Search
  • Follow NativePlanet
Share
ಮುಖಪುಟ » ಸ್ಥಳಗಳು » ತೆನ್ಮಲ » ಹವಾಮಾನ

ತೆನ್ಮಲ ಹವಾಮಾನ

ತೇನ್‍ಮಲಗೆ ಭೇಟಿಕೊಡಲು ಅತ್ಯುತ್ತಮ ಅವಧಿಯೆಂದರೆ ಚಳಿಗಾಲ. ಅಂದರೆ ಡಿಸೆಂಬರ್ ನಿಂದ ಫೆಬ್ರವರಿಯವರೆಗಿನ ನಡುವಿನ ಅವಧಿ. ಹಿತವಾದ ವಾತಾವರಣ ಮತ್ತು ತಂಪಾದ ಪರಿಸರವು ಪ್ರವಾಸಿಗರನ್ನು ಚಾರಣ, ಸೈಕಲ್ ಸವಾರಿ, ದೋಣಿ ವಿಹಾರ ಮತ್ತು ಪಕ್ಷಿ ವೀಕ್ಷಣೆಗಳಲ್ಲಿ ತೊಡಗಿಕೊಳ್ಳಲು ಸಹಕರಿಸುತ್ತದೆ. ಅಲ್ಲದೆ ಚಳಿಗಾಲವು ಜೈವಿಕ ಪ್ರವಾಸೋದ್ಯಮ ಯೋಜನೆಯನ್ನು ವೀಕ್ಷಿಸಲು ಹೇಳಿ ಮಾಡಿಸಿದ ಸಮಯವಾಗಿರುತ್ತದೆ.

ಬೇಸಿಗೆಗಾಲ

ಬೇಸಿಗೆಯು ತೇನ್‍ಮಲದಲ್ಲಿ ಮಾರ್ಚ್ ತಿಂಗಳಿನಲ್ಲಿ ಶುರುವಾಗಿ ಮೇ ಅಂತ್ಯದವರೆಗು ಇರುತ್ತದೆ. ಆಗ ಇಲ್ಲಿನ ಉಷ್ಣಾಂಶವು 20° ಸೆಲ್ಶಿಯಸ್ ನಿಂದ 36°ಸೆಲ್ಶಿಯಸ್‍ವರೆಗು ಇರುತ್ತದೆ. ದಿನದ ಸಮಯದಲ್ಲಿ ಇಲ್ಲಿ ಬಿಸಿಲು ವಿಪರೀತವಾಗಿರುತ್ತದೆ. ಆದರೆ ರಾತ್ರಿಗಳು ಹಿತವಾಗಿ ಮತ್ತು ಚಳಿಯಿಂದ ಕೂಡಿರುತ್ತವೆ. ಬೇಸಿಗೆಗಳಲ್ಲಿ ಇಲ್ಲಿಗೆ ಬರುವವರು ಹತ್ತಿ ಬಟ್ಟೆಗಳನ್ನು ತರುವುದು ಉತ್ತಮವಾದ ಆಯ್ಕೆಯಾಗಿರುತ್ತದೆ.

ಮಳೆಗಾಲ

ಮಳೆಗಾಲದಲ್ಲಿ ಬೀಳುವ ಮಳೆಯು ತೇನ್‍ಮಲದ ಬಿಸಿಲಿನ ತಾಪಮಾನವನ್ನು ಕಡಿಮೆಗೊಳಿಸುತ್ತದೆ. ಮಳೆಗಾಲದ ಮೋಡಗಳು ತೇನ್‍ಮಲದ ಮೇಲೆ ಜೂನ್‍ ತಿಂಗಳಿನಲ್ಲಿ ಕವಿಯಲಾರಂಭಿಸುತ್ತವೆ. ಈ ಪ್ರದೇಶದಲ್ಲಿ ಮಳೆಯು ವಿಪರೀತವಾಗಿ ಬೀಳುತ್ತದೆ. ಅದಕ್ಕಾಗಿ ಈ ಪ್ರದೇಶ ಒಂದು ಬಗೆಯಲ್ಲಿ ಅದೃಷ್ಟ ಮಾಡಿದೆಯೆಂದೆ ಹೇಳಬಹುದು. ಈ ಮಳೆಗಾಲವು ಸೆಪ್ಟೆಂಬರ್‍ ವರೆಗೆ ಇರುತ್ತದೆ. ಈ ಕಾಲದಲ್ಲಿ ಮಧ್ಯಮ ಪ್ರಮಾಣದ ಉಷ್ಣಾಂಶವು ಇರುತ್ತದೆ. ತೇನ್‍ಮಲವು ನೈಋತ್ಯ ಮಾನ್ಸೂನ್ ಮಾರುತಗಳಿಂದ ಮಳೆಯನ್ನು ಪಡೆಯುತ್ತದೆ. ಮಳೆಗಾಲದಲ್ಲಿ ಇದ್ದಕಿದ್ದಂತೆ ಬೀಳುವ ಭಾರೀ ಮಳೆಗಳು ಇಲ್ಲಿನ ರಸ್ತೆಗಳ ಪರಿಸ್ಥಿತಿಯನ್ನು ಹದಗೆಡಿಸುತ್ತವೆ. ಹಾಗಾಗಿ ಇಲ್ಲಿಗೆ ಮಳೆಗಾಲದಲ್ಲಿ ಭೇಟಿ ನೀಡದಿರುವುದು ಉತ್ತಮ.

ಚಳಿಗಾಲ

ತೇನ್‍ಮಲದಲ್ಲಿ ಚಳಿಗಾಲವು ಡಿಸೆಂಬರ್ ನಿಂದ ಫೆಬ್ರವರಿಯವರೆಗೆ ಇರುತ್ತದೆ. ಆಗ ಇಲ್ಲಿನ ಉಷ್ಣಾಂಶವು ತಂಪಾಗಿದ್ದು, ಹವಾಗುಣವು ಆಹ್ಲಾದಕರವಾಗಿರುತ್ತದೆ. ಈ ಬೆಟ್ಟಗಳಿಂದ ಕೂಡಿದ ಪ್ರಾಂತ್ಯಕ್ಕೆ ಭೇಟಿಕೊಡಲು ಇದು ಹೇಳಿ ಮಾಡಿಸಿದ ಸಮಯವಾಗಿರುತ್ತದೆ. ಆದರೆ ಪ್ರವಾಸಿಗರು ಇಲ್ಲಿ ಇದ್ದಕಿದ್ದಂತೆ ಕುಸಿಯುವ ಉಷ್ಣಾಂಶದ ಕುರಿತು ಮುನ್ನೆಚ್ಚರಿಕೆಯನ್ನು ಹೊಂದಿರಬೇಕಾದುದು ಅತ್ಯಾವಶ್ಯಕ. ಹಾಗಾಗಿ ಪ್ರವಾಸಿಗರು ಸ್ವೆಟರ್ ಮತ್ತು ಚಳಿಗಾಲದ ಉಡುಪುಗಳನ್ನು ಹೊಂದಿರಬೇಕಾದುದು ಅನಿವಾರ್ಯ.