Search
  • Follow NativePlanet
Share
ಮುಖಪುಟ » ಸ್ಥಳಗಳು» ದೇವಿಕುಲಂ

ದೇವಿಕುಲಂ - ಮೈನವಿರೇಳಿಸುವ ತಾಣಗಳು

15

ದೇವಿಕುಲಂ ಎಂಬ ಪರ್ವತ ಪ್ರದೇಶ ಇರುವುದು ಕೇರಳದ ಸುಂದರ ತಾಣದಲ್ಲಿ. ಕಲ್ಲು ಬಂಡೆಗಳ ಅಂಚಿಂದ ಧಾರೆಯಾಗಿ ಸುರಿಯುವ ಜಲಪಾತಗಳು ಮತ್ತು ಹಸಿರು ಸೀರೆಯನ್ನು ಹೊದ್ದಂತಿರುವ ಬೆಟ್ಟ ಪ್ರದೇಶಗಳು ನಿಮ್ಮನ್ನು ಇಲ್ಲಿಗೆ ಆದರದಿಂದ ಸ್ವಾಗತಿಸುತ್ತವೆ. ಇಡುಕ್ಕಿ ಜಿಲ್ಲೆಯ ಮುನ್ನಾರಿನಿಂದ ದೇವಿಕುಲಂ ಸುಮಾರು 7 ಕಿ.ಮೀ ದೂರದಲ್ಲಿದೆ. ವೈವಿಧ್ಯಮಯ ಪಕ್ಷಿ ಪ್ರಾಣಿಗಳ ಸಮೂಹವೇ ಇಲ್ಲಿದೆ. ಪ್ರವಾಸಿಗರು ಈ ಸೌಂದರ್ಯವನ್ನು ಅನುಭವಿಸಿ ಖುಷಿಪಡಬಹುದು. ಇಲ್ಲಿನ ಇನ್ನೊಂದು ಪ್ರಮುಖ ಆಕರ್ಷಕ ಸಂಗತಿಯೆಂದರೆ ಟೌರ್ ಮೀನುಗಾರಿಕೆ. ದೇವಿಕುಲಂ, ಚಾರಣಿಗರ ಸ್ವರ್ಗ.

ಚಾರಣಿಗರಿಗೊಂದು ಸ್ವರ್ಗ

ಈ ಪ್ರದೇಶದ ಪ್ರಮುಖ ಆಕರ್ಷಣೆಯೆಂದರೆ ಸೀತಾ ದೇವಿ ಕೆರೆ. ಐತಿಹ್ಯಗಳ ಪ್ರಕಾರ ಸೀತಾ ದೇವಿಯು ಇಲ್ಲಿ ಸ್ನಾನ ಮಾಡಿದ್ದಳು ಎಂದು ನಂಬಲಾಗಿದೆ. ಪಲ್ಲಿವಾಸಲ್ ಜಲಪಾತವನ್ನು ನೀವು ನೋಡಲೇಬೇಕು. ದೇವಿಕುಲಂ ನ ಪ್ರಾಣಿ ಪಕ್ಷಿಗಳ ಸಂಕುಲವನ್ನು ನೋಡುವ ಸೌಭಾಗ್ಯವನ್ನು ನೀವು ತಪ್ಪಿಸಿಕೊಳ್ಳಲೇಬಾರದು. ಬೇಸಿಗೆಕಾಲ, ಮಳೆಗಾಲ ಮತ್ತು ಚಳಿಗಾಲಗಳು ಇಲ್ಲಿನ ಪ್ರಮುಖ ಕಾಲಗಳು. ದೇವಿಕುಲಂ ಗೆ ಹೋಗಲು ಬೇಸಿಗೆಕಾಲ ಮತ್ತು ಮಳೆಗಾಲವು ಸೂಕ್ತ. ಚಳಿಗಾಲದಲ್ಲಿ ತಾಪಮಾನವು ಅತ್ಯಂತ ಕಡಿಮೆ ಇರುತ್ತದೆ. ಬೇಸಿಗೆಯಲ್ಲಿ ಹಗಲಿನ ಹೊತ್ತಿನಲ್ಲಿ ತಾಪಮಾನವು ಮಧ್ಯಮ ಪ್ರಮಾಣದಲ್ಲಿರುತ್ತದೆ ಹಾಗೂ ಸಹಿಸಿಕೊಳ್ಳಬಹುದಾದಂಥದ್ದು. ರಾತ್ರಿಯಲ್ಲಿ ತಾಪಮಾನ ಕಡಿಮೆಯಾಗುತ್ತದೆ. ನಿಸರ್ಗಪ್ರಿಯರೇ ಇಲ್ಲಿಗೆ ಹೆಚ್ಚಾಗಿ ಆಗಮಿಸುತ್ತಾರೆ.

ದೇವಿಕುಲಂ ಪ್ರಸಿದ್ಧವಾಗಿದೆ

ದೇವಿಕುಲಂ ಹವಾಮಾನ

ಉತ್ತಮ ಸಮಯ ದೇವಿಕುಲಂ

  • Jan
  • Feb
  • Mar
  • Apr
  • May
  • Jun
  • July
  • Aug
  • Sep
  • Oct
  • Nov
  • Dec

ತಲುಪುವ ಬಗೆ ದೇವಿಕುಲಂ

  • ರಸ್ತೆಯ ಮೂಲಕ
    ದೇವಿಕುಲಂ ಗೆ ಕೊಚ್ಚಿ ಮತ್ತು ಕೊಟ್ಟಾಯಂ ಮೂಲಕ ಸುಲಭವಾಗಿ ರಸ್ತೆ ಮಾರ್ಗದಲ್ಲಿ ತಲುಪಬಹುದು. ನಿಸರ್ಗಪ್ರಿಯರಿಗೆ ರಸ್ತೆ ಮಾರ್ಗದಲ್ಲೇ ಪ್ರಯಾಣಿಸುವುದೇ ಇಷ್ಟವಾದೀತು. ಸರ್ಕಾರಿ ಬಸ್​ ಸೇವೆ ಮತ್ತು ಬಸ್​ ಸೇವೆಗಳೆರಡೂ ಲಭ್ಯವಿದೆ. ದೇವಿಕುಲಂ ರಸ್ತೆಯು ಅಮೋಘವಾಗಿದೆ. ಟಿಕೆಟ್​ಗಳು ಕಡಿಮೆ, ಆದರು ಬಸ್​ಗಳು ತುಂಬಿತುಳುಕುತ್ತಿರುತ್ತವೆ.
    ಮಾರ್ಗಗಳ ಹುಡುಕಾಟ
  • ರೈಲಿನ ಮೂಲಕ
    ದೇವಿಕುಲಂ ಗೆ ರೈಲಿನ ನೇರ ಸಂಪರ್ಕವಿಲ್ಲ. ಆದರೆ ಪ್ರವಾಸಿಗರು ಸಮೀಪದ ರೈಲ್ವೆ ಸ್ಟೇಷನ್​ಗೆ ಬರಬಹುದು. ಕೊಚ್ಚಿ (150 ಕಿ.ಮೀ) ಮತ್ತು ಕೊಟ್ಟಾಯಂ (130 ಕಿ.ಮೀ) ಸಮೀಪದ ರೈಲು ನಿಲ್ದಾಣಗಳು. ಈ ಪ್ರಮುಖ ರೈಲ್​ಹೆಡ್​ಗಳನ್ನು ತಲುಪಿದ ಮೇಲೆ ಬಸ್​ ಅಥವಾ ಟ್ಯಾಕ್ಸಿಯನ್ನು ಬಾಡಿಗೆಗೆ ಪಡೆದು ದೇವಿಕುಲಂ ಗೆ ಪ್ರಯಾಣಿಸಬಹುದು.
    ಮಾರ್ಗಗಳ ಹುಡುಕಾಟ
  • ಆಕಾಶದ ಮೂಲಕ
    ಕೊಚ್ಚಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವು ದೇವಿಕುಲಂ ಪಟ್ಟಣದಿಂದ ಸುಮಾರು 150 ಕಿ.ಮೀ ದೂರದಲ್ಲಿದೆ. ಕೊಚ್ಚಿ ವಿಮಾನ ನಿಲ್ದಾಣವು ದೇಶದ ಇತರ ನಗರಗಳಾದ ಬೆಂಗಳೂರು, ಚೆನ್ನೈ, ಮುಂಬೈ ಮತ್ತು ದೆಹಲಿಯಿಂದ ಸಂಪರ್ಕವನ್ನು ಹೊಂದಿದೆ. ಪ್ರವಾಸಿಗರು ಪೂರ್ವಪಾವತಿ ಟ್ಯಾಕ್ಸಿಗಳನ್ನು ಬಾಡಿಗೆಗೆ ಪಡೆಯಬಹುದು. ಕಿ.ಮೀಗೆ 7 ರೂ.ನಿಂದ 12 ರೂ.ವರೆಗೆ ವಾಹನದ ವಿಧದ ಆಧಾರದ ಮೇಲೆ ಬದಲಾಗುತ್ತದೆ
    ಮಾರ್ಗಗಳ ಹುಡುಕಾಟ
One Way
Return
From (Departure City)
To (Destination City)
Depart On
07 Sep,Mon
Return On
08 Sep,Tue
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
07 Sep,Mon
Check Out
08 Sep,Tue
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
07 Sep,Mon
Return On
08 Sep,Tue