂಪಾಯಿಗಳು.
  ಮಾರ್ಗಗಳ ಹುಡುಕಾಟ
One Way
Return
From (Departure City)
To (Destination City)
Depart On
13 Dec,Fri
Return On
14 Dec,Sat
Travellers
1 Traveller(s)

Add Passenger

 • Adults(12+ YEARS)
  1
 • Childrens(2-12 YEARS)
  0
 • Infants(0-2 YEARS)
  0
Cabin Class
Economy

Choose a class

 • Economy
 • Business Class
 • Premium Economy
Check In
13 Dec,Fri
Check Out
14 Dec,Sat
Guests and Rooms
1 Person, 1 Room
Room 1
 • Guests
  2
Pickup Location
Drop Location
Depart On
13 Dec,Fri
Return On
14 Dec,Sat
 • Today
  Chottanikkara
  31 OC
  88 OF
  UV Index: 7
  Haze
 • Tomorrow
  Chottanikkara
  27 OC
  81 OF
  UV Index: 6
  Light rain shower
 • Day After
  Chottanikkara
  26 OC
  79 OF
  UV Index: 6
  Patchy rain possible