Search
 • Follow NativePlanet
Share
ಮುಖಪುಟ » ಸ್ಥಳಗಳು» ಪುನಲೂರ್

ಪುನಲೂರ್- ಎರಡು ರಾಜ್ಯಗಳ ಛಾಪು

10

ಚಿಕ್ಕ ಪಟ್ಟಣವಾದ ಪುನಲೂರ್ ತಮಿಳುನಾಡು ಮತ್ತು ಕೇರಳದ ಗಡಿ ಭಾಗದಲ್ಲಿದೆ. ಪುನಲೂರ್ ಪೇಪರ್ ಮಿಲ್ಸ್ ನ ಸ್ಥಾಪನೆಯೊಂದಿಗೆ ಕೇರಳದಲ್ಲಿ ಕೈಗಾರಿಕಾ ಕ್ರಾಂತಿಯನ್ನು ತಂದ ಮೊಟ್ಟಮೊದಲ ಪಟ್ಟವೆಂದರೆ ಪುನಲೂರ್. ಪುನಲೂರ್ ನಲ್ಲಿ ಕಲ್ಲಡ ನದಿ ಹರಿಯುತ್ತಿದ್ದು - ಪುನಲ್ ಎಂದರೆ ತಮಿಳು ಮತ್ತು ಮಲಯಾಳಂನಲ್ಲಿ ನೀರು ಎಂದರ್ಥ. ಊರು ಎಂದರೆ ಸ್ಥಳ. ತಮಿಳು ಮತ್ತು ಮಲಯಾಳಂನ ಈ ಎರಡೂ ಪದಗಳು ಸೇರಿ ಪುನಲೂರ್ ಎಂಬ ಹೆಸರು ಬಂದಿದೆ. ಹೀಗಾಗಿಯೇ ಈ ಊರನ್ನು ನೀರಿನ ಪಟ್ಟಣವೆಂದು ಅನುವಾದ ಮಾಡಲಾಗುತ್ತದೆ. ಪಶ್ಚಿಮ ಘಟ್ಟಗಳ ಮುಖ್ಯ ಆಡಳಿತ ಕಚೇರಿ ಪತನಪುರಂ ತಾಲೂಕಿನಲ್ಲಿದ್ದು ಪಶ್ಚಿಮ ಘಟ್ಟಗಳ ಮತ್ತೊಂದು ಹೆಬ್ಬಾಗಿಲಾಗಿ ಇದು ಗುರುತಿಸಿಕೊಳ್ಳುತ್ತದೆ. ಈ ಪಟ್ಟಣವನ್ನು ಪಶ್ಚಿಮ ಘಟ್ಟಗಳ ಮಡಿಲು ಎಂದೂ ಕರೆಯಲಾಗುತ್ತಿದ್ದು, ಇದು ದಕ್ಷಿಣ ಭಾರತದ ಐದನೇ ದೊಡ್ಡ ಪಟ್ಟಣವೂ ಹೌದು.

ಪುನಲೂರ್ ಪ್ರಸಿದ್ದವಾಗಿರುವುದು ಅನಾನಸ್ ಹಣ್ಣುಗಳಿಗೆ, ಪ್ಲೈವುಡ್, ಕಾಳುಮೆಣಸು ಮತ್ತು ಮರಮುಟ್ಟು ಸಾಮಾಗ್ರಿಗಳಿಗೆ. ಇದರ ಜೊತೆಗೆ 19 ನೇ ಶತಮಾನದಲ್ಲಿ ಬ್ರಿಟಿಷ್ ಸರ್ಕಾರದಿಂದ ಕಟ್ಟಿಸಲಾದ ಸಸ್ಪೆನ್ಶನ್ ಸೇತುವೆಯಿಂದಲೂ ಪುನಲೂರ್ ಪ್ರಸಿದ್ದವಾಗಿದೆ. ಅಧಿಕಾರಿಗಳು ಈ ಸಸ್ಪೆನ್ಶನ್ ಬ್ರಿಡ್ಜ್ ಅನ್ನು ರಾಷ್ಟ್ರೀಯ ಮಹತ್ವವುಳ್ಳ ಸ್ಮಾರಕವೆಂದು ಘೋಷಿಸಿದ್ದಾರೆ. ಈ ಸೇತುವೆಯನ್ನು ಸದ್ಯ ನವೀಕರಿಸಲಾಗುತ್ತಿದ್ದು ಸಾರ್ವಜನಿಕರು ಉಪಯೋಗಿಸಲಾಗುತ್ತಿಲ್ಲ. ಪುನಲೂರಿನಲ್ಲಿ ಅಗಸ್ತ್ಯಮಲೈ ಎಂಬ ಭೌಗೋಳಿಕ ಸಂರಕ್ಷಿತ ಪ್ರದೇಶವೂ ಇದೆ.

ಪುನಲೂರಿನಲ್ಲಿ ನೋಡತಕ್ಕ ಪ್ರದೇಶಗಳು

ಕಲ್ಲಡ ನದಿ ಪ್ರವಾಸಿಗರನ್ನು ಸೆಳೆಯುವ ಹಲವಾರು ದೃಶ್ಯವೈಭವವನ್ನು ಹೊಂದಿದೆ. ಹಬ್ಬಗಳ ಕಾಲದಲ್ಲಿ ಶಬರಿಮಲೆಗೆ ತೆರಳಿ ಅಯ್ಯಪ್ಪನ ದರ್ಶನಕ್ಕೆ ಹೊರಟ ಯಾತ್ರಾರ್ಥಿಗಳು ಪುನಲೂರಿನಲ್ಲಿ ಒಮ್ಮೆ ನಿಂತು ನೋಡಿಕೊಂಡು ಹೋಗುವುದರಿಂದ ಸದಾ ಜನದಟ್ಟಣೆಯಿಂದ ಕೂಡಿರುತ್ತದೆ. ತೆನ್ಮಲ ಎಕೋ ಟೂರಿಸಂ ನ ಒಂದು ಭಾಗವಾದ ಶೆಂತ್ರುನಿ ಅರಣ್ಯ ಇಲ್ಲಿನ ಮತ್ತೊಂದು ಆಕರ್ಷಣೆ. ಇಲ್ಲಿರುವ ಪರ್ವತ ಶ್ರೇಣಿಗಳನ್ನು ಹತ್ತಿಕೊಂಡು ಹೋಗಬಹುದಾದ್ದರಿಂದ ಈ ಸ್ಥಳ ಸಾಹಸ ಪ್ರಿಯರಿಗೆ ಅಚ್ಚುಮೆಚ್ಚಿನ ತಾಣ. ಪ್ರೇಕ್ಷಣೀಯ ಸ್ಥಳವಾದ ಪಲರುವಿ ಜಲಪಾತ ಮತ್ತು ಹಳೆ ಕೋರ್ಟಲಮ್ ಜಲಪಾತ ಇಲ್ಲಿರುವ ಮತ್ತೊಂದು ಆಕರ್ಷಣೆ. ಪುರಾತನವಾದ ಪಟ್ಟಾಜಿ ದೇವಿ ದೇವಸ್ಥಾನ ಮತ್ತೊಂದು ಪ್ರವಾಸಿ ತಾಣ.

ಪುನಲೂರ್ ಪ್ರಸಿದ್ಧವಾಗಿದೆ

ಪುನಲೂರ್ ಹವಾಮಾನ

ಪುನಲೂರ್
30oC / 86oF
 • Haze
 • Wind: W 9 km/h

ಉತ್ತಮ ಸಮಯ ಪುನಲೂರ್

 • Jan
 • Feb
 • Mar
 • Apr
 • May
 • Jun
 • July
 • Aug
 • Sep
 • Oct
 • Nov
 • Dec

ತಲುಪುವ ಬಗೆ ಪುನಲೂರ್

 • ರಸ್ತೆಯ ಮೂಲಕ
  ಪುನಲೂರ್ ರಾಜ್ಯ ಹೆದ್ದಾರಿ-8 ರ ಸಂಪರ್ಕ ಹೊಂದಿದ್ದು ಪುನಲೂರ್ ಮುವಪುಟ್ಟಳಾ ಹೆದ್ದಾರಿ ಕೇರಳದಲ್ಲಿಯೇ ಅತ್ಯಂತ ಉದ್ದನೆಯ ಹೆದ್ದಾರಿ. ರಾಷ್ಟ್ರೀಯ ಹೆದ್ದಾರಿ-208 ರ ಕೊಲ್ಲಮ್ ತಿರುಮಂಗಲಮ್ ರಸ್ತೆಯ ಮೂಲಕವೂ ಪುನಲೂರನ್ನು ತಲುಪಬಹುದು. ಈ ರಸ್ತೆ ಪುನಲೂರ್ ಪಟ್ಟಣವನ್ನು ಎಲ್ಲ ಪ್ರಮುಖ ನಗರಗಳಿಗೂ ಸೇರಿಸುತ್ತದೆ.
  ಮಾರ್ಗಗಳ ಹುಡುಕಾಟ
 • ರೈಲಿನ ಮೂಲಕ
  ಪುನಲೂರ್ ನಲ್ಲಿಯೇ ರೈಲು ನಿಲ್ದಾಣವಿದ್ದು ಕೊಲ್ಲಮ್ ಮಧುರೈ ಮಾರ್ಗದಲ್ಲಿದೆ. ಪುನಲೂರ್ ರೈಲ್ವೇ ನಿಲ್ದಾಣ ಸದ್ಯ ಕೊಲ್ಲಮ್ ಗೆ ಸಂಪರ್ಕ ಹೊಂದಿದೆ. ಪ್ರಸ್ತುತ, ಈ ಮಾರ್ಗದಲ್ಲಿ ನಾಲ್ಕು ರೈಲ್ವೇ ಸೇವೆಗಳು ಲಭ್ಯವಿದ್ದು ಭವಿಷ್ಯದಲ್ಲಿ ಇನ್ನೂ ಹಲವಾರು ರೈಲುಗಳು ಇಲ್ಲಿಂದ ಸಂಚರಿಸುವ ಸಾಧ್ಯತೆಯಿದೆ.
  ಮಾರ್ಗಗಳ ಹುಡುಕಾಟ
 • ಆಕಾಶದ ಮೂಲಕ
  ವಿಮಾನಯಾನದ ಮೂಲಕ ಪುನಲೂರನ್ನು ತಲುಪಬಹುದು. ತಿರುವನಂತಪುರಂ ವಿಮಾನ ನಿಲ್ದಾಣ ಇಲ್ಲಿಗೆ ಹತ್ತಿರದಲ್ಲಿದೆ. ಪುನಲೂರ್ ಪಟ್ಟಣ ತಿರುವನಂತಪುರಂನ ಉತ್ತರಕ್ಕೆ 75 ಕಿಲೋ ಮೀಟರ್ ದೂರದಲ್ಲಿದೆ. ವಿಮಾನನಿಲ್ದಾಣದಿಂದ ಟ್ಯಾಕ್ಸಿ ಬಾಡಿಗೆ ಪಡೆಯಬಹುದು ಅಥವಾ ಬಸ್ಸಿನಲ್ಲಿ ಪುನಲೂರ್ ತಲುಪಬಹುದು.
  ಮಾರ್ಗಗಳ ಹುಡುಕಾಟ
One Way
Return
From (Departure City)
To (Destination City)
Depart On
20 Jan,Sun
Return On
21 Jan,Mon
Travellers
1 Traveller(s)

Add Passenger

 • Adults(12+ YEARS)
  1
 • Childrens(2-12 YEARS)
  0
 • Infants(0-2 YEARS)
  0
Cabin Class
Economy

Choose a class

 • Economy
 • Business Class
 • Premium Economy
Check In
20 Jan,Sun
Check Out
21 Jan,Mon
Guests and Rooms
1 Person, 1 Room
Room 1
 • Guests
  2
Pickup Location
Drop Location
Depart On
20 Jan,Sun
Return On
21 Jan,Mon
 • Today
  Punalur
  30 OC
  86 OF
  UV Index: 10
  Haze
 • Tomorrow
  Punalur
  20 OC
  68 OF
  UV Index: 11
  Sunny
 • Day After
  Punalur
  21 OC
  69 OF
  UV Index: 11
  Partly cloudy