India
Search
  • Follow NativePlanet
Share
ಮುಖಪುಟ » ಸ್ಥಳಗಳು » ಚೊಟ್ಟನಿಕ್ಕಾರಾ » ಹವಾಮಾನ

ಚೊಟ್ಟನಿಕ್ಕಾರಾ ಹವಾಮಾನ

ಚೊಟ್ಟನಿಕ್ಕಾರಾವು ಒಣ ಹವೆ ಮತ್ತು ತೇವ ವಾತಾವರಣದ ಸಮ್ಮಿಶ್ರಣ. ಹೀಗಾಗಿ ವರ್ಷಪೂರ್ತಿ ಪ್ರವಾಸಿಗರು ಮಳೆಗಾಲವೊಂದನ್ನು ಬಿಟ್ಟು ಈ ಪ್ರದೇಶವನ್ನು ಭೇಟಿ ಮಾಡಬಹುದು. ಚಳಿಗಾಲವು ಸುತ್ತಲಿನ ಪ್ರದೇಶವನ್ನು ನೋಡಲು ಸೂಕ್ತ ಅವಧಿ. ಈ ಪ್ರದೇಶವನ್ನು ವೀಕ್ಷಿಸಲು ಇನ್ನೊಂದು ಸೂಕ್ತ ಅವಧಿಯೆಂದರೆ ಆಗಸ್ಟ್-ನವೆಂಬರ್. ಇದು ಹಬ್ಬಗಳು ಮತ್ತು ಜಾತ್ರೆಗಳ ಅವಧಿ.

ಬೇಸಿಗೆಗಾಲ

ಚೊಟ್ಟನಿಕ್ಕಾರಾಗೆ ಬೇಸಿಗೆಕಾಲ ಬರುವುದು ಮಾರ್ಚ್‌ನಲ್ಲಿ. ಮೇ ಅಂತ್ಯದವರೆಗೂ ಬೇಸಿಗೆಯ ಬಿಸಿಯನ್ನು ಇಲ್ಲಿನ ಜನ ಅನುಭವಿಸುತ್ತಾರೆ. ಬೇಸಿಗೆಯಲ್ಲಿ ಒಣ ವಾತಾವರಣವಿರುತ್ತದೆ ಮತ್ತು ತಾಪಮಾನವು ಗರಿಷ್ಟ 37 ಡಿಗ್ರಿ ಇರುತ್ತದೆ. ಇದು ದೇವಸ್ಥಾನಗಳನ್ನು ನೋಡುವುದಕ್ಕೆ ಸೂಕ್ತ ಸಮಯ. ಆದರೆ ಪ್ರವಾಸಿಗರು ಕಾಟನ್‌ ಬಟ್ಟೆಗಳನ್ನೇ ತರುವುದು ಉತ್ತಮ.

ಮಳೆಗಾಲ

ಚೊಟ್ಟನಿಕ್ಕಾರಾದಲ್ಲಿ ಮಳೆಗಾಲದಲ್ಲಿ ಸಾಧಾರಣ ಮಳೆಯಾಗುತ್ತದೆ. ಜೂನ್‌ನಲ್ಲಿ ಮಳೆಗಾಲ ಆರಂಭವಾಗಿ ಸಪ್ಟೆಂಬರಿನ ತನಕ ಸುರಿಯುತ್ತದೆ. ಈ ಅವಧಿಯಲ್ಲಿ ಅತಿ ಹೆಚ್ಚು ಮಳೆಯಾಗುತ್ತದೆ. ಜೂನ್‌ ಮತ್ತು ಜುಲೈ ಅವಧಿಯಲ್ಲಿ ತೀವ್ರವಾಗಿ ಮಳೆಯಾಗುವುದರಿಂದ ಪ್ರವಾಸಿಗರು ಈ ಸಮಯದಲ್ಲಿ ಇಲ್ಲಿ ಪ್ರವಾಸ ಮಾಡುವುದು ಸೂಕ್ತವಲ್ಲ.

ಚಳಿಗಾಲ

ಇತರೆಲ್ಲಾ ದಕ್ಷಿಣ ಭಾರತೀಯ ಪ್ರವಾಸಿ ಪ್ರದೇಶಗಳಂತೆ ಚೊಟ್ಟನಿಕ್ಕಾರಾದಲ್ಲೂ ಕೂಡಾ ಡಿಸೆಂಬರಿನಲ್ಲಿ ಚಳಿಗಾಲ ಆರಂಭವಾಗುತ್ತದೆ. ಇದು ವರ್ಷದಲ್ಲೇ ಅತ್ಯಂತ ಚಳಿಬೀಳುವ ಅವಧಿ. ಪ್ರವಾಸಿಗರು ಭೇಟಿ ನೀಡಲು ಸೂಕ್ತ ಸಮಯ ಇದು. ಈ ಪ್ರಶಾಂತ ವಾತಾವರಣದಲ್ಲಿ ಹೊರವಲಯದಲ್ಲಿ ತಿರುಗಾಡುವುದಕ್ಕೆ ಸೂಕ್ತ ಸಮಯವಿದು.