Search
 • Follow NativePlanet
Share
ಮುಖಪುಟ » ಸ್ಥಳಗಳು» ತೆನ್ಮಲ

ತೇನ್‍ಮಲ - ಜೇನಿನ ನಾಡು

17

ತೇನ್‍ಮಲ ಎಂಬುದು ಕೇರಳದ ಕೊಲ್ಲಂ ಜಿಲ್ಲೆಯಲ್ಲಿರುವ ಅತ್ಯಂತ ಪ್ರಸಿದ್ಧ ಜೈವಿಕ ಪ್ರವಾಸಿ ತಾಣವಾಗಿದೆ. ತೇನ್‍ಮಲ್ ಎಂದರೆ "ಜೇನಿನ ಬೆಟ್ಟ" ಎಂದರ್ಥ. ಈ ಸ್ಥಳವು ಇಲ್ಲಿ ಬಿಡುವ ಜೇನಿಗೆ ಖ್ಯಾತಿ ಪಡೆದಿದೆ. ನಂಬಿಕೆಗಳ ಪ್ರಕಾರ ಈ ಜೇನು ಹಲವಾರು ಔಷಧೀಯ ಗುಣಗಳನ್ನು ಹೊಂದಿರುತ್ತದಂತೆ. ಕೇರಳ ರಾಜಧಾನಿಯಿಂದ 70 ಕಿ.ಮೀ ದೂರದಲ್ಲಿರುವ ಈ ತೇನ್‍ಮಲವು ಭಾರತದ ಮೊಟ್ಟ ಮೊದಲ  ಜೈವಿಕ ಪ್ರವಾಸೋದ್ಯಮ ಯೋಜನೆಯಾಗಿದೆ.

ಜೈವಿಕ ಪ್ರವಾಸೋದ್ಯಮದ ಭಾಗವಾಗಿರುವುದರಿಂದಾಗಿ ಈ ಸ್ಥಳವನ್ನು 5 ಮುಖ್ಯ ವಲಯಗಳನ್ನಾಗಿ ವಿಂಗಡಿಸಲಾಗಿದೆ: ಸಾಂಸ್ಕೃತಿಕ ವಲಯ, ಸಾಹಸ ವಲಯ, ವಿರಾಮ ಕಾಲ ಕಳೆಯುವ ವಲಯ, ಜಿಂಕೆ ಪುನರ್ವಸತಿ ವಲಯ ಮತ್ತು ದೋಣಿ ವಿಹಾರ ವಲಯ ಎಂಬ ಐದು ವಲಯಗಳು ಇಲ್ಲಿವೆ. ಹಲವಾರು ಎಕರೆಗಳ ನಿತ್ಯ ಹರಿದ್ವರ್ಣ ಕಾಡುಗಳನ್ನು ಹೊಂದಿರುವ ತೇನ್‍ಮಲವು  ಭಾರತದ ಒಳಗಿನ ಮತ್ತು ಹೊರಗಿನ ಪ್ರವಾಸಿಗರನ್ನು ತನ್ನತ್ತ ಆಕರ್ಷಿಸುತ್ತಿರುತ್ತದೆ. ಈ ಜೈವಿಕ ಪ್ರವಾಸಿ ತಾಣವು ಹಲವಾರು ವಿಶಿಷ್ಟ ಸಸ್ಯ ಮತ್ತು ಪ್ರಾಣಿ ಪ್ರಭೇಧಗಳಿಗೆ ಆಶ್ರಯವನ್ನೊದಗಿಸಿದೆ. ಇಲ್ಲಿನ ಗುಡ್ಡಗಾಡು ಪ್ರಾಂತ್ಯವು ದೋಣಿ ವಿಹಾರ, ಹಗ್ಗದ ಸೇತುವೆ, ಚಾರಣ, ಪರ್ವತಾರೋಹಣ, ಬೈಕ್ ಸವಾರಿ ಮತ್ತು ಸಂಗೀತ ಕಾರಂಜಿಯಂತಹ ಹಲವಾರು ಸಾಹಸ ಚಟುವಟಿಕೆಗಳಿಗೆ ಮತ್ತು ಮನೋರಂಜನಾ ಚಟುವಟಿಕೆಗಳಿಗೆ  ಅವಕಾಶವನ್ನೊದಗಿಸುತ್ತದೆ.

ವೀಕ್ಷಣಾ ತಾಣಗಳ ಸ್ವರ್ಗ

ತೇನ್‍ಮಲ ಪ್ರಾಂತ್ಯದಲ್ಲಿ ಹರಿಯುವ ಕಲ್ಲಡ ನದಿಗೆ ಅಡ್ಡಲಾಗಿ ನಿರ್ಮಿಸಲಾಗಿರುವ ಜಲಾಶಯವು ಇಲ್ಲಿನ ಪ್ರಮುಖ ಆಕರ್ಷಣೆಗಳಲ್ಲಿ ಒಂದಾಗಿದೆ. ಪಲರುವಿ ಜಲಪಾತವು ತೇನ್‍ಮಲವನ್ನು ವಿಹಾರಕ್ಕೆ ಮತ್ತು ಮಧುಚಂದ್ರಗಳಿಗಾಗಿ ಅತ್ಯಂತ ಯೋಗ್ಯ ಸ್ಥಳವನ್ನಾಗಿ ಮಾಡಿದೆ. ಹಲವಾರು ಜಿಂಕೆಗಳ ಪ್ರಭೇಧವನ್ನು ಹೊಂದಿರುವ ಜಿಂಕೆ ಉದ್ಯಾನವನ ಇಲ್ಲಿ ನೋಡ ಬೇಕಾಗಿರುವ ಪ್ರಮುಖ ಆಕರ್ಷಣೆಗಳಲ್ಲಿ ಒಂದಾಗಿದೆ.  ಈ ಉದ್ಯಾನವನದಲ್ಲಿ ನಿರ್ಮಿಸಲಾಗಿರುವ ಮರದ ಕುಟೀರಗಳು ಈ ಉದ್ಯಾನವನಕ್ಕೆ ಮಾಂತ್ರಿಕ ಸ್ಪರ್ಶವನ್ನು ಒದಗಿಸಿ, ಇದನ್ನು ಒಂದು ಅತ್ಯುತ್ತಮವಾದ ವಿಹಾರ ತಾಣವನ್ನಾಗಿ ರೂಪಿಸಿವೆ.

ನಕ್ಷತ್ರವನಂ (ಮರಗಳ ನರ್ಸರಿ) , ಅರ್ಯನ್‍ಕಾವು ಶಾಸ್ತ ದೇವಾಲಯ, ಕುಲತುಪುಳ ಶಾಸ್ತ ದೇವಾಲಯ ಮತ್ತು ಒಂದು ತೂಗು ಸೇತುವೆ ಎಲ್ಲವು ಸೇರಿ ತೇನ್‍ಮಲವನ್ನು ಪ್ರವಾಸಿಗರ ನೆಚ್ಚಿನ ತಾಣವನ್ನಾಗಿಸಿವೆ. ತೇನ್‍ಮಲಗೆ ರಸ್ತೆ ಸಂಪರ್ಕ ಉತ್ತಮ ರೀತಿಯಲ್ಲಿದೆ. ಇದಕ್ಕೆ ತಿರುವನಂತಪುರಂ ಮತ್ತು ಪುನಲೂರ‍್ ಗಳಿಂದ ರಸ್ತೆಯ ಮೂಲಕ ಸುಲಭವಾಗಿ ತಲುಪಬಹುದು. ಇಲ್ಲಿನ ಮಿತವಾದ ಉಷ್ಣಾಂಶ ಮತ್ತು  ಹಿತವಾದ ಹವಾಗುಣವು ಪ್ರವಾಸಿಗರನ್ನು ಎಲ್ಲಾ ಋತುಗಳಲ್ಲಿಯು ತೇನ್‍ಮಲಗೆ ಬರುವಂತೆ ಪ್ರೇರೇಪಿಸುತ್ತವೆ.  ಅಷ್ಟೇ ಅಲ್ಲದೆ ತೇನ್‍ಮಲವು ಸಾಹಸ ಚಟುವಟಿಕೆಗಳಿಂದ ಮತ್ತು ವಿಹಾರ ತಾಣಗಳಿಂದಾಗಿ ಎಲ್ಲ ಪ್ರವಾಸಿಗರ ಬೇಡಿಕೆಗಳನ್ನು ಮತ್ತು ನಿರೀಕ್ಷೆಗಳನ್ನು ಅಕ್ಷರಶಃ ಪೂರೈಸುತ್ತದೆ ಎಂಬುದರಲ್ಲಿ ಎರಡು ಮಾತಿಲ್ಲ.

ತೆನ್ಮಲ ಪ್ರಸಿದ್ಧವಾಗಿದೆ

ತೆನ್ಮಲ ಹವಾಮಾನ

ತೆನ್ಮಲ
31oC / 88oF
 • Haze
 • Wind: WNW 11 km/h

ಉತ್ತಮ ಸಮಯ ತೆನ್ಮಲ

 • Jan
 • Feb
 • Mar
 • Apr
 • May
 • Jun
 • July
 • Aug
 • Sep
 • Oct
 • Nov
 • Dec

ತಲುಪುವ ಬಗೆ ತೆನ್ಮಲ

 • ರಸ್ತೆಯ ಮೂಲಕ
  ತೇನ್‍ಮಲಗೆ ತಿರುವನಂತಪುರಂ ಮತ್ತು ಕೊಲ್ಲಂ ಮಾರ್ಗವಾಗಿ ರಸ್ತೆ ಮೂಲಕ ತಲುಪಬಹುದು. ಕೇರಳ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ಬಸ್ಸುಗಳು ತೇನ್‍ಮಲಗೆ ತಿರುವನಂತಪುರಂನಿಂದ ಹೋಗಿ ಬರುತ್ತಿರುತ್ತವೆ. ಬಸ್ಸುಗಳು ಕಿರುಪ್ರವಾಸಗಳನ್ನು ಕೈಗೊಳ್ಳಲು ಸುರಕ್ಷಿತ ಮತ್ತು ಮಿತವ್ಯಯಿ ಸಹ. ಟ್ಯಾಕ್ಸಿಗಳು ಮತ್ತು ಖಾಸಗಿ ವಾಹನಗಳು ತೇನ್‍ಮಲಗೆ ಹೋಗಲು ದೊರೆಯುತ್ತವೆ.
  ಮಾರ್ಗಗಳ ಹುಡುಕಾಟ
 • ರೈಲಿನ ಮೂಲಕ
  ತೇನ್‍ಮಲಗೆ ಸಮೀಪದ ರೈಲು ನಿಲ್ದಾಣ ಕೊಲ್ಲಂನಲ್ಲಿದೆ. ಇದು ಇಲ್ಲಿಂದ 66 ಕಿ.ಮೀ ದೂರದಲ್ಲಿದೆ. ಕೊಲ್ಲಂ ಕೇರಳದಲ್ಲಿರುವ ಪ್ರಮುಖ ರೈಲು ನಿಲ್ದಾಣವಾಗಿದೆ. ಇದು ಭಾರತದ ಇನ್ನಿತರ ಭಾಗಗಳೊಂದಿಗೆ ಉತ್ತಮ ರೈಲು ಸಂಪರ್ಕವನ್ನು ಹೊಂದಿದೆ. ಪ್ರವಾಸಿಗರು ಈ ನಿಲ್ದಾಣದಿಂದ ಟ್ಯಾಕ್ಸಿಗಳ ಮೂಲಕ ತೇನ್‍ಮಲಗೆ ತಲುಪಬಹುದು. ಸಾಮಾನ್ಯವಾಗಿ 7 ರಿಂದ 12 ರೂಪಾಯಿ/ಕಿ.ಮೀ ಗಳ ವರೆಗೆ ಇರುವ ದರವು ಟ್ಯಾಕ್ಸಿಗಳ ನಮೂನೆಯ ಮೇಲೆ ಅವಲಂಬಿಸಲ್ಪಟ್ಟಿರುತ್ತದೆ.
  ಮಾರ್ಗಗಳ ಹುಡುಕಾಟ
 • ಆಕಾಶದ ಮೂಲಕ
  ತೇನ್‍ಮಲಗೆ ಸಮೀಪದಲ್ಲಿರುವ ವಿಮಾನ ನಿಲ್ದಾಣವೆಂದರೆ ತಿರುವನಂತಪುರಂ ವಿಮಾನ ನಿಲ್ದಾಣ. ಇದು ಇಲ್ಲಿಂದ 72 ಕಿ.ಮೀ ದೂರದಲ್ಲಿದೆ. ಈ ವಿಮಾನ ನಿಲ್ದಾಣವು ಬೆಂಗಳೂರು, ಮುಂಬಯಿ, ದೆಹಲಿ, ಚೆನ್ನೈ ಮತ್ತು ಹೈದರಾಬಾದ್‍ಗಳೊಂದಿಗೆ ಉತ್ತಮ ವಿಮಾನಯಾನ ಸಂಪರ್ಕವನ್ನು ಹೊಂದಿದೆ. ಪ್ರವಾಸಿಗರು ಈ ವಿಮಾನ ನಿಲ್ದಾಣದಿಂದ ಟ್ಯಾಕ್ಸಿಗಳ ಮೂಲಕ ತೇನ್‍ಮಲಗೆ ತಲುಪಬಹುದು.
  ಮಾರ್ಗಗಳ ಹುಡುಕಾಟ
One Way
Return
From (Departure City)
To (Destination City)
Depart On
28 Sep,Mon
Return On
29 Sep,Tue
Travellers
1 Traveller(s)

Add Passenger

 • Adults(12+ YEARS)
  1
 • Childrens(2-12 YEARS)
  0
 • Infants(0-2 YEARS)
  0
Cabin Class
Economy

Choose a class

 • Economy
 • Business Class
 • Premium Economy
Check In
28 Sep,Mon
Check Out
29 Sep,Tue
Guests and Rooms
1 Person, 1 Room
Room 1
 • Guests
  2
Pickup Location
Drop Location
Depart On
28 Sep,Mon
Return On
29 Sep,Tue
 • Today
  Thenmala
  31 OC
  88 OF
  UV Index: 7
  Haze
 • Tomorrow
  Thenmala
  27 OC
  81 OF
  UV Index: 6
  Light rain shower
 • Day After
  Thenmala
  26 OC
  79 OF
  UV Index: 6
  Patchy rain possible